ಸಾಲಗಾರನಿಗೆ ಪ್ರತಿಯೊಂದು ಸಾಲ ನೀಡಿಕೆ ಏಜೆನ್ಸಿ, ಎಂ.ಎಫ್.ಆಯ್ ಸಂಸ್ಥೆಗಳು, ಲೇವಾದೇವಿದಾರರನ ಕಾರ್ಯನಿರ್ವಾಹಕರ ಹೆಸರು ಮತ್ತು ವಿಳಾಸ,ಸಾಲದ ಮೊತ್ತ, ದಿನಾಂಕ ಹಾಗೂ ಅದರ ವಾಯಿದೆ ಮತ್ತು ವಿಧಿಸಲಾದ ಪರಿಣಾಮಕಾರಿ ಬಡ್ಡಿ ದರ ತೋರಿಸುವ ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿನ ವಿವರ ಪಟ್ಟಿಯನ್ನು ತಲುಪಿಸಬೇಕು. ಹಾಗೂ ಸ್ಥಳೀಯ ಪ್ರದೇಶದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದುವದರ ಜೊತೆಗೆ ಸಾಲಗಾರನಿಗೆ ಸಂಸ್ಥೆ ಅಥವಾ ಏಜೆನ್ಸಿಯ ಅಧಿಕೃತ ಪ್ರತಿನಿಧಿಯು ಯುಕ್ತವಾಗಿ ಸಹಿಮಾಡಿದ ರಸೀದಿಯನ್ನು ನೀಡಬೇಕು.
ಸಾಲಗಾರನಿಗೆ ಸಾಲದ ಕಾರ್ಡನ್ನು ಒದಗಿಸುವದರ ಜೊತೆಗೆ ಅದರಲ್ಲಿ ವಿಧಿಸಲಾದ ಬಡ್ಡಿ ದರ, ಸಾಲಕ್ಕೆ ಲಗತ್ತಾಗಿರುವ ಷರತ್ತು ನಿಬಂಧನೆಗಳು, ಸಾಲಗಾರನನ್ನು ಗುರುತಿಸುವ ಮಾಹಿತಿ, ಸ್ವೀಕರಿಸಿದ ಕಂತುಗಳು ಮತ್ತು ಅಂತಿಮ ತೀರಿಕೆಯನ್ನು ಒಳಗೊಂಡ ಎಲ್ಲ ಮರುಪಾವತಿಗಳ ಹಿಂಬರಹಗಳ ಎಲ್ಲ ವಿವರಗಳನ್ನು ಕನ್ನಡದಲ್ಲಿ ಒದಗಿಸಬೇಕು ಎಂದರು.