ಅಖಿಲ ಭಾರತ ಗಾಣಿಗ ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪುಣ್ಯಸ್ಮರಣೋತ್ಸವ

07GDG01
Published on
ಗದಗ: ನಗರದ ಗಾಣಿಗ ಸಭಾಭವನದಲ್ಲಿ ಅಖಿಲ ಭಾರತ ಗಾಣಿಗ ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಎರಡನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಿತು. ಶ್ರೀ ಸಿದ್ದೇಶ್ವರ ಸ್ವಾಮೀಜಿ ಆವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು. ಅಖಿಲ ಭಾರತ ಗಾಣಿಗ ವಿದ್ಯಾವರ್ಧಕ ಟ್ರಸ್ಟ್ನ ಅಧ್ಯಕ್ಷ ಬಸವರಾಜ ಬಿಂಗಿ ಮಾತನಾಡಿ, ಅತ್ಯಂತ ಸರಳವಾಗಿ ಜೀವನ ನಡೆಸಿದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಎಲ್ಲ ಜಾತಿ, ಜನಾಂಗ, ಧರ್ಮದ ಭಕ್ತರ ಮನದಲ್ಲಿ ದೇವರಾಗಿ ನೆಲೆಸಿದ್ದಾರೆ ಎಂದು ಹೇಳಿದರು. ತಮ್ಮ ಸರಳಾತಿ ಸರಳ ಜೀವನ ಮತ್ತು ಅರ್ಥಪೂರ್ಣ ಬೋಧನೆಗಳ ಮೂಲಕವೇ ಜನಮನಗೆದ್ದಿದ್ದ ಶ್ರೀಗಳ ಒಂದೊAದು ಮಾತೂ ಮಾಣಿಕ್ಯದಂತಿದ್ದವು. ರಾಜಕೀಯ, ಸಂಘ-ಸAಸ್ಥೆ ಮತ್ತು ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದ ಅವರು, ಬಸವ ತತ್ವ ಅನುಯಾಯಿಗಳಾಗಿದ್ದರು. ಅವರು ಹುಟ್ಟಿದ, ನಡೆದಾಡಿದ ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು, ಭಾಗ್ಯವಂತರು ಎಂದು ಹೇಳಿದರು. ಟ್ರಸ್ಟ್ನ ಕಟ್ಟಡ ಸಮಿತಿ ಸದಸ್ಯ ಅಶೋಕ ಮಂದಾಲಿ ಮಾತನಾಡಿ. ನುಡಿದಂತೆ ನಡೆದ ಶ್ರೀ ಸಿದ್ದೇಶ್ವರ ಶ್ರೀಗಳು ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪ್ರವಚನದಿಂದ ಪ್ರೇರಣೆಗೊಂಡು ಆಧ್ಯಾತ್ಮಿಕತೆಯಡೆಗೆ ಸಾಗಿ ನಡೆದಾಡುವ ದೇವರೆನಿಸಿಕೊಂಡರು. ಪೂಜ್ಯರ ಕಾರ್ಯ, ಕೀರ್ತಿ, ಅಜರಾಮರ. ಅವರ ವಿಚಾರ ಜೀವನ ಶೈಲಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಿದ್ದೇಶ್ವರ ಶ್ರೀಗಳು ತೋರಿದ ನಿಸ್ವಾರ್ಥ ಸೇವೆ, ಸರಳ ಬದುಕನ್ನು ನಮ್ಮ ಬದುಕಲ್ಲಿ ಪ್ರಾಮಾಣಿಕವಾಗಿ ಅಳವಡಿಸಿಕೊಂಡರೆ ಸುಂದರ ಸಮಾಜದ ನಿರ್ಮಾಣ ಮಾಡಬಹುದು ಎಂದು ಹೇಳಿದರು. ಉಪಾಧ್ಯಕ್ಷ ಬಿ.ಬಿ. ಐನಾಪೂರ, ಸಹಕಾರ್ಯದರ್ಶಿ ಸುರೇಶ ಮರಳಪ್ಪನವರ, ಸದಸ್ಯರಾದ ಪಿ.ಎಂ ಕಿರೇಸೂರ, ಎಚ್.ಬಿ. ದೊಡ್ಡಗೌಡರ, ಪುಲಕೇಶಗೌಡ ಪಾಟೀಲ, ಬಸವರಾಜ ಗಾಳಪ್ಪನವರ, ಅಶೋಕ ಬೂದಿಹಾಳ ಪಿ.ಬಿ. ಚಳ್ಳಮರದ, ಎ.ಬಿ. ಬೂದಿಹಾಳ, ಬಿ.ಎಲ್. ಸಣ್ಣಗೌಡ್ರ, ತೋಟಪ್ಪ ಗಾಣಿಗೇರ, ಮಹೇಶ ಗಾಣಿಗೇರ, ಅಶೋಕ ಹಾದಿ, ಬಿ.ಎಸ್. ವಡವಟ್ಟಿ, ಪ್ರಭುರಾಜ ಬಿಂಗಿ, ಪ್ರಕಾಶ ಮುಧೋಳ, ಆರ್.ಎಂ. ಮಂದಾಲಿ, ಅನಿಲ ಅಬ್ಬಿಗೇರಿ, ಎ.ಎಸ್. ಗುಜಮಾಗಡಿ, ಬಿ.ವಿ. ಕಿರೇಸೂರ, ಎಸ್.ಕೆ. ಪಾಟೀಲ, ಜಗದೀಶ ಬೆಳವಟಗಿ, ಪ್ರಕಾಶ ಪತ್ತಾರ, ಹಾಲಪ್ಪ ಬಣವಿ, ಟಿ.ಎಂ. ಜಕ್ಕಣ್ಣವರ, ಮುತ್ತಣ್ಣ ಚಳ್ಳಮರದ, ಶಿವಪ್ಪ ಹಿಟ್ನಳ್ಳಿ,  ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net