

ವಿಜಯವಾಣಿ ವಿಶೇಷ ಗದಗ
ಚುನಾವಣಾ ಗುಂಗಿನಿಂದ ಇನ್ನೂ ಹೊರ ಬಾರದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಪಂ ಸದಸ್ಯರು ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳುತ್ತಿದ್ದಾರೆ. ಕಸ ವಿಲೇವಾರಿಯಲ್ಲೆ ಎಡುವುತ್ತಿರುವ ಸದಸ್ಯರು ಸಾರ್ವಜನಿಕ ಸೇವೆಯನ್ನು ಮರೆತಿದ್ದಾರೆ. ಇದರಿಂದ ಗದಗ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದೆ.
ನಗರದ ಜನ ದಟ್ಟಣಿ ಪ್ರದೇಶದಲ್ಲಿ ಜನರು ಮೂಗು ಮುಚ್ಚಿ ತಿರುಗಾಡುವ ಸ್ಥಿತಿ ಬಂದೊಂದಗಿದೆ. ಕೇವಲ ಸ್ಥಾಯಿ ಸಮಿತಿ ಅಧ್ಯಕ್ಷರು ಸ್ವಚ್ಚತೆಯ ಉಸ್ತುವಾರಿಗಳು, ನಮಗೆ ಅದರ ಹೊಣೆಯಿಲ್ಲ ಎಂದು ಇತರೆ ಸದಸ್ಯರ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ರಾಜಕಾಲುವೆ, ಒಳಚರಂಡಿಗಳು ಕಸದಿಂದ ತುಂಬಿ ತುಳುಕುತ್ತಿವೆ. ಪ್ರಮುಖ ವೃತ್ತಗಳಲ್ಲಿ ಕಸದರಾಶಿ ಕಾಣುತ್ತಿದೆ. ಸಾರ್ವಜನಿಕರ ದೂರುಗಳನ್ನು ಸಹ ಸ್ಥಳಿಯ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜಿಲ್ಲೆಯಾದ್ಯಂತ ಮುಂಗಾರು ಆರಂಭಗೊಂಡಿದೆ. ಮಳೆಯಿಂದ ಚರಂಡಿಯ ಕಸದ ರಾಶಿ ರಸ್ತೆಗೆ ತೂರಿ ಬೀಳುವ ದೃಶ್ಯ ಸಾಮಾನ್ಯ.
ಗದಗ ನಗರದಲ್ಲಿ ಪ್ರತಿ ದಿನ 75 ಟನ್ ಕಸದ ವಿಲೇವಾರಿ ಮಾಡಲಾಗುತ್ತಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಆದರೆ, ಪ್ರತಿನಿತ್ಯ 140 ಟನ್ ಗೂ ಅಧಿಕ ತ್ಯಾಜ್ಯ ಮನೆಯಿಂದ ಹೊರ ಬರುತ್ತದೆ. ಅಧಿಕಗೊಳ್ಳುತ್ತಿರುವ ನಗರೀಕರಣದಿಂದ ಖಾಸಗಿ ಮಾಲೀಕತ್ವದ ಜಮೀನುಗಳು ಕಸದ ಅಡ್ಡ ಆಗಿ ಮಾರ್ಪಟ್ಟಿವೆ. ತ್ಯಾಜ್ಯದ ನಿರ್ವಹಣೆಯಲ್ಲಿ ನಗರಸಭೆ ಗಂಭೀರ ಕಾರ್ಯ ಮಾಡಬೇಕಿದೆ.
16 ಟ್ರ್ಯಾಕ್ಟರ್, 33 ಟಾಟಾ ಎಸ್ ವಾಹನ್, 4 ಕಾಂಪ್ಯಾಕ್ಟ್ಗಳು, 242 ಸಿಬ್ಬಂದಿಗಳು, 133 ಸ್ವಸಹಾಯ ಗುಂಪುಗಳು, 61 ಜನ ಚಾಲಕರಿದ್ದು ಕೂಡ ಕಸದ ವಿಲೇವಾರಿ ಸಮರ್ಪಕ ನಡೆಯುತ್ತಿಲ್ಲ. ಕೇವಲ ಮನೆ ಮನೆ ಕಸ ಸಂಗ್ರಹಕ್ಕೆ ಒತ್ತು ನಿಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿನ ತ್ಯಾಜ್ಯ ಬಗ್ಗೆ ಮೀನಾ ಮೇಷ ಎನಿಸಲಾಗುತ್ತಿದೆ.
ಬಾರ್, ರಸ್ಟೊರೆಂಟ್ಗಳಿಂದ ಹಾನಿ:
ನಗರದಲ್ಲಿ ಬಾರ್, ರಸ್ಟೊರೆಂಟ್ಗಳಿಂದ ತ್ಯಾಜ್ಯ ಅಧಿಕಗೊಳ್ಳುತ್ತಿದೆ. ಚುನಾವಣಾ ಸಂದರ್ಭದಲ್ಲಿ ಮತ್ತು ಚುನಾವಣಾ ನಂತರ ಬಾರ್ ಮತ್ತು ರಸ್ಟೊರೆಂಟ್ಗಳಿಂದ ಅನಧಿಕೃತ ಚಟುವಟಿಕೆಗಳೇ ಅಧಿಕವಾಗಿದ್ದರಿಂದ ಸಾಮಾನ್ಯವಾಗಿ ತ್ಯಾಜ್ಯ ಅಧಿಕಗೊಳ್ಳುವುದು ಸಹಜ. ಆದರೆ, ಪೊಲೀಸ್ ಇಲಾಖೆ, ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿಗಳು ಬಾರ್ ರೆಸ್ಟೊರೆಮಟ್ಗಳ ಮೇಲೆ ನಿಯಂತ್ರಣ ಸಾಧಿಸಲು, ಮಾಲಿನ್ಯ ನಿಯಂತ್ರಣಕ್ಕೆ ವಿಲವಾಗಿವೆ. ಇಲಾಖೆಗಳೊಂದಿಗೆ ಬಾರ್ ಅಸೋಸಿತೇಷ್ ಕೈಜೋಡಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ನಗರದ ಅಂದಗೆಡುತ್ತಿದೆ ಎಂಬುದು ಜನರ ಮಾತು.
ಅಕ್ರಮ ದಾಬಾದಿಂದ ತ್ಯಾಜ್ಯ:
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಾಯಿ ಕೊಡೆಗಳಂತೆ ದಾಬಾಗಳು ಆರಂಭಗಿದ್ದು, ನಗರದ ಹೊರ ವರ್ತುಲವನ್ನು ಅಂದ ಗೆಡಿಸುತ್ತಿವೆ. ಪಾಲಾ ಬಾದಾಮಿ ರಸ್ತೆ, ರಿಂಗ್ ರೋಡ್, ಟಿಪ್ಪು ಸುಲ್ತಾನ ವೃತ್ತದ ಹೊರ ವರ್ತುಲ ರಸ್ತೆ, ನರಗುಂದ ರಸ್ತೆ ಪಕ್ಕದಲ್ಲಿ ಪರವಾನಿಗೆ ಇಲ್ಲದ ದಾಬಾಗಳು ಸಂಖ್ಯೆ ಅಧಿಕ. ನಗರಸಭೆ ಮತ್ತು ಪೊಲೀಸ್ ಇಲಾಖೆಗೆ ಈ ವಿಷಯಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಕೆ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ.
ಎಲ್ಲೆಲ್ಲಿ ಅಧಿಕತ್ಯಾಜ್ಯ?
ಕೋಟ್:
ನಮ್ಮಲ್ಲಿರುವ ಸಂಪನ್ಮೂಲ ಎಲ್ಲವನ್ನು ಬಳಸಿ ಸ್ವಚ್ಚತೆ ಆಧ್ಯತೆ ನೀಡಲಾಗುತ್ತಿದೆ. ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿ ಮಾರುಕಟ್ಟೆ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡುವಂತೆ ಸೂಚಿಸಲಾಗುವುದು.
- ಆನಂದ ಬದಿ
ನಗರಸಭೆ ಪರಿಸರ ವಿಭಾಗ ಅಧಿಕಾರಿ