ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಗದಗ: ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸರ್ವೆಕೈಗೊಂಡು ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ನಗರದ ಎಸಿ ಕಚೇರಿ ಆವರಣದಲ್ಲಿ ಸೋಮವಾರ ಜರುಗಿದ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ತಮ್ಮಗೆ ನೇಮಿಸಿದ ಮನೆಗಳಿಗೆ ಹೋಗಿ ಸರ್ವೆ ಮಾಡಿ
ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿದರ ಬಗ್ಗೆ ಪರಿಶೀಲನೆ ಮಾಡಬೇಕು, ಗ್ಯಾರಂಟಿ ಯೋಜನೆಗಳು ಇನ್ನು ತಲುಪದಿದಲ್ಲಿ , ತಲುಪದೇ ಇರಲು ಕಾರಣವನ್ನು ಕಂಡು ಹಿಡಿದು ಪರಿಶೀಲಿಸಿ ಅದಕ್ಕೆ ಪರಿಹಾರವನ್ನು ಕಲ್ಪಿಸಿ ಅರ್ಹರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಅವರು ಹೇಳಿದರು.
ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜೊತೆಗೆ ಸಭೆ ನಡೆಸಬೇಕು. ಅನ್ನಭಾಗ್ಯದ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ಹಿಂದೆ ರೇಶನ್ ಕಾರ್ಡಗಳು ಇರದೇ ಇರುದಿರುವವರಿಗೆ ಗ್ಯಾರಂಟಿ ಯೋಜನೆಗಳು ತಲುಪಿದಿಲ್ಲ ಈಗ ರೇಶನ್ ಕಾರ್ಡಗಳನ್ನು ಪ್ರಾರಂಭಿಸಿದ್ದು ಅದರ ಕಾಲಾವಧಿಯನ್ನು ಜನರಿಗೆ ತಿಳಿಯುವಂತೆ ಜಾಗೃತೆ ವಹಿಸಬೇಕು ಸೂಚಿಸಿದರು.
ಇಲಾಖೆ ಅಧಿಕಾರಿಗಳು ಗ್ಯಾರಂಟಿ ಯೋಜನೆಯ ಪ್ರಗತಿಯ ಕುರಿತು ನಿಖರ ಮಾಹಿತಿ ಒದಗಿಸಬೇಕು. ವ್ಯಾಪಾರಕ್ಕಾಗಿ ಜಿಎಸ್ ಟಿ ಯನ್ನು ಪ್ರಾರಂಭಿಸಿ ನಂತರ ಅದನ್ನು ರದ್ದುಗೊಳಿಸಿದ್ದರೆ ಮಾತ್ರ ಗೃಹ ಲಕ್ಷ್ಮೀ ಯೋಜನೆ ಬರುತ್ತದೆ ಹಾಗಾಗಿ ಗದಗ ತಾಲೂಕಿನಲ್ಲಿ ಜಿ ಎಸ್ ಟಿ ಯಿಂದ ವಂಚಿತರಾದವರನ್ನು ಪತ್ತೆ ಹಚ್ಚಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಯುವ ನಿಧಿ ಯೋಜನೆಯ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅಶೋಕ ಮಂದಾಲಿ ತಿಳಿಸಿದರು.
ಗದಗ ತಾಲೂಕಿನಲ್ಲಿ 533 ಗೃಹಲಕ್ಷೀ ಯೋಜನೆಯ ಫಲಾನುಭವಿಗಳು ಮರಣ ಹೊಂದಿದ್ದು ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮರಣ ಪತ್ರ ತೆಗೆದುಕೊಂಡು ಅವರ ಹೆಸರನ್ನು ಕಡಿಮೆ ಮಾಡಬೇಕು ಎಂದರು.
ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಕೃಷ್ಣಗೌಡ ಎಚ್ ಪಾಟೀಲ ಅವರು ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಅಂಗನವಾಡಿ ಮೇಲ್ವಿಚಾರಕಿಯರು ( ಸುಪರ್ ವೈಸರ್ ) ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆ ಕರೆದು ಸರ್ವೆ ಕಾರ್ಯ ಚುರುಕುಗೊಳಿಸಬೇಕೆಂದು ತಿಳಿಸಿದರು.
ಪಂಚಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ರವರೆಗೆ ಗದಗ ತಾಲೂಕಿನಲ್ಲಿ 77823 ನೋಂದಣಿಯಾದ ಅರ್ಜಿಗಳ ಪೈಕಿ 76521 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. 76521 ಫಲಾನುಭವಿಗಳಿಗೆ ಡಿಬಿಡಿ ಮೂಲಕ ಹಣ ಪಾವತಿಸಲಾಗಿದೆ. ಶೇಕಡ 99.66 ಪ್ರಗತಿ ಸಾಧಿಸಿದೆ.
ಜಿಲ್ಲೆಯಲ್ಲಿ ವಾಕರಸಾಸಂಸ್ಥೆಯಿಂದ ಗದಗ ಘಟಕದಲ್ಲಿ 11-6-2023 ರಿಂದ ಇವರೆಗೆ 12578976 ಪುರುಷ ಪ್ರಯಾಣಿಕರು ಹಾಗೂ 17681952 ಮಹಿಳಾ ಪ್ರಯಾಣಿಕರು ಸೇರಿದಂತೆ ಒಟ್ಟಾರೆ 30260928 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಗದಗ ಘಟಕದಲ್ಲಿ 5193.21 ಲಕ್ಷ ರೂ. ಮಹಿಳಾ ಪ್ರಯಾಣಿಕರ ಆದಾಯವಾಗಿದೆ. ಬೆಟಗೇರಿ ಘಟಕದಲ್ಲಿ 3149.11 ಲಕ್ಷ ಮಹಿಳಾ ಪ್ರಯಾಣಿಕರ ಆದಾಯವಾಗಿದೆ.
ಅನ್ನಭಾಗ್ಯ ಯೋಜನೆಯಡಿ ಗದಗ ತಾಲೂಕಿನಲ್ಲಿ ಪಡಿತರ ಪ್ರದೇಶದಲ್ಲಿ 24,428 ಬಿಪಿಎಲ್ ಕಾರ್ಡುದಾರರಿಗೆ ಹಾಗೂ 46,057 ಬಿಪಿಎಲ್ ಕಾರ್ಡುದಾರರಿಗೆ 74,485 ಡಿ.ಬಿ.ಟಿ.ಮೂಲಕ ಹಣ ಸಂದಾಯ ಮಾಡಿದೆ. ಫಲಾನುಭವಿಗಳಿಗೆ 4,02,27,440 ರೂ.ಗಳನ್ನು ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆಯಡಿ ಗದಗ ಗ್ರಾಮೀಣ ಉಪವಿಭಾಗದಲ್ಲಿ 53268 ಸ್ಥಾವರಗಳು ಅರ್ಹವಿದ್ದು 52909 ಸ್ಥಾವರಗಳ ನೋಂದಣಿಯಾಗಿದ್ದು ಶೇ 99.33 ರಷ್ಟು ಪ್ರಗತಿಯಾಗಿದೆ. ಗದಗ ಶಹರ ಉಪವಿಭಾಗದಲ್ಲಿ 46483 ಸ್ಥಾವರಗಳು ಅರ್ಹವಾಗಿದ್ದು 46235 ಸ್ಥಾವರಗಳ ನೋಂದಣಿಯಾಗಿದ್ದು ಶೇ 99.47 ಪ್ರಗತಿಯಾಗಿದೆ.
ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ 1704 ಫಲಾನುಭವಿಗಳ ನೋಂದಣಿಯಾಗಿದ್ದು 826 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 24,57,000 ರೂ. ವರ್ಗಾವಣೆಯಾಗಿರುತ್ತದೆ ಎಂದು ಸಂಬAಧಿತ ಅಧಿಕಾರಿಗಳು ಮಾಹಿತಿ ಒದಗಿಸಿದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಸಂಗು ಕರಕಲಮಟ್ಟಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನಿತ ಅಧಿಕಾರಿಗಳು ಹಾಜರಿದ್ದರು.
ಜಿ ಎಸ್ ಟಿ. ಇರುವ ಕಾರಣದಿಂದ ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದವರು ಅರ್ಹರು ತಮ್ಮ ರೇಶನ್ ಕಾರ್ಡ, ಆಧಾರ ಮತ್ತು ಪ್ಯಾನ್ ಕಾರ್ಡಗಳೊಂದಿಗೆ ಎಸಿ ಕಚೇರಿ ಆವರಣದಲ್ಲಿರುವ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕಛೇರಿಗೆ ಸಂಪರ್ಕಿಸಿ ಗ್ಯಾರಂಟಿ ಯೊಜನೆಗಳ ಸೌಲಭ್ಯ ಪಡೆಯಬೇಕು.
-ಅಶೋಕ ಮಂದಾಲಿ, ಅಧ್ಯಕ್ಷರು,
ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ, ಗದಗ