

ಜಿಎಸ್ಟಿ ತಾಂತ್ರಿಕ ಕಾರಣದಿಂದ 59000ಕ್ಕೂ ಅಧಿಕ ಅರ್ಹರು ಗೃಹಲಕ್ಷಿ$್ಮ ಯೋಜನೆಯಿಂದ ವಂಚಿತ
ಕಪ್ಪು ಹಣ್ಣ ಸಕ್ರಮ ಗೊಳಿಸಲು ಮನೆ ಕೆಲಸದವರು, ಬವರ ಹೆಸರಲ್ಲಿ ಉದ್ಯಮಿಗಳ ಕಂಪನಿ ಆರಂಣ
ಜಿಎಸ್ಟಿ ವಂಚಿಸಲು ಉದ್ಯಮಿಗಳು ನಡೆಸುತ್ತಿರುವ ಕುತಂತ್ರ ಬಯಲು, ಬಡವರಿಗೆ ತೊಂದರೆ: ಎಚ್.ಕೆ. ಪಾಟೀಲ
ಶಿವಾನಂದ ಹಿರೇಮಠ, ಗದಗ
ಗೃಹ ಲಕ್ಷಿ$್ಮ ಯೋಜನೆಯಡಿ ನೋಂದಣಿಯಾದ ರಾಜ್ಯದ 59000ಕ್ಕೂ ಅಧಿಕ ಲಾನುಭಿಗಳು ಜಿಎಸ್ಟಿ ತಾಂತ್ರಿಕ ಕಾರಣದಿಂದಾಗಿ ರಾಜ್ಯ ಸರ್ಕಾರ ಮಹತ್ವಾಕಾಂ ಯೋಜನೆ ಗೃಹಲಕ್ಷಿ$್ಮಯಿಂದ ವಂಚಿತರಾಗಿರುವ ವರದಿ ಕುರಿತು ವಿಜಯವಾಣಿ ವರದಿ ಬಿತ್ತರಿಸಿತ್ತು. ಈ ಪ್ರಕರಣ ಗಂಭಿರವಾಗಿ ಪರಿಗಣಿಸಿರುವ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಕೇಂದ್ರ ಜಿಎಸ್ಟಿ ವಿಭಾಗದಕ್ಕೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದೆ. ಜತೆಗೆ ಸಮಸ್ಯೆಯ ಮೂಲ ತನಿಖೆ ನಡೆಸಿರುವ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಕ್ಕೆ ಹಲವು ವಿಷಯಗಳು ಗಮನಕ್ಕೆ ಬಂದಿದೆ. ಗೃಹಲಕ್ಷಿ$್ಮ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 59000 ಕ್ಕೂ ಅಧಿಕ ಅಜಿರ್ಗಳು ಬಾಕಿ ಉಳಿದಿವೆ. ಇದರಲ್ಲಿ 41000 ಕ್ಕೂ ಅಧಿಕ ಅಜಿರ್ಗಳು ತಪ್ಪೇ ಮಾಡದ ಅರ್ಹ ಅಜಿರ್ ದಾರರಿಗೆ ಸಂಕಷ್ಟ ತಂದೊಡ್ಡಿದೆ.
ಪ್ರಮುಖ ಸಮಸ್ಯೆ ಏನು?
ರಾಜ್ಯದ ಹಲವು ಮಧ್ಯಮ, ಸಣ್ಣ ಕೈಗಾರಿಕೆ ಉದ್ಯಮಿಗಳು ಜಿಎಸ್ಟಿ ವಂಚನೆ, ಕಪು ಹಣ ಸಕ್ರಮಗೊಳಿಸಲು ಮತ್ತು ಮತ್ತೀತರೆ ಸೌಲಭ್ಯ ಪಡೆಯುವ ಉದ್ದೇಶದಿಂದ ವಿಶ್ವಾಸಿಕ ಬಡವರ ಹೆಸರಲ್ಲಿ, ಮನೆ ಕೆಲಸದವರ ಹೆಸರಲ್ಲಿ ಕಂಪನಿಗಳನ್ನು ಆರಂಭಿಸಿದ್ದಾರೆ. ಬಡವರ ಹೆಸರಲ್ಲಿ ಕಂಪನಿಗಳಿದ್ದು, ಅವರ ಹೆಸರಲ್ಲಿ ಜಿಎಸ್ಟಿ ಪಾವತಿ ಮತ್ತು ಐಟಿ ರಿರ್ಟನ ಪೈಲ್ ಆಗುತ್ತಿವೆ. ಹೀಗಾಗಿ ಗೃಹ ಲಕ್ಷಿ$್ಮ ಯೋಜನೆಗೆ ಅಜಿರ್ ಸಲ್ಲಿಸಿದ ಸಂದರ್ಭದಲ್ಲಿ ಬಡವರು ಜಿಎಸ್ಟಿ ಪಾವತಿದಾರರು ಎಂದು ಸೂಚಿಸಿ ಅಜಿರ್ ತಿರಸತವಾಗುತ್ತಿವೆ. ಇದರಿಂದ ಕಳೆದ 2.5 ವರ್ಷದಲ್ಲಿ ಗೃಹ ಲಕ್ಷಿ$್ಮ ಯೋಜನೆಯಿಂದ ಬಡವರಿಗೆ ಸಿಗಬೇಕಾದ ಅಂದಾಜು 1 ಲಕ್ಷ ರೂ. ಸಿಗದಂತಾಗಿದೆ. ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ಆದಾಯ ತೆರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕಾರ ನೀಡಿದೆ. ಜತೆಗೆ ಕೇಂದ್ರ ಜಿಎಸ್ಟಿ ವಿಭಾಗಕ್ಕೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದೆ. ಕೇವಲ ಉದ್ಯಮದಾರರು ವಂಚಿಸುತ್ತಿರುವ ಪ್ರಕರಣಗಳಲ್ಲದೇ ಮತ್ತೀತರೆ ಕಾರಣಗಳಿಂದಲೂ ಜಿಎಸ್ಟಿ ತಾಂತ್ರಿಕ ತೊಂದರಗಳಿವೆ.
ಮತ್ತೀತರೆ ಕಾರಣಗಳೇನು?
ಬೆಳೆ ಸಾಲ ಹೊರತುಪಡಿಸಿ ವೈಯಕ್ತಿಕ ಸಾಲ, ವಾಹನ ಮೇಲಿನ ಸಾಲ, ತುರ್ತು ಸಾಲ ಸೇರಿದಂತೆ ನಾನಾ ಕಾರಣಗಳಿಗೆ ಪಡಿತರ ಚೀಟಿ ಹೊಂದಿದ ವ್ಯಕ್ತಿಯು ರಾಷ್ಟ್ರೀಕೃತ ಬ್ಯಾಂಕ್, ನೋಂದಾಯಿತ ೈನಾನ್ಸ ಮತ್ತು ಸ್ಥಳಿಯ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುತ್ತಾರೆ. ಸಾಲ ಪಡೆಯುವ ಸಂದರ್ಭದಲ್ಲಿ ಸಾಲಕ್ಕೆ ಜಿಎಸ್ಟಿ ಹಾಕಲಾಗುತ್ತದೆ ಮತ್ತು ಸಾಲ ಪಡೆದ ವ್ಯಕ್ತಿಯ ಪ್ಯಾನ್ ಕಾರ್ಡ್ ಜೋಡಣೆ ಮಾಡಲಾಗುತ್ತದೆ. ಹಾಗಾಗಿ ಸಾಲ ಪಡೆದ ಪಡಿತರ ಚೀಟಿ ಹೊಂದಿದವರು ಜಿಎಸ್ಟಿ ಪಾವತಿದಾರ ಆಗುತ್ತಿದ್ದಾರೆ. ಒಂದು ವೇಳೆ ಸಾಲ ಪಡೆಯುವ ವ್ಯಕ್ತಿಗೆ ಜಾಮೀನು ನೀಡಿದ್ದರೂ ಸಹ ಜಾಮೀನು ನೀಡಿರುವ ಪಡಿತರ ಚೀಟಿ ಹೊಂದಿದ ವ್ಯಕ್ತಿಯನ್ನೂ ಸಹ ಜಿಎಸ್ಟಿ ಪಾವತಿದಾರ ಪಟ್ಟಿಗೆ ಸೇರ್ಪಡೆ ಗೊಳಿಸಲಾಗುತ್ತದೆ. ತದ ನಂತರ ನ್ಯಾಯಬೆಲೆ ಅಂಗಡಿಯಲ್ಲಿ ಕೆವೈಸಿ ಮಾಡಿದ ಸಂದರ್ಭದಲ್ಲಿ ಪಡಿತರ ಚೀಟಿ ಹೊಂದಿದವರು ಜಿಎಸ್ಟಿ ಪಾವತಿದಾರ ಎಂದು ತಂತ್ರಾಂಶದಲ್ಲಿ ಬಿಂಬಿಸುತ್ತಿದೆ.
ವರ್ಷವಾದರೂ ಮುಗಿಯದ ಗೋಳು:
ಜಿಎಸ್ಟಿ ಸಮಸ್ಯೆ ಬೆಳಕಿಗೆ ಬಂದು ವರ್ಷವೇ ಕಳೆದರೂ ಇನ್ನೂ ಈ ಸಮಸ್ಯೆ ಬಗೆಹರಿದಿಲ್ಲ. ಕಳೆದ ಆ. 5, 2024ರಂದೇ ಸರ್ಕಾರ ಆದಾಯ ತೆರಿಗೆ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣಗಡ ಸೂಚಿಸಿದೆ. ಆದರೆ, ಜಿಎಸ್ಟಿ ಸಮಸ್ಯೆಯನ್ನು ಕೇಂದ್ರವೇ ಬಗೆಹರಿಸಬೇಕಾದ ಹಿನ್ನೆಲೆ ಸಮಸ್ಯೆ ಇನ್ನೂ ಜಟೀಲವಾಗುತ್ತ ಸಾಗಿದೆ. ದಿನದಿಂದ ದಿನಕ್ಕೇ ಅಜಿರ್ಗಳು ಬಾಕಿ ಉಳಿಯುವ ಸಂಖ್ಯೆ ದ್ವೀಗುಣವಾಗುತ್ತಿವೆ.
ಕೋಟ್:
ಕೆಲ ಉದ್ಯಮಿಗಳು ಕಪ್ಪುಹಣ ಸಕ್ರಮಗೊಳಿಸಲು ಅಡ್ಡದಾರಿ ಹಿಡಿದಿದ್ದಾರೆ. ಇದರಿಂದಾಗಿ ಬಡ ಜನರಿಗೆ ಗೃಹಲಕ್ಷಿ$್ಮಯೋಜನೆ ಆರಂಭ ಆದಾಗಿನಿಂದ ಸರ್ಕಾರಿಂದ ಸಿಗಬೇಕಾಗಿದ್ದ ಅಂದಾಜು ಲಕ್ಷಕ್ಕೂ ಅಧಿಕ ರೂ. ಸಿಗದಂತಾಗಿದೆ. ವಂಚನೆ ಮಾಡುತ್ತಿರುವವರನ್ನು ಕಾನೂನು ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗಿದೆ.
ಎಚ್.ಕೆ. ಪಾಟೀಲ, ಸಚಿವ