

ಲಕ್ಷ್ಮೇಶ್ವರ: ನಗರದ ಮೋರ್ ಸೂಪರ್ ಮಾರ್ಕೆಟ್, SSK ಸೂಪರ್ ಮಾರ್ಕೆಟ್, ಲೋಕಲ್ ಸೂಪರ ಮಾರ್ಕೆಟ್ ಸೇರಿ ಹಲವು ಅಂಗಡಿಗಳಿಗೆ 'ಹಲಾಲ್ ಪ್ರಮಾಣಿತ' ಉತ್ಪನ್ನಗಳನ್ನು ವ್ಯಾಪಾರ ಮಾಡದಂತೆ ಮನವಿ ನೀಡಲಾಯಿತು.
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ "ಹಲಾಲ್" ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಾ ಬಂದಿದೆ ಮತ್ತು ಹಿಂದೂ ವ್ಯಾಪಾರಿಗಳು ತಮ್ಮ ವ್ಯಾಪಾರ ಮುಂದುವರಿಸಲು "ಹಲಾಲ್ ಪ್ರಮಾಣಪತ್ರ" ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಮೊದಲು "ಹಲಾಲ್" ಎಂಬ ಪರಿಕಲ್ಪನೆ ಮಾಂಸಾಹಾರಿ ಉತ್ಪನ್ನಗಳು ಮತ್ತು ಮುಸ್ಲಿಂ ರಾಷ್ಟ್ರಗಳಿಗೆ ರಫ್ತು ಮಾಡುವ ವಸ್ತುಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಭಾರತದಲ್ಲೇ ಸಕ್ಕರೆ, ಎಣ್ಣೆ, ಹಿಟ್ಟು, ಚಾಕೋಲೇಟ್, ಮಿಠಾಯಿ, ಸೌಂದರ್ಯ ವಸ್ತುಗಳು, ಔಷಧಿಗಳು ಮುಂತಾದ ಹಲವಾರು ವಸ್ತುಗಳು "ಹಲಾಲ್ ಪ್ರಮಾಣಿತ" ಆಗಿವೆ. "ಹಲಾಲ್" ಪರಿಕಲ್ಪನೆ ಈಗ ಯುನಾನಿ ಮತ್ತು ಆಯುರ್ವೇದ ಔಷಧಿಗಳಿಗೂ ಆನ್ವಯಿಸಲಾಗಿದೆ. ಇಷ್ಟೇ ಅಲ್ಲ, ತುಳಸಿ ಸಾರ ಮತ್ತು ಚಹಾಗಳಿಗೂ "ಹಲಾಲ್ ಪ್ರಮಾಣಪತ್ರ" ನೀಡಲಾಗುತ್ತಿದೆ.
ಭಾರತ ಸರ್ಕಾರದ ಅಧಿಕೃತ ಆಹಾರ ಭದ್ರತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ಹಾಗೂ ಆಹಾರ ಮತ್ತು ಔಷಧಿ ಪ್ರಾಧಿಕಾರ (FDA) ಸಂಸ್ಥೆಗಳು ಉತ್ಪನ್ನಗಳನ್ನು ಪ್ರಮಾಣಿತಗೊಳಿಸುತ್ತಿರುವಾಗ, ಬೇರೆ ಧಾರ್ಮಿಕ "ಹಲಾಲ್ ಪ್ರಮಾಣಪತ್ರ" ಪಡೆಯುವ ಅಗತ್ಯವೇನು? ಇಂದು ಮ್ಯಾಕ್‌ಡೊನಾಲ್ಡ್, ಕೆಎಫ್‌ಸಿ, ಬರ್ಗರ್ ಕಿಂಗ್, ಪಿಜ್ಜಾ ಹಟ್ ಮುಂತಾದ ಕಂಪನಿಗಳು ಹಿಂದೂ, ಜೈನ, ಸಿಖ್ ಮೊದಲಾದ ಮುಸ್ಲಿಮೇತರ ಸಮುದಾಯಗಳಿಗೆ "ಹಲಾಲ್ ಪ್ರಮಾಣಿತ" ಆಹಾರ ಮಾರುತ್ತಿವೆ.
ಜಾತ್ಯಾತೀತ ರಾಷ್ಟ್ರದಲ್ಲಿ ಧಾರ್ಮಿಕ ಆಧಾರಿತ “ಹಲಾಲ್ ಪ್ರಮಾಣಪತ್ರ" ವ್ಯವಸ್ಥೆ ತಕ್ಷಣ ನಿಲ್ಲಿಸಬೇಕು; ಏಕೆಂದರೆ ಇದರಿಂದ ಬಂದ ಹಣವನ್ನು ಉಗ್ರಗಾಮಿಗಳಿಗೆ ಕಾನೂನು ಸಹಾಯ ನೀಡಲು ಬಳಸಲಾಗುತ್ತಿದೆ.
ಭಾರತೀಯ ಆರ್ಥಿಕತೆಯನ್ನು ಉಳಿಸಬೇಕಾದರೆ "ಹಲಾಲ್ ಶಕ್ತಿಗೆ ವಿರೋಧಿಸಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಧರ್ಮಪ್ರೇಮಿಗಳಾದ ಶ್ರೀ. ಶಿವಾನಂದ ಹುಲಕೋಟಿ, ಮುರುಗೇಶ ರುದ್ರಶೆಟ್ಟಿ,ಸೌಭಾಗ್ಯ, ರಮೇಶ ಗುಂಜಳ, ಮತ್ತು ಇತರರು ಉಪಸ್ಥಿತರಿದ್ದರು.