ಬೆಳಗಾವಿ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕ ಪ್ರತಿಭಟನೆಗೆ ಸರ್ಕಾರ ಬೆಚ್ಚಿತ್ತು. ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಂದಲೇ ಪದವಿ, ಸ್ನಾತಕೋತ್ತರ ಕಾಲೇಜುಗಳು ನಡೆದಿವೆ. ನೇಮಕಾತಿ ವಿಷಯದಲ್ಲಿ ನೆಟ್, ಸೆಟ್ ಆದವರನ್ನು ಮಾತ್ರ ಪರಿಗಣಿಸಲಾಗಿದೆ. ಇನ್ನೂಳಿದ ಅತಿಥಿ ಶಿಕ್ಷಕರಿಗೆ ಕೌನ್ಸಲಿಂಗ್ ನಡೆಸಲು ಸರ್ಕಾರ ಪರಿಗಣಿಸುತ್ತಿಲ್ಲ. ಸರ್ಕಾರ ಪ್ರತ್ಯೇಕ ಕಾನೂನು ರಚಿಸಿ ನೇಮಕಾತಿಯಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ನೇಮಕಾತಿ, ಸೇವಾ ಭದ್ರತೆ ಅತಿಥಿ ಉಪನ್ಯಾಸಕರಿಗೂ ಸಿಗಬೇಕು ಎಂದರು.