Gadag: ನಗರದ ಡಾ. ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ 2025ನೇ ಸಾಲಿನ ಯುವ ಸೌರಭ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಸವರಾಜ್ ಬಳ್ಳಾರಿ ಅವರು ಮಾತನಾಡಿ ಯುವಕ ಯುವತಿರಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಒಂದು ಸೂಕ್ತವಾದ ವೇದಿಕೆ ಯುವ ಸೌರಭ ಇಂದು ಅದ್ದೂರಿಯಾಗಿ ನಮ್ಮ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಯುವಕ ಯುವತಿಯರು ಬಳಸಿಕೊಳ್ಳಬೇಕು ಹಾಗೆ ಕಲೆಯು ವ್ಯಕ್ತಿತ್ವ ವಿಕಸನ ಭಾವನಾತ್ಮಕ ಅಭಿವ್ಯಕ್ತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಜಾಗೃತಿ, ಮನರಂಜನೆ ಮತ್ತು ಮನೋವಿಜ್ಞಾನದ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ. ಇದು ವ್ಯಕ್ತಿಗಳ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಗಮನ, ಮತ್ತು ಸಹಯೋಗದಂತಹ ಕೌಶಲ್ಯಗಳನ್ನು ಬೆಳೆಸುತ್ತದೆ. ಇದಲ್ಲದೆ, ಕಲೆಯು ಮಾನವ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವೈಯಕ್ತಿಕ ಬೆಳವಣಿಗೆ ಮತ್ತು ಮಾನಸಿಕ ಆರೋಗ್ಯ ಸೃಜನಶೀಲತೆ ಮತ್ತು ಬುದ್ಧಿ ಮತ್ತೆ ಕಲೆ ಅಭ್ಯಾಸವು ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಗಮನ ಮತ್ತು ವಿಮರ್ಶಾತ್ಮಕ ತಾರ್ಕಿಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ, ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆಅಷ್ಟೇ ಅಲ್ಲದೆ ಇದು ಒತ್ತಡವನ್ನು ಕಡಿಮೆ ಮಾಡಲು, ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸಲು, ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ತಮ್ಮ ನುಡಿಗಳಲ್ಲಿ ಹಂಚಿಕೊಂಡರು.