ಜಿಲ್ಲೆಯ ವಿವಿಧ ಭಾಗಗಳಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆತಂದಿದ್ದರು. ಕಣ್ಣು, ಮೂಗು, ಬಾಯಿ, ಕಿವಿ ಸೇರಿದಂತೆ ಇಡೀ ದೇಹದ ಸಂಕೀರ್ಣ ರಚನೆಗಳನ್ನು ಯುವ ವೈದ್ಯರು ವಿದ್ಯಾರ್ಥಿಗಳಿಗೆ ಸರಳವಾಗಿ ತಿಳಿಸಿಕೊಟ್ಟರು. ವೈದ್ಯರ ವಿವರಣೆಯನ್ನು ಮಕ್ಕಳು ಆಸಕ್ತಿಯಿಂದ ಕೇಳಿ, ತಿಳಿದುಕೊಂಡರು. ಕೆ. ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗನ ಘೋಷ ವಾಕ್ಯ 'ಸರ್ವಜನೋ ಅರೋಗ್ಯಂ ಭವತು' ಎಂಬುದಾಗಿದ್ದು, ಸರ್ವರೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಲು ತಿಳುವಳಿಕೆ ಮೂಡಿಸುವಲ್ಲಿ ಪ್ರದರ್ಶನ ಯಶಸ್ವಿಯಾಯಿತು. ಜನರಲ್ ಮೆಡಿಸನ್, ಮನೋವೈದ್ಯಕೀಯ, ಸರ್ಜರಿ, ಇಎನ್‌ಟಿ, ರಕ್ತ, ಕರಳು, ಕಿಡ್ನಿ, ಮೂಳೆ ಮತ್ತು ಎಲುಬು, ಅನಾಟಮಿ, ಪ್ರಸೂತಿ ಮತ್ತು ಹೆರಿಗೆ ಸೇರಿದಂತೆ ವೈದ್ಯಕೀಯ ವಿಜ್ಞಾನದಲ್ಲಿರುವ ಅಷ್ಟು ಶಾಖೆಗಳ ವಿವರಣೆ ನೀಡಲು ಪ್ರತ್ಯೇಕ ಸ್ಟಾಲ್‌ಗಳನ್ನು ನಿರ್ಮಿಸಲಾಗಿತ್ತು.