

ಗದಗ: ನಗರದ ಸಾರ್ವಜನಿಕ ಗಜಾನನ ಮಹಾಮಂಡಳಿ ವತಿಯಿಂದ ನಗರದ ಪಂಚಾರ್ಯ ಮಾಂಗಲ್ಯ ಮಂದಿರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆ ಜರುಗಿತು. ಸಾರ್ವಜನಿಕ ಗಜಾನನ ಮಹಾಮಂಡಳಿಯ ಅಧ್ಯಕ್ಷರಾದ ರಾಜಣ್ಣ ಮಲ್ಲಾಡದ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸಭೆಯ ಉದ್ದೇಶಿಸಿ ಮಾತನಾಡಿದ ಅವರು ೨೦೨೪ನೇ ಸಾಲಿನ ಗಣೇಶ ಚತುರ್ಥಿಯನ್ನು ಗದಗ್ ಬೆಟಗೇರಿ ಅವಳಿ ನಗರದಲ್ಲಿ ಪ್ರತಿಷ್ಠಾಪನೆ ಮಾಡುವಂತಹ ಮಂಡಳಿಯವರು ಒಗ್ಗಟ್ಟಿನಲ್ಲಿ ವಿಜೃಂಭಣೆಯಿoದ ಆಚರಣೆ ಮಾಡುವಂತೆ ಮಾಡಬೇಕು ಎಲ್ಲಾ ಗಣೇಶ ಮಂಡಳಿಯವರು ೯ ದಿನಕ್ಕೆ ಗಣೇಶ ವಿಸರ್ಜನೆಯನ್ನು ಹಮ್ಮಿಕೊಳ್ಳಬೇಕು ಎಲ್ಲರೂ ಒಗ್ಗಟ್ಟಿನೊಂದಿಗೆ ಮೆರವಣಿಗೆಯೊಂದಿಗೆ ಸಡಗರ ಸಂಭ್ರಮದಿAದ ಹಬ್ಬವನ್ನು ಆಚರಿಸೋಣ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿoದ ಆಚರಣೆ ಮಾಡುವಂತೆ ಕರೆ ನೀಡಿದರು
ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಅನಿಲ್ ಅಬ್ಬಿಗೇರಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶನ ಹಬ್ಬವನ್ನು ವಿಜೃಂಭಣೆಯಿoದ ಜರುಗುವಂತೆ ಎಲ್ಲ ಗಣೇಶ ಮಂಡಳಿಗಳಿಗೆ ಗಜಾನನ ಮಹಾಮಂಡಳಿ ಜೊತೆಗೆ ಕೈಜೋಡಿಸಬೇಕು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಗಣೇಶ ಮಂಡಳಿಗಳಿಗೆ ಅನುಮತಿ ಕೊಡುವ ಕಾರ್ಯ ತ್ವರಿತವಾಗಿ ನಡೆಯಬೇಕೆಂದು ವಿಶೇಷವಾಗಿ ಗಜಾನನ ಮಹಾಮಂಡಳಿ ಗದಗ್ ಬೆಟಗೇರಿ ಎಲ್ಲ ಸಾರ್ವಜನಿಕ ಗಣಪತಿಗಳು ೯ನೇ ದಿನದಂದು ವಿಸರ್ಜನೆ ಆಗಬೇಕೆಂದು ನಿರ್ಣಯವನ್ನು ಕೈಗೊಳ್ಳಲಾಯಿತು ಹಬ್ಬದ ಪ್ರಯುಕ್ತ ಎಲ್ಲ ಪದಾಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಸನ್ನದ್ಧರಾಗಿದ್ದಾರೆಂದು ತಿಳಿಸಿದರು.
ಗಣೇಶನ ವಿಸರ್ಜನೆಯ ೯ ದಿನದಂದು ಗಜಾನನ ತರುಣ ವ್ಯಾಪಾರಸ್ಥರ ಸಂಘದಿAದ ರಾತ್ರಿಯಲ್ಲಿ ಪ್ರಸಾದದ ವ್ಯವಸ್ಥೆ ಇರುತ್ತದೆ ಆದರಿಂದ ಗದಗ್ ಬೆಟಗೇರಿ ಅವಳಿ ನಗರದ ಎಲ್ಲಾ ಗಜಾನನ ಮಂಡಳಿ ಸಂಘದವರು ಹಾಗೂ ಸಾರ್ವಜನಿಕರು ಪ್ರಸಾದವನ್ನು ಸ್ವೀಕರಿಸಲು ಆಗಮಿಸಬೇಕೆಂದು
ಪತ್ರಿಕಾ ಪ್ರಕಟಣೆಯ ಮೂಲಕ ಅಜ್ಜಣ್ಣ ಮಲ್ಲಾಡದ ಅವರು ಹೇಳಿದ್ದಾರೆ
ಸಭೆಯಲ್ಲಿ ಅಜ್ಜಣ್ಣ ಮಲ್ಲಾಡದ, ಅನಿಲ್ ಅಬ್ಬಿಗೇರಿ,ರಾಜು ಖಾನಪ್ಪನವರ, ರಾಜಣ್ಣ ಮುಧೋಳ್, ಮಂಜಣ್ಣ ಬೆಲೇರಿ, ವಾಸು ಜೋಗಿನ್, ರಾಘು ಹಬೀಬ್, ಶಂಕರ ಮುಳುಗುಂದ, ಕಿಶನ್ ಮೆರವಾಡೆ, ಸೇರಿದಂತೆ ಸಂಘದ ಪದಾಧಿಕಾರಿಗಳು ಗದಗ್ ಬೆಟಗೇರಿ ಅವಳಿ ನಗರದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮಂಡಳಿಯವರು ಗುರುಹಿರಿಯರು ಹಿತೈಷಿಗಳು ಉಪಸ್ಥಿತರಿದ್ದರು