ಗಂಗಾಪೂರ ಪೇಟೆಯ ದುರ್ಗಾದೇವಿ ಜಾತ್ರೆ ಜೂ. ಆರಂಭ 6 ರಿಂದ ಆರಂಭ : ಎಂ.ಎಸ್​.ಪಾಟೀಲ

durgadevi jatre
Published on


ಗದಗ:
ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗಂಗಾಪುರ ಪೇಟೆಯ ದುರ್ಗಾದೇವಿ ಜಾತ್ರಾ ಮಹೋತ್ಸವವು ಇದೇ ಜೂ. 6 ರಿಂದ ಜೂ. 13 ರವರೆಗೆ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಅಧ್ಯ ಎಂ.ಎಸ್​.ಪಾಟೀಲ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ವರ್ಷ ಕೋರೋನಾ ದಿಂದಾಗಿ ದುರ್ಗಾದೇವಿ ಜಾತ್ರೆಯನ್ನು ಮಾಡಲು ಸಾಧ್ಯವಾಗಲಿಲ್ಲ. ಈ ಬಾರಿ ಅದ್ದೂರಿಯಾಗಿ ನಮ್ಮೂರ ದೇವಿಯ ಜಾತ್ರೆಯನ್ನು ಸಂಭ್ರಮ ಸಡಗರದಿಂದ ಆಚರಿಸಲು ಎಲ್ಲರೂ ಉತ್ಸುಕರಾಗಿದ್ದಾವೆ ಎಂದು ಹೇಳಿದರು.
ಜೂ. 6 ರಂದು ಸಂಜೆ 5ಕ್ಕೆ ಕಳಸಾರೋಹಣ ಕಾರ್ಯಕ್ರಮ ಜರುಗುವುದು. ಜೂ.9 ರಂದು ಶುಕ್ರವಾರ ಊರ ದೇವರಿಗೆ ಉಡಿ ತುಂಬುವ ಕಾರ್ಯಕ್ರಮ ಜರಗುವುದು. ನೂರಾರು ಡೊಳ್ಳಿನ ಕಲಾತಂಡಗಳ ಜೊತೆಗೆ ಸಕಲ ಮಂಗಲವಾದ್ಯ ವೈಭವಗಳೊಂದಿಗೆ ನಗರದ ಪ್ರಮುಖ ದೇವಸ್ಥಾನಗಳಿಗೆ ಮೆರವಣಿಗೆ ಮೂಲಕ ತೆರಳಿ ಉಡಿ ತುಂಬಲಾಗುವುದು. ಜೂ. 10 ರಂದು ಶನಿವಾರ ಸಂಜೆ 6ಕ್ಕೆ ಮಹಾರಥೋತ್ಸವ ಸಂಭ್ರಮದಿಂದ ಜರುಗುವುದು. ಜೂ.11 ರಂದು ರವಿವಾರ ಸಂಜೆ 5.30 ಕ್ಕೆ ಲು ರಥೋತ್ಸವ ಜರುಗುವುದು. ಜೂ.12 ರಂದು ಸೋಮವಾರ ಮಧ್ಯಾಹ್ನ 12.20 ಗಂಟೆಗೆ ಅಭಿಜಿತ್​ ಲಗ್ನದ ಶುಭ ಮುಹೂರ್ತದಲ್ಲಿ ಸುಮಾರು 25 ಜೋಡಿಗಳ ಸಾಮೂಹಿಕ ವಿವಾಹಗಳು ಜರುಗುವದು. ನಂತರ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಾತ್ರಾ ಮಹೋತ್ಸವದ ಹಿರಿಯ ಸಲಹಾಸಮಿತಿಯ ಸದಸ್ಯರಾದ ಸಿದ್ದಣ್ಣ ಪಲ್ಲೇದ ಅವರು ಮಾತನಾಡಿ, ನಾಡಿನ ಹಲವಾರು ಜಾತ್ರೆಗಳಲ್ಲಿ ನಮ್ಮೂರಿನ ದುರ್ಗಾದೇವಿ ಜಾತ್ರೆಯೂ ಒಂದಾಗಿದೆ. ಪ್ರಮುಖವಾಗಿ ಡೊಳ್ಳಿನ ಜಾತ್ರೆ ಎಂದು ಕರೆಯಲ್ಪಪಡುವ ಈ ಜಾತ್ರೆಯಲ್ಲಿ ಜಿಲ್ಲೆಯಾದ್ಯಂತ ನೂರಕ್ಕೆ ಹೆಚ್ಚು ಗ್ರಾಮಗಳ ಡೊಳ್ಳಿನ ಕಲಾತಂಡಗಳು ಭಾಗವಹಿಸಲಿವೆ. ಅಲ್ಲದೆ, ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸತಿಕ, ಧಾಮಿರ್ಕ ಕಾರ್ಯಕ್ರಮ, ನಾಟಕ, ಕ್ರೀಡಾಸ್ಪರ್ಧೆ, ಮನರಂಜನೆ, ಆರೋಗ್ಯ ಶಿಬಿರ, ಯೋಗ ಶಿಬಿರ, ನೃತ್ಯ ಸಂಗಮ, ನಗೆ ಹಬ್ಬ, ಜನಪದ ಸಂಭ್ರಮ, ಮಹಿಳಾಗೋಷ್ಠಿ ಹಾಗೂ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದೆ ಎಂದರು.
ಬಸವರಾಜ ಹಿಕ್ಕಲಗುತ್ತಿ, ಸಂಜೀವ ಚವ್ಹಾಣ, ಯಮನಪ್ಪ ಗೋಂದಿ, ವೆಂಕಟೇಶ ಇಮರಾಪೂರ, ಕರಬಸಪ್ಪ ಮುದಕಟ್ಟಿ, ಸಹ ಖಜಾಂಚಿ ಮೋಹನ ಇಮರಾಪೂರ, ಮುತ್ತು ಜಡಿ, ಮಲ್ಲೇಶ ಕೊಣ್ಣೂರ, ದೇವರಾಜ ಕವಲೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net