ರೈತ ಬಾಂಧವರ ಗಮನಕ್ಕೆ

download
Published on

ಗದಗ: 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಗದಗ ಜಿಲ್ಲೆಗೆ ಅವಶ್ಯವಿರುವ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ಹಾಗೂ ರಸಗೊಬ್ಬರದ ಪ್ರಮಾಣವನ್ನು ದಾಸ್ತಾನು ಮಾಡಲಾಗಿದ್ದು, ಬಿತ್ತನೆ ಬೀಜದ ಹಾಗೂ ರಸಗೊಬ್ಬರದ ಅಭಾವ ಇರುವುದಿಲ್ಲ. ಬೇಡಿಕೆಯನ್ವಯ 7918 ಕ್ವಿಂಟಲ್ ವಿವಿಧ ಬೆಳೆಗಳ ಬಿತ್ತನೆ ಬೀಜಗಳಿಗೆ ಬೇಡಿಕೆ ಸಲ್ಲಿಸಲಾಗಿರುತ್ತದೆ. ಈವರೆಗೆ 4194 ಕ್ವಿಂಟಲ್ ಪೂರೈಕೆಯಾಗಿರುತ್ತದೆ. ಇಲ್ಲಿಯವರೆಗೆ 2075 ಕ್ವಿಂಟಲ್ ವಿವಿಧ ಬೆಳೆಗಳ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳ ಮೂಲಕ ವಿತರಣೆಯಾಗಿದ್ದು, ಬೀಜ ವಿತರಣೆ ಪ್ರಗತಿಯಲ್ಲಿರುತ್ತದೆ. ಯಾವುದೇ ಬೆಳೆಯ ಬಿತ್ತನೆ ಬೀಜಗಳ ಅಭಾವ ಇರುವುದಿಲ್ಲ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 20280 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿರುತ್ತದೆ. ಪ್ರಸ್ತುತ 15938 ಮೆಟ್ರಿಕ್ ಟನ್ ವಿವಿಧ ಶ್ರೇಣಿಯ ರಸಗೊಬ್ಬರದ ದಾಸ್ತಾನು ಇರುತ್ತದೆ ಹಾಗೂ ರಸಗೊಬ್ಬರದ ಅಭಾವ ಇರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net