ಜಿ.ಪರಮೇಶ್ವರ ಹುಟ್ಟುಹಬ್ಬ ಆಚರಣೆ

06GDG03
Published on

ಗದಗ: ಜಿ. ಪರಮೇಶ್ವರ ಯುವ ಸೇನೆ ವತಿಯಿಂದ ಗೃಹ ಸಚಿವ ಜಿ. ಪರಮೇಶ್ವರ ಅವರ 74ನೇ ಹುಟ್ಟುಹಬ್ಬವನ್ನು ಗದಗ ನಗರದಲ್ಲಿ ಸಸಿ ನಡೆಸುವ ಮೂಲಕ ಆಚರಿಸಲಾಯಿತು.
ಜಿಲ್ಲಾ ಎಸ್ಸಿ ಕಾಂಗ್ರೆಸ ಅಧ್ಯಕ್ಷ ಅಧ್ಯಕ್ಷ ಸಂಜಯ ದೊಡ್ಡಮನಿ ಮಾತನಾಡಿ, ಜಿ ಪರಮೇಶ್ವರ ಅವರು ಸರಳ ಸಜ್ಜನಿಕೆಯ ರಾಜಕಾರಣಿಗಳಲ್ಲಿ ಒಬ್ಬರು. ಅವರಿಗೆ ಆರೋಗ್ಯ ಆಯಸ್ಸು ಹಾಗೂ ಅಧಿಕಾರವನ್ನು ದೇವರು ನೀಡಲೆಂದು ಪ್ರಾತಿರ್ಸುತ್ತೇನೆ ಎಂದರು.
ಹುಟ್ಟುಹಬ್ಬ ಆಚರಣೆಯಲ್ಲಿ ಜಿಲ್ಲಾ ಎಸ್ಸಿ ಕಾಂಗ್ರೆಸ ಅಧ್ಯಕ್ಷ ಬಸವರಾಜ ಕಡೆಮನಿ, ಜಿಲ್ಲಾ ಚಲವಾದಿ ಸಮಾಜದ ಅಧ್ಯಕ್ಷ ಆನಂದ ಸಿಂಘಾಡಿ, ಮುತ್ತು ಬೆಳೆಯಲಿ, ದೇವೇಂದ್ರಪ್ಪ ಕೊಳಪ್ಪನವರ, ಮಲ್ಲಪ್ಪ ಹೊಸಮನಿ, ಶೇಕಪ್ಪ ಕಾಳೆ, ಪರಸು ಕಾಳೆ, ಬಸವರಾಜ ಬೆಟಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net