

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ಗಳು ಉತ್ತಮ ಆದರ್ಶಗಳನ್ನು ರೂಢೀಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಚಿಂತಕಿ ಸುಜಾತಾ ಗುಡಿಮನಿ ಹೇಳಿದರು.
ಬೆಟಗೇರಿಯ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಥಿ ವಿದ್ಯಾಥಿರ್ನಿಯರಿಗೆ ಟೈ, ಬೆಲ್ಟಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾಥಿರ್ಗಳಿಗೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಸರ್ಕಾರ ವಿದ್ಯಾಥಿರ್ಗಳಿಗೆ ಸಮವಸ್ತ್ರ ನೀಡುತ್ತಿದೆ. ಸಮವಸ್ತ್ರದೊಂದಿದೆ ಪ್ರತಿದಿನ ಟೈ, ಬೆಲ್ಟಗಳನ್ನು ಧರಿಸಿ ಶಿಸ್ತಿನಿಂದ ಶಾಲೆಗೆ ಹೋಗಿ ಪರಿಶ್ರಮದಿಂದ ಅಭ್ಯಾಸ ಮಾಡಿ ಯಶಸ್ಸು ಸಾಧಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬೇಲೇರಿ ಮಾತನಾಡಿ, ಸರ್ಕಾರಿ ಶಾಲೆಗಳ ಸಬಲೀಕರಣ ಆಗಲು ಚಿಂತಕರ ಸಹಕಾರ ಅವಶ್ಯವಾಗಿದೆ. ಸುಜಾತಾ ಶರಣಬಸಪ್ಪ ಗುಡಿಮನಿ ಅವರು ಈ ಶಾಲೆಯ ಮಕ್ಕಳಿಗೆ ಟೈ ಬೆಲ್ಟಗಳನ್ನು ದೇಣಿಗೆಯಾಗಿ ನೀಡಿ ಶೈಣಿಕ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ ಎಂದರು.
ಅಧ್ಯತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಜವಳಿ ಮಾತನಾಡಿ, ಈ ಶಾಲೆಯು ಶತಮಾನ ಕಂಡ ಶಾಲೆಯಾಗಿದೆ. ಇದಕ್ಕೆ ದಾನಿಗಳ ಹಾಗೂ ಈ ಶಾಲೆಯ ಹಳೇ ವಿದ್ಯಾಥಿರ್ಗಳ ಸಹಾಯ ಸಹಕಾರ ಅವಶ್ಯವಾಗಿದೆ ಎಂದರು.
ಎಂ. ಎಚ್. ಇಚ್ಚಂಗಿ, ಎಸ್. ವಿ. ಕೇಸರಿ, ಜಿ. ಸಿ. ಜವಳಿ ಇತರರು ಇದ್ದರು.