ಸರ್ವಾಧಿಕಾರಿ ನಡೆ ಅನುಸರಿಸುತ್ತಿರುವ ಪ್ರಿಯಾಂಕ್‌ ಖರ್ಗೆ : ವಿಜಯಕುಮಾರ ಗಡ್ಡಿ

unnamed (1)
Published on
ಗದಗ : ಆರ್.ಎಸ್.‌ಎಸ್‌ ನಿಷೇಧದ ಕುರಿತು ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆಯುವ ಮೂಲಕ ತಮ್ಮ ಹಿಂದೂ ವಿರೋಧಿ ಮನಸ್ಥಿತಿಯನ್ನು ಸಾಬೀತುಪಡಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ ಸರ್ವಾಧಿಕಾರಿ ನಡೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯ ಆರಂಭಿಕ ತೊಡಕುಗಳು ಹಾಗೂ ಗ್ಯಾರಂಟಿಗಳ ಆಮಿಷದಿಂದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಈಗ ತನ್ನ ಅಧಿಕಾರವನ್ನು ಮನಬಂದಂತೆ ಚಲಾಯಿಸುತ್ತಿದೆ. ಪ್ರಿಯಾಂಕ್‌ ಖರ್ಗೆ ಮೊದಲಿನಿಂದಲೂ ಹಿಂದೂ ಸಂಸ್ಕೃತಿಯ ವಿರೋಧಿ ನಿಲುವುಗಳನ್ನು ಬಿತ್ತುತ್ತಿದ್ದು, ಈಗ ಹಿಟ್ಲರ್‌ಶಾಹಿ ಧೋರಣೆ ಅನುಸರಿಸುತ್ತಿದ್ದಾರೆ. ಸಮಾಜಕ್ಕೆ ಕಂಟಕಪ್ರಾಯವಾದ ಎಸ್.ಡಿ.ಪಿ.ಐ ಹಾಗೂ ಪಿಎಫ್‌ಐನಂಥ ಸಂಘಟನೆಗಳನ್ನು ನಿಷ್ಕ್ರಿಯಗೊಳಿಸುವುದು ಬಿಟ್ಟು ಭಾರತದ ಶ್ರೇಷ್ಠ ಸಂಘಟನೆಯಾದ ಆರ್‌.ಎಸ್.ಎಸ್‌ ನಿಯಂತ್ರಣದ ಕುರಿತು ಯೋಚಿಸುತ್ತಿರುವುದು ಇವರ ಮನಸ್ಥಿತಿಯನ್ನು ಸೂಚಿಸುತ್ತದೆ. ರಾಜ್ಯ ಸರ್ಕಾರ ಇಂಥ ಹೇಳಿಕೆ ನೀಡಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಪ್ರಿಯಾಂಕ್‌ ಖರ್ಗೆ ಮೇಲೆ ಕ್ರಮ ಕೈಕೊಳ್ಳದೇ ಇರುವುದು ಇನ್ನೂ ಅನುಮಾನಕ್ಕೆ ಕಾರಣವಾಗಿದೆ. ಓಲೈಕೆ ರಾಜಕಾರಣವನ್ನು ಪೋಷಿಸುತ್ತಾ ಬಂದಿರುವ ಕಾಂಗ್ರೆಸ್‌ ಸರ್ಕಾರ ಇದೇ ರೀತಿ ಹಿಟ್ಲರ್‌ಶಾಹಿ ಆಡಳಿತ ನಡೆಸುತ್ತಿದ್ದರೆ ಮತ್ತಿನ್ನೆಂದೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net