ಜಿಲ್ಲೆಯಲ್ಲಿ ಗಂಗಾ ಕಲ್ಯಾಣಕ್ಕೆ ಕೊಕ್ಕೆ

06GDG01A
Published on

ಶಿವಾನಂದ ಹಿರೇಮಠ, ಗದಗ

ಗ್ಯಾರಂಟಿ ಯೋಜನೆ ನಿಭಾಹಿಸುವ ಸಲುವಾಗಿ ಜಿಲ್ಲೆಯಲ್ಲಿ ಅಂಬೇಡ್ಕರ ಅಭಿವೃದ್ಧಿ ನಿಗಮಕ್ಕೆ ಹಂಚಿಕೆ ಆಗಬೇಕಿದ್ದ ಅನುದಾನಕ್ಕೆ ರಾಜ್ಯ ಕಾಗ್ರೆಸ್​ ಸರ್ಕಾರ ಕತ್ತರಿ ಹಾಕಿದೆ. ಅದಲ್ಲದೇ ಜಾಂಬವ, ಬೋವಿ ಸಮಾಜ, ಮಹಷಿರ್ ವಾಲ್ಮೀಕಿ ನಿಗಮ ಸೇರಿದಂತೆ ಇತರೆ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿ ಚಟುವಟಿಕೆಗೆ ಬಲ ನೀಡುವ ಉದ್ದೇಶದಿಂದ ಜಾರಿ ಆಗಿರುವ ಗಂಗಾ ಕಲ್ಯಾಣ(ಕೊಳುವೆ ಬಾವಿ ಕೊರೆಸುವಿಕೆ) ಯೋಜನೆ ಅಧೋಗತಿ ಹಿಡಿದಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಯೋಜನೆಗಳನು ಪರಿರ್ಪೂಣವಾಗಿ ಸಿಗುತ್ತಿಲ್ಲ.

ಗಂಗಾ ಕಲ್ಯಾಣ ಯೋಜನೆ:

ಸರ್ಕಾರದ ಆಥಿರ್ಕ ಮುಗ್ಗಟ್ಟಿನಿಂದ ಗಂಗೆಯು ಪರಿಶಿಷ್ಠರಿಗೆ ಕಲ್ಯಾಣಿಸುತ್ತಿಲ್ಲ. 2023ರಿಂದ ಈಚೇಗೆ ಗದಗ ಜಿಲ್ಲೆಗೆ ಅಂಬೇಡ್ಕರ ಅಬಿವೃದ್ಧಿ ನಿಗಮದಡಿಯಲ್ಲಿ ವಾಷಿರ್ಕ ತಲಾ 5 ಕೊಳುವೆ ಬಾವಿ ಕೊರೆಸಲು ಸರ್ಕಾರ ಹಂಚಿಕೆ ಮಾಡಿದೆ. ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ 6 ತಾಲೂಕುಗಳಿದ್ದು, ತಾಲೂಕಿಗೆ ತಲಾ ಒಂದರಂತೆಯೂ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳಿಯ ಶಾಸಕರಿಗೆ ಲಾನುಭವಿ ಆಯ್ಕೆ ಕಗ್ಗಂಟಾಗಿದೆ. ಅದೇ ರೀತಿ ಆದಿ ಜಾಂಬ ಮತ್ತು ವಾಲ್ಮಕಿ ನಿಗಮದಲ್ಲೂ ಗಂಗಾ ಕಲ್ಯಾಣ ಹಂಚಿಕೆ ಗುರಿ ಗಣನೀಯವಾಗಿ ಇಳಿದಿದೆ. 2023ರಕ್ಕೂ ಮೊದಲು ಜಿಲ್ಲೆಗೆ ಸರಾಸರಿ 50ಕ್ಕೂ ಅಧಿಕ ಗುರಿ ಹಂಚಿಕೆ ಮಾಡಲಾಗಿತ್ತು.

ಅನುದಾನ ಕಡಿತ:

ಗಂಗಾ ಕಲ್ಯಾನ ಯೋಜನೆಯಂತೆ ಜಿಲ್ಲೆಯ ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಕಳೆದ ಸಾಲಿನಲ್ಲಿ ಮತ್ತು ಪ್ರಸಕ್ತ ಸಾಲಿನಲ್ಲಿ ಪಜಾ ಮತ್ತು ಪಪಂ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸ ಬೇಕಿದ್ದ ಅನುದಾನಕ್ಕೂ ಸರ್ಕಾರ ಕತ್ತರಿ ಹಾಕಿದೆ. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳಿಗೆ ಶೇ. 50 ರಿಂದ ಶೇ. 85ರ ವರೆಗೂ ಅನುದಾನ ಕಡಿತಗೊಳಿಸಲಾಗಿದೆ. ತಲಾ ಶೇ.50 ರಷ್ಟು ನೇರ ಸಾಲ ಮತ್ತು ಸಹಾಯದನ ರೂಪದಲ್ಲಿ 1 ಲಕ್ಷ ರೂ.ಗಳನ್ನು ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಯೋಜನೆಗೆ 2 ಲಕ್ಷ ಸಬ್ಸಿಡಿ, ದ್ವಿಚಕ್ರ ಉದ್ಯಮ ಶೀಲತಾ ಯೋಜನೆಗೆ 50 ಸಾವಿರ ರೂ. ಸಬ್ಸಿಡಿ, ಕೊಳವೆ ಬಾವಿ ಕೊರೆಸಲು ಗಂಗಾ ಕಲ್ಯಾಣ ಮತ್ತು ಭೂ ಒಡೆತನ ನೀಡುವ ಯೋಜನೆಗಳಿಗೆ ನಿಧಿರ್ಷ್ಟ ಗುರಿಗಳನ್ನು ರಾಜ್ಯ ಸರ್ಕಾರದಿಂದ ನಿಗದಿ ಪಡಿಸಲಾಗುತ್ತಿತ್ತು. ಆದರೆ, ಗ್ಯಾರಂಟಿ ಯೋಜನೆಗಳಿಗೆ ಅನುದಾನ ವಿನಿಯೋಗಿಸಬೇಕಿರುವ ಹಿನ್ನೆಲೆ ಕಳೆದ ಹಾಗೂ ಪ್ರಸಕ್ತ ಸಾಲಿನಲ್ಲಿ ನಿಗಮಕ್ಕೆ ನೀಡಿರುವ ಸಾಧನೆ ಗುರಿ ಬಾಗಶಃ ಕುಸಿದಿದೆ.

ಆಯ್ಕೆ ಕಗ್ಗಂಟು:

ಗಂಗಾ ಕಲ್ಯಾಣ ಹಾಗೂ ಇತರೆ ಯೋಜನೆಗಳಿಗೆ ತಾಲೂಕಿಗೆ ಒಬ್ಬರಂತೆ ಲಾನುಭವಿ ಆಯ್ಕೆ ಮಾಡಲು ಗುರಿ ನಿಗದಿ ಪಡಿಸಿದ್ದರಿಂದ ಲಾನುಭವಿಗಳನ್ನು ಆಯ್ಕೆ ವಿಷಯವು ಸ್ಥಳಿಯ ಶಾಸಕರಿಗೆ ಕಗ್ಗಂಟಾಗಿದೆ. ಯೋಜನೆಗಳ ಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ನಿಗಮಕ್ಕೆ ಈ ಮೊದಲು ಸಾಕಷ್ಟು ಅನುದಾನ ಹಂಚಿಕೆ ಆಗುತ್ತಿದ್ದ ಹಿನ್ನೆಲೆ, ನೂರಾರು ಲಾನುಭವಿಗಳ ಆಯ್ಕೆ ಸರಳವಾಗಿ ನಡೆಯುತ್ತಿತ್ತು. ಈಗ ಒಂದು ಅಥವಾ ಎರಡೂ ಲಾನುಭವಿಗಳ ಆಯ್ಕೆ ಮಾಡಬೇಕಾದ ಹಿನ್ನೆಲೆ ಸ್ಥಳಿಯ ಶಾಸಕರಿಗೂ ಆಯ್ಕೆ ಕಗ್ಗಂಟಾಗುತ್ತಿದೆ. ಕಾರ್ಯಕರ್ತರನ್ನು ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾರ್ಯಕರ್ತರಲ್ಲಿ ಅಸಮಧಾನವಿದೆ.

=====

ಅಂಬೇಡ್ಕರ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಹಂಚಿಕೆ

ವರ್ಷ & ಹಂಚಿಕೆ & ಸಾಧನೆ

2018/19 & 89 & 89

2019/20 & 23 & 23

2020/21 & 13 & 13

2021/22 & 20 & 16

2022/23 & 05 & 03

2023/24 & 02 & 02

======

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಹಂಚಿಕೆ

ವರ್ಷ & ಹಂಚಿಕೆ & ಸಾಧನೆ

2018/19 & 70 &70

2019/20 & 45 & 45

2020/21 & 54 & 54

2021/22 & 50 & 29

2022/23 & 08 &05

2023/24 & 13 & 00

= = ==

ಬೋವಿ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಹಂಚಿಕೆ

ವರ್ಷ & ಹಂಚಿಕೆ & ಸಾಧನೆ

2021/22 & 03 & 03

2022/23 & & 07 & 04

2023/24 & 04 & 01

=======

ಆದಿ ಜಾಂಬವ ನಿಗಮದಲ್ಲಿ ಗಂಗಾ ಕಲ್ಯಾಣ ಹಂಚಿಕೆ

ವರ್ಷ & ಹಂಚಿಕೆ & ಸಾಧನೆ

2021/22 & 39 & 33

2022/23 & 09 &07

2023/24 & 04 &03

=====

ಯೋಜನೆಗಳ ಅನುದಾನ ಹಂಚಿಕೆ(2022-23)

ಯೋಜನೆ ಹೆಸರು & ಲಾನುಭವಿ ಆಯ್ಕೆ ಗುರಿ & ಅನುದಾನ ಹಂಚಿಕೆ

ಸ್ವಯಂ ಉದ್ಯೋಗ ಯೋಜನೆ & 108 & 1.08 ಕೋಟಿ

ಗರಿಷ್ಠ 50 ಸಾವಿರ, ಉದ್ಯಮ ಶೀಲತಾ ಆಭಿವೃದ್ಧಿ & 320 & 2.24 ಕೋಟಿ

ಗರಿಷ್ಠ 2 ಲಕ್ಷ ವರೆಗಿನ ಉದ್ಯಮ ಶೀಲತಾ ಆಭಿವೃದ್ಧಿ & 37 & 74 ಲಕ್ಷ

ಗರಿಷ್ಠ 3.50 ಲಕ್ಷ ವರೆಗಿನ ಉದ್ಯಮ ಶೀಲತಾ ಆಭಿವೃದ್ಧಿ & 25 & 87.50 ಲಕ್ಷ

ಮೈಕ್ರೋ ಕ್ರೆಡಿಟ್​ ಯೋಜನೆ & 320 & 80 ಲಕ್ಷ

=========

ಯೋಜನೆಗಳ ಅನುದಾನ ಹಂಚಿಕೆ(2023&24)

ಯೋಜನೆ ಹೆಸರು & ಲಾನುಭವಿ ಆಯ್ಕೆ ಗುರಿ & ಅನುದಾನ ಹಂಚಿಕೆ

ಸ್ವಯಂ ಉದ್ಯೋಗ ಯೋಜನೆ & 42 & 42 ಲಕ್ಷ

ಗರಿಷ್ಠ 1 ಲಕ್ಷ ವರೆಗಿನ ಉದ್ಯಮ ಶೀಲತಾ ಆಭಿವೃದ್ಧಿ & 18 & 18 ಲಕ್ಷ

ಗರಿಷ್ಠ 2 ಲಕ್ಷ ವರೆಗಿನ ಉದ್ಯಮ ಶೀಲತಾ ಆಭಿವೃದ್ಧಿ & 12 & 24 ಲಕ್ಷ

ಗರಿಷ್ಠ 4 ಲಕ್ಷ , ಉದ್ಯಮ ಶೀಲತಾ ಆಭಿವೃದ್ಧಿ & 16 & 64 ಲಕ್ಷ

ಮೈಕ್ರೋ ಕ್ರೆಡಿಟ್​ ಯೋಜನೆ & 150 & 37.50 ಲಕ್ಷ

=============

ಕೋಟ್​:

ವಾಲ್ಮೀಕ ನಿಗಮದ ಹಗರಣ, ಸಾವಿರಾರು ಕೋಟಿ ಎಸ್ಸಿ ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆ ವರ್ಗಾವಣೆ ಪ್ರಕರಣ ನಂತರ ಈಗ ಪರಿಶಿಷ್ಟರಿಗೆ ಸಿಗಬೇಕಿದ್ದ ಗಂಗಾ ಗಲ್ಯಾಣಕ್ಕೂ ಕಾಂಗ್ರೆಸ್​ ಸರ್ಕಾರ ಕೊಕ್ಕೆ ಹಾಕಿದೆ. ಇದರಿಂದ ಕೇವಲ ಮತಬ್ಯಾಂಕ್​ ಗಾಗಿ ಮಾತ್ರ ಕಾಂಗ್ರೆಸ್​ ಸರ್ಕಾರ ಪರಿಶಿಷ್ಠರ ಒಲೈಕೆ ಮಾಡುತ್ತದೆ ಎಂಬುದು ಸಾಬೀತಾಗುತ್ತದೆ.

ಸಿ.ಸಿ. ಪಾಟೀಲ, ಶಾಸಕ

ಕೋಟ್​:

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಸರಾಸರಿ 50 ರಿಂದ 150ರ ವರೆಗೆ ಗಂಗಾ ಕಲ್ಯಾಣ ಯೋಜನೆ ಅಡಿ ಹಿಂದುಳಿದ, ಪರಿಶಿಷ್ಠ ಸಮುದಾಯಕ್ಕೆ ಕೊಳವೆ ಬಾವಿ ಕೊರೆಸಿಕೊಳ್ಳಲು ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಪ್ರತಿ ಜಿಲ್ಲೆಗೆ ಐದರಿಂದ ಆರು ಬಾವಿ ಕೊರೆಸಿಕೊಳ್ಳಲು ಹಂಚಿಕೆ ಮಾಡಲಾಗಿದೆ. ಈ ಹಂಚಿಕೆ ಕಾಮಗಾರಿಗಳು ಕೆಲವಡೆ ಪರಿರ್ಪೂಣವಾಗಿಲ್ಲ. ಎಸ್ಸಿ ಎಸ್ಟಿ ವಿರೊಧಿ ಕಾಂಗ್ರೆಸ್​ ಸರ್ಕಾರ ಎಂಬುದು ಜನರು ಅರ್ಥಮಾಡಿಕೊಂಡಿದ್ದಾರೆ.

  ಮಂಜು ಮುಳಗುಂದ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net