ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ಅವಧಿ ವಿಸ್ತರಣೆ

12GDG01
Published on

ಗದಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಆವರ ನಿರಂತರ ಪ್ರಯತ್ನದಿಂದ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ.

15-01-2025ರ ಆದೇಶದ (ಕ್ರಸಂ 1ರಿಂದ 3) ವೇತನ, ವೇತನೇತರ, ಪ್ರಯಾಣ ಭತ್ಯೆ, ಮತ್ತಿತರ ಸಾದಿಲ್ವಾರು ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು 15-03-2025ರ ವರೆಗೆ ವಿಸ್ತರಿಸಿದೆ. (ಕ್ರಸಂ 5 ರಲ್ಲಿನ) ಕೇಂದ್ರ ಪುರಸ್ಕೃತ ಯೋಜನೆ, ಮತ್ತಿತರ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಅವಧಿಯನ್ನು 20-03-2025ಕ್ಕೆ ವಿಸ್ತರಿಸಿದೆ. ಹಬ್ಬದ ಮುಂಗಡ ಬಿಲ್ಲುಗಳನ್ನು 15 ದಿನಕ್ಕಿಂತ ಮುಂಚಿತವಾಗಿ ಪಾವತಿಸಲು ಅವಕಾಶವಿಲ್ಲದಿರುವುದರಿಂದ ಈ ಬಿಲ್ಲುಗಳಿಗೆ 18-03-2025ರ ವರೆಗೆ ಸಲ್ಲಿಸುವ ಅವಕಾಶವನ್ನು ನೀಡಿದೆ. ಈ ಅವಧಿ ವಿಸ್ತರಣೆಯ ಸದುಪಯೋಗ ಪಡೆಯುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಗದಗ ಜಿಲ್ಲಾ ಅಧ್ಯಕ್ಷ ರವಿ ಗುಂಜಿಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net