

ಗದಗ : ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ನಗರದ ಫೌಂಡೇಶನ್ ಫಿಲಿಪ್ಸ್ ಸಹಕಾರ ಸಂಸ್ಥೆ ವತಿಯಿಂದ ಹಾತಲಗೇರಿ ಗ್ರಾಮದಲ್ಲಿ ಮಾಹಿತಿ ಕಾರ್ಯಾಗಾರ ಹಾಗೂ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಾಗಾರದಲ್ಲಿ ಜನರಿಗೆ ಹೃದಯ ಆರೋಗ್ಯದ ಕುರಿತು ಮಾಹಿತಿಯನ್ನು, ಆಹಾರದ ಕ್ರಮದ ಬಗ್ಗೆ, ದೈನಂದಿನ ಜೀವನದ ಕ್ರಮದ ಕುರಿತು ವಿಷಯ ತಿಳಿಸಲಾಯಿತು. ಈ ಕಾರ್ಯಾಗಾರದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಮತ್ತು ಫೌಂಡೇಶನ್ ಸಂಸ್ಥೆಯ ಸಿಬ್ಬಂದಿಗಳು ಕಾರ್ಯಾಗಾರವನ್ನು ನಡೆಸಿದರು.