

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಕೆಎಲ್ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ ನಿಮಿತ್ಯ ಮಹಿಳಾ ಸಬಲೀಕರಣ ಮತ್ತು ಕಾಲೇಜು ಆಂತರಿ ಗುಣಮಟ್ಟ ಕೋಶದ ಆಶ್ರಯದಲ್ಲಿ ಶನಿವಾರ ಮಹಿಳೆಯರ ಉತ್ತಮ ಭವಿಷ್ಯಕ್ಕಾಗಿ ಆರೋಗ್ಯ ಮತ್ತು ಕಾನೂನಿನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆಸ್ಪತ್ರೆಯ ಹೆರಿಗೆ ಮತ್ತು ಪ್ರಸೂತಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ಶೃತಿ ಭಾವಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌಷ್ಟಿಕ ಆಹಾರದ ಮಹತ್ವ, ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ರೋಗದ ಲಣಗಳು ಅದಕ್ಕೆ ಸಂಬಂಧಿಸಿದ ಚಿಕಿತ್ಸೆಯ ಕುರಿತು ಮಹಿಳೆ ತಿಳಿಯಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ದೊರೆಯುವ ಉಚಿತ ಆರೋಗ್ಯ ಸೌಲಭ್ಯಗಳ ಮಾಹಿತಿ ಪಡೆಯಬೇಕು. ಹುಡುಗಿಯರು ತಾರುಣ್ಯಾವಸ್ಥೆಗೆ ಕಾಲಿಟ್ಟಾಗ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ತಿಳುವಳಿಕೆ ಮಹಿಳೆಯರು ಹೊಂದಿರಬೇಕು ಎಂದರು.
ವಕೀಲೆ ಸುಮಿತ್ರ ಶ್ರೀಗಿರಿ ಮಾತನಾಡಿ ೋಕ್ಸೋ ಕಾಯ್ದೆ, ವರದಣೆ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಯಂತ್ರಣ ಕಾಯ್ದೆ, ಪಿತ್ರಾಜಿರ್ತ ಆಸ್ತಿಯಲ್ಲಿನ ಹಕ್ಕು, ಕೌಟಂಬಿಕ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಮಹಿಳೆಯರಿಗೆ ನೀಡಲಾಗಿರುವ ಕಾನೂನುಗಳ ಬಗ್ಗೆ ಸವಿಸ್ತಾರವಾಗಿ ಮಾತನಡಿದರು.
ಪ್ರಾಚಾರ ಪಿ. ಜಿ. ಪಾಟೀಲ, ಲಕ್ಷಿ$್ಮ ಕಿಲ್ಲೆದಾರ, ಜಿ. ಕೆ. ರಮೇಶ, ಎಚ್. ಎಸ್. ಕೌಲಗಿ, ಆರ್. ಎಂ. ಬಡಿಗೇರ, ವಿಶ್ವನಾಥ ಜಿ., ಡಾ. ಕೃಷ್ಣ ವಿ, ಎ. ವಿ. ಹಿರೇಮಠ ಇತರರು ಇದ್ದರು.