ಸರ್ಕಾರಿ ಶಾಲೆಗೆ ಬಣ್ಣ ದರ್ಪಣ: ಜೀವ ಕಳೆ - ಆರ್​.ಎಸ್​. ಬುರಡಿ

02GDG04
ಗದಗ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬಣ್ಣದರ್ಪಣ ಸೇವೆಗೆ ೇತ್ರ ಶಿಣಾಧಿಕಾರಿ ಆರ್​. ಎಸ್​. ಬುರಡಿ ಚಾಲನೆ ನೀಡಿದರು. ಬಸವರಾಜ ಧಾರವಾಡ, ಜಯಲಕ್ಷಿ$್ಮ ಅಣ್ಣಿಗೇರಿ, ಶಶಿಕಲಾ ಗುಳೆದವರ, ಸರ್ವಮಂಗಳ ಪತ್ತಾರ, ಮಂಜುಳಾ ಸಾಂಬ್ರಾಣಿ, ಎಸ್​. ಬಿ. ಗದ್ದನಗೇರಿ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತುಪಡೆದ ಸ್ಥಳಿಯ ಸಿದ್ಧಲಿಂಗನಗರದ ಸರ್ಕಾರಿ ಪ್ರೌಢಶಾಲೆಯ ಕಳೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಬಿಂಕದಕಟ್ಟಿ ಗ್ರಾಮದ ಪ್ರಗತಿಪರ ಕೃಷಿಕರು ಆಗಿರುವ ಬಸವರಡ್ಡಿ ಹುಚ್ಚಣ್ಣವರ ಪರಿವಾರದವರಿಂದ ಬಣ್ಣದರ್ಪಣ ಸೇವೆ ಸಲ್ಲಿಸುವ ಮೂಲಕ ಶಾಲೆಗೆ ಜೀವಕಳೆ ತುಂಬುತ್ತಿರುವ ಕಾರ್ಯ ಎಂದು ಆರ್​. ಎಸ್​. ಬುರಡಿ ಹೇಳಿದರು.
ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬಣ್ಣದರ್ಪಣ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇವಲ ಸರ್ಕಾರದಿಂದ ಶಾಲೆ ಅಭಿವೃದ್ಧಿ ಮಾಡುವುದು ಕಷ್ಟಸಾಧ್ಯ. ಸಮಾಜದ ದಾನಿಗಳಿಂದ ನೆರವು ಸಿಕ್ಕಾಗ ಶಾಲೆಯನ್ನು ಅಭಿವೃದ್ಧಿ ಪಡಿಸಬಹುದು. ಹಲವು ದಾನಿಗಳಿಂದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಶಾಲೆಯಾಗಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಮಕ್ಕಳ ಕಲಿಕೆಗೆ ಈ ಶಾಲೆ ಸಜ್ಜಾಗಿದ್ದು ಶಿಣ ಇಲಾಖೆಗೆ ಹೆಮ್ಮೆಯ ಸಂಗತಿ. ಸಮಾಜದಲ್ಲಿ ಕೊಡುವ ದಾನಿಗಳು ಸಾಕಷ್ಟಿದ್ದಾರೆ. ಕೇಳುವವರ ಮೇಲೆ ಅವಲಂಭಿತವಾಗಿರುತ್ತದೆ. ಅಂತಹ ಕೆಲಸದಲ್ಲಿ ಡಾ.ಬಸವರಾಜ ಧಾರವಾಡ ಅವರು ಮುಂಚೂಣಿಯಲ್ಲಿದ್ದಾರೆ ಎಂದರು.
ಡಾ.ಬಸವರಾಜ ಧಾರವಾಡ ಮಾತನಾಡಿ, ದಾನ ಧರ್ಮ ಮಾಡುವ ಮೂಲಕ ಸಮಾಜದಲ್ಲಿ ನಮ್ಮದೇ ಆದ ಅಳಿಲು ಸೇವೆಯನ್ನು ಸಲ್ಲಿಸಬೇಕು. ಆ ಮೂಲಕ ನೆಮ್ಮದಿ, ಶಾಂತಿಯನ್ನು ಕಾಣಲು ಸಾಧ್ಯ. ಅಂತಹ ಕೆಲಸದಲ್ಲಿ ಬಸವರಡ್ಡಿ ಹುಚ್ಚಣ್ಣವರ ಕುಟುಂಬ ತೊಡಗಿದ್ದು ಸ್ಮರಣೀಯ ಕೆಲಸ. ಇಲ್ಲಿ 500ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ಆ ಮಕ್ಕಳಿಗೆ ಒಂದು ಸುಂದರ ವಾತಾವರಣ ಕಲ್ಪಿಸಲು ಬಸವರಾಜ ಹೊರಟ್ಟಿಯವರು ಹಾಗೂ ಸಾಕಷ್ಟು ದಾನಿಗಳು ಕೈ ಜೋಡಿಸಿದ್ದಾರೆ ಎಂದರು.
ದಾನಿಗಳಾದ ಮನಿಷ ಬಸವರಡ್ಡಿ ಹುಚ್ಚಣ್ಣವರ ಮಾತನಾಡಿ, ನಮ್ಮ ಹಿರಿಯರು ನಮಗೆ ಹಾಕಿಕೊಟ್ಟ ಆದರ್ಶಗಳನ್ನು ಇಟ್ಟುಕೊಂಡು ನಮ್ಮ ಉದ್ಯಮದ ಜೊತೆಗೆ ಸಮಾಜ ಸೇವೆಯನ್ನು ಮಾಡುವ ಕೆಲಸದಿಂದ ನಮಗೆ ಸಾಕಷ್ಟು ತೃಪ್ತಿ ಹಾಗೂ ನೆಮ್ಮದಿ ಇದೆ. ಈ ನಮ್ಮ ಅಳಿಲು ಸೇವೆಯಿಂದ ಸಾವಿರಾರು ಮಕ್ಕಳಿಗೆ ಉಪಯುಕ್ತ ಆಗುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.
ಜಯಲಕ್ಷಿ$್ಮ ಅಣ್ಣಿಗೇರಿ, ಶಶಿಕಲಾ ಗುಳೆದವರ, ಸರ್ವಮಂಗಳ ಪತ್ತಾರ, ಮಂಜುಳಾ ಸಾಂಬ್ರಾಣಿ, ಎಸ್​. ಬಿ. ಗದ್ದನಗೇರಿ, ಜಿ. ಎನ್​. ಅಳವಂಡಿ, ಶಂಕ್ರಮ್ಮ ಹನಮಗೌಡರ, ಶಾರದಾ ಬಾಣದ, ಶೋಭಾ ಗಾಳಿ, ಎಸ್​ ಯು ಕುಷ್ಟಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net