ಪೈಪೋಟಿ ನಡುವೆ ಟಿಕೆಟ್​ ಪಡೆದ ಆನಂದ ಗಡ್ಡದೇವರಮಠ, ಕ್ಷೇತ್ರದಲ್ಲಿ ಪುನರ್​ ಮಿಲನವಾಗುತ್ತಿರುವ ಜಾತಿ ಸಮೀಕರಣ

20240312_191242-COLLAGE
Published on

ಶಿವಾನಂದ ಹಿರೇಮಠ ಗದಗ
ಎಐಸಿಸಿ ಬಿಡುಗಡೆ ಮಾಡಿದ ಲೋಕಸಭೆ ಟಿಕೆಟ್​ ಮೊದಲ ಪಟ್ಟಿಯಲ್ಲಿ ಗದಗ - ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ವೀರಶೈವ ಲಿಂಗಾಯತ ಸಮುದಾಯದ ಅಬ್ಯಥಿರ್ಗೆ ಟಿಕೆಟ್​ ನೀಡುವುದರ ಮೂಲಕ ಜಾತಿ ಸಮೀಕರಣದ ಗಾಳ ಊರುಳಿಸಿದೆ. ಕಾಂಗ್ರೆಸ್​ ಟಿಕೆಟ್​ ಘೋಷಣೆ ಮಾಡುತ್ತಿದ್ದಂತೆ ಅಳೆದು ತೂಗಿ ಟಿಕೆಟ್​ ನೀಡುವ ಅನಿವಾರ್ಯತೆ ಬಿಜೆಪಿ ಪಾಳಯದಲ್ಲಿ ಸೃಷ್ಟಿಯಾಗಿದೆ. ಕ್ಷೇತ್ರದ ಅರಳಿಕಟ್ಟೆಗಳಲ್ಲಿ ಈಗಾಗಲೇ ಜಾತಿ ಸಮೀಕರಣದ ಲೆಕ್ಕಾಚಾರ ಶುರುವಾಗಿದೆ.
ಪೈಪೋಟಿ ನಡುವೆಯೂ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್​ ಸಿಗಲು ತಂದೆ ಜಿ.ಎಸ್​. ಗಡ್ಡದೇವರಮಠ ಮತ್ತು ಸಚಿವ ಎಚ್​.ಕೆ. ಪಾಟೀಲ ಪ್ರಭಾವವು ಮುಖ್ಯ ಕಾರಣ ಎಂಬುದು ಸತ್ಯ.
2008ರಲ್ಲಿ ಲೋಕಸಭಾ ಕ್ಷೇತ್ರ ಮರು ವಿಂಗಡಣೆ ನಂತರ ಬಿಜೆಪಿಯು ವೀರಶೈವ ಲಿಂಗಾಯತ ಸಮುದಾಯದ ಶಿವಕುಮಾರ ಉದಾಸಿ ಅವರಿಗೆ ಟಿಕೆಟ್​ ನೀಡಿತ್ತು ಮತ್ತು ನಿರಂತರ ಕ್ಷೇತ್ರವನ್ನು ತನ್ನ ತೆಕ್ಕೆಗೆ ಬಾಚಿಕೊಂಡಿತ್ತು. ಕಾಂಗ್ರೆಸ್​ ಪಕ್ಷವು 2009, 2014 ರಂದು ಮುಸ್ಲಿಂ ಸಮುದಾಯ ಮುಖಂಡ ಎರಡು ಬಾರಿ ಸಲೀಂ ಅಹಮ್ಮದ ಮತ್ತು 2019ರ ಚುನಾವಣೆಗೆ ರೆಡ್ಡಿ ಸಮುದಾಯದ(ವೇಮನ ರೆಡ್ಡಿ) ಮಾಜಿ ಶಾಸಕ ಡಿ.ಆರ್​. ಪಾಟೀಲರಿಗೆ ಟಿಕೆಟ್​ ನೀಡಿತ್ತು.
ಕಾಂಗ್ರೆಸ್​ ಟಿಕೆಟ್​ ಘೋಷಣೆ ಮಾಡುತ್ತಿದ್ದಂತೆ ಕ್ಷೇತ್ರದಲ್ಲಿ ಜಾತಿ ಮತ್ತು ಗೆಲುವಿನ ಸಮೀಕರಣ ಪುನರ್​ ಮಿಲನವಾಗುತ್ತಿದೆ. ಕ್ಷೇತ್ರದಲ್ಲಿ ಅಹಿಂದ್​ ಮತ್ತು ಲಿಂಗಾಯತ ಸಮುದಾಯ ಪ್ರಮುಖ ಒಳಪಂಗಡ ಜಂಗಮ ಸಮುದಾಯದ ಮತಬ್ಯಾಂಕ್​ ಲೆಕ್ಕಚಾರಗಳನ್ನು ಒಟ್ಟೊಟ್ಟಿಗೆ ತಾಳೆ ಹಾಕಲಾಗುತ್ತಿದೆ. ಈ ಸಮೀಕರಣ ಚುನಾವಣೆ ಸಂದರ್ಭದಲ್ಲಿ ಎಷ್ಟು ಲ ನೀಡುತ್ತದೆ ಎಂಬುದು ಮತದಾರನೇ ಬಲ್ಲ.

ಟಿಕೆಟ್​ ಸಿಕ್ಕಿದ್ದು ಹೇಗೆ?
ಕಳೆದ ಮೂರು ಚುನಾವಣೆಗಳಲ್ಲಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್​ ಈ ಬಾರಿ ಲಿಂಗಾಯತರಿಗೆ ಮಣೆ ಹಾಕಿದೆ. ಕಾಂಗ್ರೆಸ್​ ಹೈಕಮಾಂಡ್​ ವಲಯದಲ್ಲಿ ಸಚಿವ ಎಚ್​.ಕೆ. ಪಾಟೀಲ ಅಭ್ಯಥಿರ್ ಆಗಿಸುವ ಆಸಕ್ತಿ ಹೊಂದಲಾಗಿತ್ತು. ಆದರೆ, ಪಕ್ಷದ ಮತಬ್ಯಾಂಕ್​ ಜತೆಗೆ ಜಾತಿ ಲೆಕ್ಕಾಚಾರವನ್ನು ಅಲ್ಲಗಳೆಯುವಂತಿಲ್ಲ ಎಂಬ ಕಟು ಸತ್ಯ ಸ್ಥಳಿಯ ಕಾಂಗ್ರೆಸ್​ ಮುಖಂಡರಿಗೆ ಅರಿವಿಗೆ ಬಂದಿದೆ. ಕಳೆದ ಮೂರು ಚುನಾವಣೆ ಲಿತಾಂಶವೇ ಈ ಲೆಕ್ಕಾಚಾರಕ್ಕೆ ಕೈಗನ್ನಡಿಯಾಗಿದೆ. ಜತೆಗೆ ಸರ್ಕಾರದಲ್ಲಿ ಪ್ರಬಲ ಸ್ಥಾನ ಹೊಂದಿರುವ ಎಚ್​.ಕೆ. ಪಾಟೀಲ ಅವರು ಲೋಕಸಭೆ ಅಖಾಡವನ್ನು ಮೈಮೇಲೆ ಎಳೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಲಿಲ್ಲ. ಐ.ಜಿ. ಸನದಿ ಪುತ್ರ ಶಾಕೀರ್​ ಸನದಿ ಕೂಡ ಆಕಾಂಗಳಾಗಿದ್ದರು. ಆದರೆ, ಕಳೆದ ಎರಡೂ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್​ ನೀಡಿ ಕಾಂಗ್ರೆಸ್​ ಪ್ರಯೋಗ ಮಾಡಿದ್ದು, ಯಶ ಕಾಣಲಿಲ್ಲ. ಇನ್ನೂ, ಮಾಜಿ ಸಂಸದ ಮಂಜುನಾಥ ಕೊನ್ನೂರು ಟಿಕೆಟ್​ ಕೇಳಿದ್ದರು. ಯುವಕರಿಗೆ ಆಧ್ಯತೆ ಮತ್ತು ಹೈಕಮಾಂಡ್​ ಮೇಲೆ ಸ್ಥಳಿಯ ಮುಖಂಡರ ಪ್ರಬಾವ ಮತ್ತು ಒಲವು ಆನಂದಸ್ವಾಮಿ ಗಡ್ಡದೇವರ ಮಠ ಅವರ ಕಡೆ ವಾಲಿತ್ತು. ಹೀಗಾಗಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್​ ಲಭಿಸಿದೆ.

ವರ್ಚಸ್ಸು ಏನು?
ಆನಂದಸ್ವಾಮಿ ಗಡ್ಡದೇವರಮಠ ಅವರು ಮಾಜಿ ಶಾಸಕ ಜಿ.ಎಸ್​. ಗಡ್ಡದೇವರಮಠ ಅವರ ಪುತ್ರ. ಜಿ.ಎಸ್​. ಗಡ್ಡದೇವರಮಠ ಅವರು ರಾಜಕೀಯ ಕ್ಷೇತ್ರದಲ್ಲಿ ಅಜಾತ ಶತೃ. ಕ್ಷೇತ್ರದಲ್ಲಿ ಎಲ್ಲ ಪಕ್ಷದ ಮುಖಂಡರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಭ್ಯಥಿರ್ ಆನಂದಸ್ವಾಮಿ ಮೂಲತಃ ಲೆ$್ಮಶ್ವರ ಪಟ್ಟಣದವರಾದರೂ ಬೆಳಗಾವಿಯಲ್ಲಿ ರಾಜಕೀಯ ನೆಲೆಕಂಡುಕೊಂಡಿದ್ದರು.

ಬಿಜೆಪಿಯಲ್ಲಿ ಯಾರು?
ಕಾಂಗ್ರೆಸ್​ ಪಕ್ಷ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದ ನಂತರ ಬಿಜೆಪಿ ಕೂಡ ಪ್ರಬಲ ಅಭ್ಯಥಿರ್ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಮಾಜಿ ಸಿಎಂ ಜಗದೀಶ ಶೆಟ್ಟರ್​, ಬಸವರಾಜ ಬೊಮ್ಮಾಯಿ ಅವರಲ್ಲಿ ಒಬ್ಬರು ಬಿಜೆಪಿ ಅಭ್ಯಥಿರ್ ಆಗುವ ಲಕ್ಷಣ ಗೋಚರಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net