

ವಿಜಯವಾಣಿ ಸುದ್ದಿಜಾಲ ಗದಗ
ಗದಗ ಜಿಲ್ಲೆಯನ್ನು ಬರಗಾಲ ಜಿಲ್ಲೆಯಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂ ಅಪರ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಜಿಲ್ಲೆಯೆಲ್ಲಿ ಮುಂಗಾರು ಮಳೆಯಿಲ್ಲದೆ ಬರಗಾಲ ಎದುರಾಗಿದೆ ಮತ್ತು ಕಳಪೆ ಬೀಜ ವಿತರಣೆಯೂಈ ಜರುಗುತ್ತಿದೆ. ಜಿಲ್ಲೆಯಲ್ಲಿಯಲ್ಲಿ ರೈತನಿಗೆ ದುಸ್ಥಿಗೆ ಎದುರಾಗಿದೆ. ಹಾಗಾಗಿ ಬರಗಾಲ ಎಂದು ಘೋಷಿಸುವುದರ ಜತೆಗೆ ಕಳಪೆ ಸೂರ್ಯಕಾಂತಿ ಬೀಜ ವಿತರಿಸಿ ರೈತರಿಗೆ ಮೋಸ ಮಾಡಿದ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಷ್ಟವಾದ ರೈತರಿಗೆ ಪರಿಹಾರ ಘೋಷಿಸಿಬೇಕೆಂದು ರೈತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ. ಜಿ ನೀಲಪ್ಪಗೌಡರ, ಜಿಲ್ಲಾ ಪ್ರದಾನ ಕಾರ್ಯದಶಿರ್ ಸೋಮಶೇಖರ ಹಿರೇಮಠ, ಜಿಲ್ಲಾ ಉಪಾಧ್ಯ ರಾಜಶೇಖರ್ ಪಾಟೀಲ, ಬಸವರಾಜ ಅಸುಂಡಿ, ವೆಂಕಟೇಶ್ ದೊಂಗಡೆ, ಟಾಕಪ್ಪ ಸಾಥಪುತೆ ಇತರರು ಇದ್ದರು