

ವಿಜಯವಾಣಿ ಸುದ್ದಿಜಾಲ ಗದಗ
ಅಸೋಸಿಯೇಶನ್ ಫಿಜಿಸಿಯನ್ಸ್ ಇಂಡಿಯಾ ಗದಗ ಶಾಖೆಯು ಜನಮುಖಿ, ಸಮಾಜಮುಖಿಯಾಗಿ ಕಾರ್ಯ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ ಎಂದು ಎಪಿಐ ಗದಗ ಶಾಖೆಯ ಅಧ್ಯ ಡಾ. ವಿ. ಎಸ್. ಹೊಸಮಠ ಹೇಳಿದರು.
ಜಿಮ್ಸ್ ಆಸ್ಪತ್ರೆಯ ಪ್ರಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಔಪಚಾರಿಕ ಸಮಾರಂಭದಲ್ಲಿ ಎಪಿಐ ಗದಗ ಶಾಖೆಯಿಂದ ಜಿಮ್ಸ್ ಆಸ್ಪತ್ರೆಯ ರೋಗಿಗಳ ಕುಳಿತುಕೊಳ್ಳಲು ಅವಶ್ಯವಿದ್ದ 13 ಮೆಟಲ್ ಬೆಂಚ್ಗಳನ್ನು ಜಿಮ್ಸ್ ಆಸ್ಪತ್ರೆಗೆ ವಿತರಿಸಿ ಅವರು ಮಾತನಾಡಿದರು.
ಜಿಮ್ಸ್ ಆಸ್ಪತ್ರೆಯ ಒಳರೋಗಿಗಳಿಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಒಳರೋಗಿಗಳ ಜೊತೆಗಾರರಿಗೆ ಬೇಸರ ಕಳೆಯಲು ದಿನಪತ್ರಿಕೆಗಳ, ಸಾಹಿತ್ಯಿಕ ಪುಸ್ತಕಗಳ ವ್ಯವಸ್ಥೆ ಮಾಡುವ ಕುರಿತು ಚಿಂತನೆ ನಡೆದಿದೆ. ಯೋಜನೆಯನ್ನು ಪರಿಣಾಮಕಾರಿ ಆಗಿ ನಿರ್ವಹಿಸಲು ಎಪಿಐ ಸಂಸ್ಥೆ ಶ್ರೀದಲ್ಲೇ ವೈದ್ಯೆ ಮಿತ್ರರೊಂದಿಗೆ ಚಚಿರ್ಸಿ ಅಂತಿಮ ಗೊಳಿಸಲಾಗುವುದು ಎಂದರು.
ಎಪಿಐ ಕಾರ್ಯದಶಿರ್ ಡಾ. ಪ್ರಕಾಶ ಹೊಸಮನಿ ಮಾತನಾಡಿ, ಎಪಿಐ ವೈದ್ಯೆ ಸದಸ್ಯರುಗಳು ಮಾನವೀಯತೆಗೆ ಸದಾವಕಾಲ ಸ್ಪಂದಿಸುವರು ಆಗಿದ್ದಾರೆ. ಎಲ್ಲವನ್ನೂ ಲಾಭದ ಉದ್ದೇಶದಿಂದ ಸೇವೆ ಮಾಡುವದಲ್ಲ. ಮನುಷತ್ವ ಮತ್ತು ಮಾನವೀಯತೆ ಇಟ್ಟುಕೊಂಡು ಸೇವೆ ಮಾಡಿ ಅದರಲ್ಲಿ ಸಂತೃಪ್ತ ಭಾವ ಹೊಂದುವದಾಗಿದೆ. ರೋಗಿಗಳು ವೈದ್ಯರನ್ನು ದೇವರೆಂದೇ ನಂಬಿದ್ದಾರೆ. ಅವರ ಭಾವನೆಗೆ ಸ್ಪಂದಿಸಿ ರೋಗಿಗಳೇ ನಮಗೆ ದೇವರೆಂದು ಸೇವೆ ಮಾಡಿಕೊಂಡು ಬಂದವರಾಗಿದ್ದಾರೆ. ಎಪಿಐ ಗದಗ ಶಾಖೆಯ ಜನಮುಖಿ ಕಾರ್ಯವನ್ನು ಮನಗಂಡು ಇತ್ತಿಚೆಗೆ ಮಂಡ್ಯದಲ್ಲಿ ನಡೆದ ರಾಜ್ಯ ಎಪಿಐ 41ನೇ ವಾಷಿರ್ಕ ಸಮ್ಮೇಳನದಲ್ಲಿ ಗದಗ ಶಾಖೆ ಅತ್ಯುನ್ನತ ಶಾಖೆ ಎಂಬ ಹೆಗ್ಗಳಿಕೆ ಪ್ರಶಸ್ತಿ ಪಡೆದಿದೆ ಎಂದು ತಿಳಿಸಿದರು.
ಡಾ. ರೇಖಾ ಸೋನೋವಾನೆ, ಡಾ. ರಾಜು, ಡಾ. ಜಗದೀಶ ಗಡ್ಡೇಪ್ಪನವರ, ಡಾ.ಕಿರಣ ಮೇಟಿ, ಡಾ. ವಿಶ್ವನಾಥ ದಂಡಿನ, ಡಾ. ಅರುಣ ಕರಿಗಾರ, ಡಾ. ರಾಮಕೃಷ್ಣ ಅರೇಯರ ಸೇರಿದಂತೆ ಇತರರು ಇದ್ದರು.