ಅಕ್ರಮ ರಸಗೊಬ್ಬರ ಬೀಜ ದಾಸ್ತಾನು ಕಂಡರೆ ನಾವು ದಾಳಿ ಮಾಡುತ್ತೇವೆ : ವೆಂಕನಗೌಡ ಗೋವಿಂದಗೌಡ್ರ

VRG Photo
Published on

ಗದಗ: ಬರಗಾಲದಿಂದ ಕಂಗೆಟ್ಟ ರೈತ ಸಮುದಾಯಕ್ಕೆ ಈಗ ಮಳೆ ಆಗುತ್ತಿರುವುದರಿಂದ ಹೊಸ ಆಸೆ ಮೂಡಿಸಿದೆ, ರೈತರ ಮೊಗದಲ್ಲಿ ಮಂದಹಾಸ ತಂದಿದೆ. ಆದರೆ ರಾಜ್ಯದಲ್ಲಿ ಕಾಳು ಸಂತೆ ತಾಂಡವ ಆಡುತ್ತಿರುವುದರಿಂದ ರಸಗೊಬ್ಬರ ಹಾಗೂ ಬೀಜಗಳನ್ನು ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಕಾಳು ಸಂತೆಯಲ್ಲಿ ಅಧಿಕ ಬೆಲೆಗಳಿಗೆ ಮಾರಾಟ ಮಾಡುವ ಸಂಚನ್ನು ಕಾಳು ಸಂತೆ ಕೋರರು ರೂಪಿಸಿದ್ದಾರೆ. ಇದರ ಬಗ್ಗೆ ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತರಾಗಬೇಕು. ಪೋಲಿಸ್ ಇಲಾಖೆ, ಕೃಷಿ ಇಲಾಖೆ ಹಾಗೂ ತೆರಿಗೆ ಇಲಾಖೆಗಳು ಜಂಟಿಯಾಗಿ ಕೆಲಸ ಮಾಡಿ ರೈತರಿಗೆ ರಸಗೊಬ್ಬರ ಹಾಗೂ ಉತ್ತಮ ತಳಿಯ ಬೀಜಗಳನ್ನು ಯಾವುದೇ ಅಲಿದಾಟಕ್ಕೆ ಒಳಗಾಗದಂತೆ ದೊರೆಯುವಂತಹ ಕೆಲಸವಾಗಬೇಕು ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ. ಬರಗಾಲ ಬಿದ್ದರೂ ರೈತರ ನೆರವಿಗೆ ಬರದ ರಾಜ್ಯ ಸರ್ಕಾರ ರೈತರಿಗೆ ನರವು ಮಾಡುವುದು ಅನುಮಾನವಾಗಿದೆ. ರೈತರ ಬಗ್ಗೆ ಅಸೂಯ ತೋರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಜೆಡಿಎಸ್ ಪಕ್ಷದ ರಾಜ್ಯದ ವತ್ಥಾರ ವೆಂಕನಗೌಡ ಆರ್ ಗೋವಿಂದಗೌಡ್ರ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಬಲವಾಗಿ ಖಂಡಿಸಿದ್ದಾರೆ. ಅಧಿಕಾರಿಗಳ ಬೇಜ್ವಾಬ್ದಾರಿತನದಿಂದ ಎಲ್ಲಿಯಾದರೂ ರಸಗೊಬ್ಬರ ಹಾಗೂ ಬೀಜಗಳ ದಾಸ್ತಾನುಗಳು ಕಂಡು ಬಂದರೆ ನಮ್ಮ ಪಕ್ಷದ ಕಾರ್ಯಕರ್ತರು ದಾಳಿ ನಡೆಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಕಾಳು ಸಂತೆ ಕೋರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವರ್ಷ ಮಳೆಯ ಮುನ್ಸೂಚನೆ ಉತ್ತಮವಾಗಿದ್ದು ರೈತರ ಮನೋಬಲ ಹೆಚ್ಚಿಸುವಂತಿದೆ ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ರೈತರಿಗೆ ಎಲ್ಲ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟು ರಸಗೊಬ್ಬರ ಹಾಗೂ ಬೀಜಗಳು ಸರಳಿತವಾಗಿ ದೊರೆಯುವಂತೆ ಮಾಡಬೇಕು ಎಂದು ಗದಗ ಜಿಲ್ಲಾ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಸಂಶಿ, ಜಿಲ್ಲಾ ಅಧ್ಯಕ್ಷ ಜೋಸೆಫ ಉದೋಜಿ, ಜಿಲ್ಲಾ ಜೆಡಿಎಸ್ ವಕ್ತಾರ ಜೆ ಕೆ ಕೊಳ್ಳಿಮಠ, ತಾಲೂಕ ಅಧ್ಯಕ್ಷ ಬಸವರಾಜ ಅಪ್ಪಣ್ಣವರ, ಪ್ರಫುಲ್ ಪುನೀಕರ್ ಕೆ. ಎಫ್ ದೊಡ್ಮನಿ ಎಂ ಎಸ್ ಪರ್ತಗೌಡರ, ಡಾ. ಶರಣಪ್ಪ ಹೂಗಾರ್, ತಿಪ್ಪಣ್ಣ ಹುಡೆದ, ಸಿದ್ದಣ್ಣ ಕುರ್ತುಕೋಟಿ, ಲಿಂಗರಾಜ ಪ್ಯಾಟಿ, ವಿನಾಯಕ್ ಪರ್ವತ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net