

ಗದಗ: ಜಿಲ್ಲಾ ಸಂಜೀವಿನಿ ಸ್ವ-ಸಹಾಯ ಸಂಘ ಎನ್ ಆರ್ ಎಲ್ ಎಂ ಇವರ ನೇತೃತ್ವದಲ್ಲಿ ರೈತರ ಕಡಲೆ ಖರೀದಿ ಮಾಡಿ ಹಣ ಕೊಡದೆ ವಂಚನೆ ಮಾಡಿದ ಗದಗ್ ಜಿಲ್ಲಾ ಸಂಜೀವಿನಿ ಒಕ್ಕೂಟದ ವಿರುದ್ಧ ಹಾಗೂ ಗದಗ್ ಜಿಲ್ಲಾ ಆಡಳಿತ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಹಾಗೂ ರೈತ ಸಂಘಟನೆಗೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ಗದಗ್ ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಎಚ್ ಅಬ್ಬಿಗೇರಿ ಇವರ ನೇತೃತ್ವದಲ್ಲಿ ರೈತರಿಗೆ ಹಾಗೂ ರೈತ ಸಂಘಟನೆಗೆ ಬೆಂಬಲವನ್ನು ಸೂಚಿಸಿ ನಿಮ್ಮೊಂದಿಗೆ ನಾವು ಇರುತ್ತೇವೆ ಸರ್ಕಾರ ಹಣ ಕೊಡುವವರೆಗೂ ಧರಣಿ ನಿಲ್ಲಿಸಬೇಡಿ ಎಂದು ಅವರಿಗೆ ಹೇಳಿ ನಿಮ್ಮ ಜೊತೆಗೆ ನಾವು ಇರುತ್ತೇವೆ ಎಂದು ಹೇಳಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಹೆಚ್ ಅಬ್ಬಿಗೇರಿ, ಗದಗ ತಾಲೂಕ ಅಧ್ಯಕ್ಷರಾದ ಮುತ್ತಣ್ಣ ಚೌಡನ್ನವರ, ಗದಗ್ ಜಿಲ್ಲಾ ರೈತ ಘಟಕದ ಅಧ್ಯಕ್ಷರಾದ ಶರಣಪ್ಪ ಕರಮುಡಿ, ಬೆಟಗೇರಿ ನಗರ ಘಟಕದ ಅಧ್ಯಕ್ಷರಾದ ಸಲೀಂ ಶಿರವಾರ, ಗೌಸ ಶಿರಹಟ್ಟಿ, ಗದಗ್ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ತೌಸಿಫ ಢಾಲಾಯತ, ಜಿಲ್ಲಾ ವಕ್ತಾರರಾದ ವಿರೂಪಾಕ್ಷ ಹಿತ್ತಲಮನಿ ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.