ವಿಶೇಷ ಚೇತನ ಮಕ್ಕಳೂ ಸಾಧಿಸಬಲ್ಲರು: ಪ್ರಭಯ್ಯನಮಠ

Published on

ವಿಜಯವಾಣಿ ಸುದ್ದಿಜಾಲ ಗದಗ

ವಿಶೇಷ ಅಗತ್ಯವುಳ್ಳ ವಿದ್ಯಾಥಿರ್ಗಳನ್ನು ಸಾಮಾನ್ಯ ಮಕ್ಕಳೊಂದಿಗೆ ಒಟ್ಟುಗೂಡಿಸಿ ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವಿಕೆಯನ್ನು ಸಕ್ರೀಯಗೊಳಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯಾಧಿಕಾರಿ ಎಸ್​. ಪಿ. ಪ್ರಭಯ್ಯನಮಠ ಹೇಳಿದರು.

ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಸರ್ಕಾರಿ ಶಾಲೆ ನಂ 2ರಲ್ಲಿ ಶುಕ್ರವಾರ ಜರುಗಿದ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಪೂರಕ ಪರಿಸರ ನಿಮಾರ್ಣ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶೇಷ ಚೇತನ ಮಕ್ಕಳು ಸಾಧಿಸಬಲ್ಲರು. ಅವರಿಗೆ ಸಹಾನುಭೂತಿ -ಅನುಕಂಪ ಬೇಡ. ಉತ್ತಮ ಪರಿಸರ, ಪ್ರೋತ್ಸಾಹ ದೊರೆತರೆ ಅವರೂ ಸಾಧನೆಯ ವ್ಯಕ್ತಿಗಳಾಗಿ ಸಮಾಜ ಗುರುತಿಸಿ ಗೌರವಿಸುವ ಚೇತನಗಳಾಗುತ್ತಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್​ ಅಧ್ಯಕ್ಷ ಡಾ. ರೇವಣಸಿದ್ದೇಶ್ವರ ಉಪ್ಪಿನ ಮಾತನಾಡಿ, ಅಂಗವಿಕಲತೆ ಶಾಪವಲ್ಲ. ಮಕ್ಕಳು ಆಟ-ಪಾಠದೊಂದಿಗೆ ಬಾಲ್ಯ ಕಳೆಯಬೇಕು. ವಿಶೇಷಚೇತನ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಚಟುವಟಿಕೆಗಳಲ್ಲಿ ನಿರಂತರ ಭಾಗವಹಿಸುವಂತೆ ನಾವೆಲ್ಲರೂ ಶ್ರಮಿಸಬೇಕು ಎಂದರು

ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ ವಿಶೇಷ ಚೇತನರಲ್ಲಿ ಕಂಡು ಬರುವ 21 ನ್ಯೂನ್ಯತೆಗಳನ್ನು ಗುರುತಿಸಿ ಅವುಗಳನ್ನು ವಗಿರ್ಕರಿಸಿ ವಿಶೇಷ ಮಗು ಸಾಮಾನ್ಯ ಮಗುವಿನೊಂದಿಗೆ ಸಾಮಾನ್ಯ ಶಾಲೆಯಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಂತೆ ನಾವು ಶ್ರಮಿಸಬೇಕು. ಸರ್ಕಾರದ ಯೋಜನೆಗಳನ್ನು ವಿದ್ಯಾಥಿರ್ಗಳಿಗೆ ತಲುಪಿಸಲಾಗಿದ್ದು ಅವುಗಳು ಸದುಪಯೋಗ ಆಗಲಿ ಎಂದರು.

ರೋಟರಿ ಕ್ಲಬ್​ ಕಾರ್ಯದಶಿರ್ ಸಂತೋಷ ಅಕ್ಕಿ, ಅಸಿಸ್ಟಂಟ್​ ಗವರ್ನರ್​ ಶಿವಾಚಾರ್ಯ ಹೊಸಳ್ಳಿಮಠ, ಅಕ್ಷಯ್​ ಶೆಟ್ಟಿ, ವಿ. ಎಸ್​. ಕಬ್ಬರಗಿ, ಎಸ್​. ವಿ. ಇಂದಿರಾ, ಪರಿಮಳಾ ಮಣ್ಣೂರ, ಕವಿತಾ ಹಾದಿ, ಮಹಾದೇವ ಸರವಿ, ಮಂಜುನಾಥ ಚಂದಾವರಿ, ಎಂ. ಎಂ. ಹಿಡ್ಕಿಮಠ, ಆರ್​. ಎಂ. ಅಂಗಡಿ, ವಿ. ಕೆ. ಪಾಟೀಲ, ಸಿ. ಎಫ್​.ನಾಗನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net