ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್‌ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

IMG-20250615-WA0045
Published on
ಗದಗ: ಜಗತ್ತಿನಲ್ಲಿ ಯಾರು ಸಹ ಕದಿಯಲು ಸಾಧ್ಯವಾಗದ ಜ್ಞಾನ ಸಂಪತ್ತನ್ನು ಗಳಿಸಲು ಎಲ್ಲರೂ ಕಠಿಣ ಪರಿಶ್ರಮ ಪಡಬೇಕು ಎಂದು ಖ್ಯಾತ ಹೃದಯ ರೋಗ ತಜ್ಞರಾದ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಅವರು ಹೇಳಿದರು.
ಅವರು ನಗರದ ಗಾಣಿಗ ಭವನದಲ್ಲಿ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ (ರಿ) ಗದಗ ಇವರ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಉಚಿತ ಆರೋಗ್ಯ, ರಕ್ತದಾನ ಶಿಬಿರ, ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ನಿರಂತರ ಓದು ವ್ಯಕ್ತಿಯಲ್ಲಿ ಧೈರ್ಯಂ ನೀಡುತ್ತದೆ. ಆದ್ದರಿಂದ ಮಕ್ಕಳಿಗೆ ಓದಿನ ಬಗ್ಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು. ಓದು- ಓಟ ಮಕ್ಕಳಿಗೆ ಅತ್ಯಗತ್ಯವಾಗಿದೆ. ಓದು ಜ್ಞಾನ ಹೆಚ್ಚಿಸಿದರೆ ಓಟ ಶರೀರವನ್ನು ಸದೃಢವಾಗಿರಲು ಸಹಾಯಕವಾಗಿದೆ. ಶಿವ ಶಕ್ತಿ ಪಡೆದು ಗಾಣಿಗರು ಎಂದು ಭಯಭೀತರಾಗಿರಲು ಸಾಧ್ಯವಿಲ್ಲ. ವಿಧ್ಯೆ, ವಿನಯ ಇರುವ ವ್ಯಕ್ತಿಗೆ ಜಗತ್ತಿನ ಎಲ್ಲೆಡೆ ಸನ್ಮಾನ ಮತ್ತು ಗೌರವ ಸಿಗುತ್ತದೆ. ಇದಕ್ಕೆ ಉದಾಹರಣೆ ಎಂದರೆ ಜ್ಞಾನ ಸಾಗರದಂತಿದ್ದ ವಿಜಯಪುರದ ಸಿದ್ದೇಶ್ವರ ಶ್ರೀಗಳು, ಕಾಯಕ ಯೋಗಿ ಎಸ್.ಜಿ. ಬಾಳೆಕುಂದ್ರಿ, ಜಗತ್ ಪ್ರಸಿದ್ದರಾದ ನರೇಂದ್ರ ಮೋದಿ ಅವರು ನಮಗೆ ಆದರ್ಶರಾಗಬೇಕು. ಶಿಕ್ಷಣದಿಂದ ಯಾರೂ ಕೂಡಾ ವಂಚಿತರಾಗಬಾರದು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಸಮಾಜದ ಸತ್ಪ್ರಜೆಗಳಾಗಿ ರೂಪಿಸಿ. ಮಕ್ಕಳಿಗೆ ಸಮಾಜಮುಖಿ ಚಿಂತನೆ, ಸಮಯಪ್ರಜ್ಞೆ, ಶಿಸ್ತು, ಶ್ರದ್ದೆಯನ್ನು ಕಲಿಸಿ ಅವರನ್ನು ಸಮಾಜದ ಆಧಾರಸ್ತಂಭಗಳಾಗಿ ಮಾಡಿ ಎಂದು ಹೇಳಿದರು.
ಸಾನಿಧ್ಯ ವಹಿಸಿ ಆರ್ಶೀವರ್ಚನ ನೀಡಿದ ಬೇಲೂರ ಹಾಸನ ಮಠದ ಡಾ. ಮಹಾಂತ ಬಸವಲಿಂಗ ಸ್ವಾಮಿಜಿ ಭವಿಷ್ಯದ ಪ್ರಜೆಗಳಾದ ಮಕ್ಕಳೆ ಸಮಾಜದಲ್ಲಿ ಎಷ್ಟೇ ಸಾಧನೆ ಮಾಡಿ ಆದರೆ ತಂದೆ- ತಾಯಿಗಳ ಕಣ್ಣನಲ್ಲಿ ನೀರು ಬರದಂತೆ ನೋಡಿಕೊಂಡರೆ ಅದೇ ಎಲ್ಲಕ್ಕಿಂತ ಮಿಗಿಲಾದ ಸಾಧನೆ ಆಗಲಿದೆ ಎಂದರು.
ಸಮಾಜದ ಗಣ್ಯರಾದ ಅಶೋಕ ನವಲಗುಂದ ಅವರು ಮಾತನಾಡಿ, ಗಾಣಿಗ ಸಮಾಜ ಸಾಕಷ್ಟು ಕೊಡುಗೆ ನೀಡಿದೆ. ಈ ಸಮಾಜ ಸದೃಢವಾಗಲು ಗ್ರಾಮೀಣ ಭಾಗದ ಕಟ್ಟಡ ಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕು. ಉಳ್ಳವರು, ಹಿಂದುಳಿದವರ ನೆರವಿಗೆ ಧಾವಿಸಬೇಕು ಆಗ ಮಾತ್ರ ಗಾಣಿಗ ಸಮಾಜ ಉನ್ನತಮಟ್ಟಕ್ಕೆ ಏರಲಿದೆ. ಸದೃಢವಾದ ಸಂಘಟನೆಯನ್ನು ಕಟ್ಟಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಆದ್ದರಿಂದ ಸಮಾಜದ ನಾಯಕರಿಗೆ ಮತ್ತು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ಕೇಳಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಬಸವರಾಜ ಬಿಂಗಿ ಅವರು ಮಾತನಾಡಿ, ಕಳೆದ 8  ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದೇವೆ. ಇದೇ ಮೊದಲ ಸಾರಿ ಸಮಾಜದ ಸಾಧಕರಿಂದ ಉಪನ್ಯಾಸ ಕೊಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸವಾಗಿದೆ. ಇದರಿಂದ ಸಮಾಜದ ಮಕ್ಕಳಿಗೆ ಇದರಿಂದ ಪ್ರೇರಣಿ, ಪ್ರೋತ್ಸಾಹ ಕಾರಣವಾಗಲಿದೆ. ಮುಂದಿನ ದಿನಗಳಲ್ಲಿ ಇದೇ ಆವರಣದಲ್ಲಿ ಹಾಸ್ಟೆಲ್ ನಿರ್ಮಿಸಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಅನಕೂಲ ಕಲ್ಪಿಸಲಾಗುವುದು ಎಂದರು.
ದಶರಥ ಗಾಣಿಗೇರ, ಮಾಜಿ ಜಿಪಂ ಅಧ್ಯಕ್ಷರು ಮತ್ತು ಕಟ್ಟಡ ಸಮಿತಿ ಅಧ್ಯಕ್ಷರಾದ ನಿಂಗಪ್ಪ ಕೆಂಗಾರ, ಗಾಣಿಗ ಸಮಾಜದ ಕುರಿತು ಪಿ.ಎಚ್‌ಡಿ ಅಧ್ಯಯನ ಮಾಡಿರುವ ಮೇಘನಾ ಜಿ., ಮುರಘರಾಜೇಂದ್ರ ಬಡ್ನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೀದರನ ಸಿದ್ದರಾಮ ಮಠದ ಸಿದ್ದರಾಮ ಶ್ರೀಗಳು, ಗದಗ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗು ಸರಕಾರಿ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಶೋಕ ಮಂದಾಲಿ, ಸಾಹಿತಗಳಾದ ಟಿ.ಬಿ. ಕರದಾನಿ, ಯೋಗಸಾನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಚೈತ್ರ ಸೋಮನಗೌಡ್ರ, ನರಗುಂದ ಪುರಸಭೆ ಅಧ್ಯಕ್ಷರಾದ ನೀಲ್ಲವ್ವ ಪವಾಡಪ್ಪ ವಡ್ಡಿಗೇರಿ, ನರೇಗಲ್ಲ ಸರಕಾರಿ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಎನ್.ಎಂ. ಪವಾಡಿಗೌಡ್ರ, ಬೆಂಗಳೂರ ದೂರದರ್ಶನ ಕೇಂದ್ರದ ನಿವೃತ್ತ ಅಧಿಕಾರಿ ಹೊಳೆಯಪ್ಪಗೌಡ ಪಾಟೀಲ ಇತರರನ್ನು ಸನ್ಮಾನಿಸಲಾಯಿತು. 24-25 ನೇ ಶೈಕ್ಷಣಿಕ ಸಾಲಿನ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಶೋಕ ಮಂದಾಲಿ, ಷಣ್ಮುಖಪ್ಪ ಬಡ್ನಿ,  ಬಿ.ಬಿ. ಐನಾಪುರ, ಸುರೇಶ ಮರಳಪ್ಪನವರ, ಎಸ್.ವಿ. ಪವಾಡಿಗೌಡ್ರ, ಗಿರಿಯಪ್ಪ ಅಸೂಟಿ, ಗಂಗಾಧರ ಗಾಣೀಗೇರ, ರಮೇಶ ಮಂದಾಲಿ, ದಶರಥ ಗಾಣಿಗೇರ, ಬಸವರಾಜ ಸುಕಂದ, ಅಮರೇಶ ಹಾದಿ, ಶ್ರೀಕಾಂತ ಲಕ್ಕುಂಡಿ, ತೋಟಪ್ಪ ಗಾಣಿಗೇರ, ಐ.ಎಂ. ಕಿರೀಸೂರ, ಬಸವಂತಪ್ಪ ನವಲಳ್ಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net