ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಸುಮಾ ಪಾಟೀಲ

Parisar Samrakshane Nammellar Hone - Suma Patil News with Photo
Published on

ಗದಗ: ನಮ್ಮ ನೆಸಗಿರ್ಕ ಪರಿಸರ ಮಾಲಿನ್ಯವಾಗುವುದನ್ನು ತಡೆಗಟ್ಟಲು ಪ್ರತಿಯೊಬ್ಬರು ಒಂದೊಂದು ಗಿಡ ನೆಡಬೇಕು. ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಸಿಕೊಳ್ಳುವುದು ನಮ್ಮ ಹೊಣೆ ಎಂದು ""ಜೇಂಟ್ಸ್​ ಗ್ರೂಪ್​ ಆ್​ ಸಖಿ ಸಹೇಲಿ ಗದಗ'' ಇದರ ಅಧ್ಯಕ್ಷರಾದ ಸುಮಾ ಪಾಟೀಲ ನುಡಿದರು.

ಪರಿಸರ ದಿನಾಚರಣೆ ನಿಮಿತ್ತ ಇವರು ಸರಕಾರಿ ಪ್ರಾಥಮಿಕ ಶಾಲೆ ನಂ. 11 ರಲ್ಲಿ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ನೆಟ್ಟು ಈ ಮಾತನ್ನು ನುಡಿದರು. ಗದಗ ನಗರ ಅವರಾದ ಕವಿತಾ ದಂಡಿನ ಹಾಗೂ ಶಾಲೆ ಮುಖ್ಯೋಪಾಧ್ಯಾಯರಾದ ಭಾರತಿ ಕುಲಕಣಿರ್, ಸಹ ಶಿಕ್ಷಕರಾದ ರೇಣುಕಾ ಹೊಸಮನಿ ಮತ್ತು ಮಂಜುಳಾ ಕೊಳ್ಳಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ನಿರ್ದೇಶಕರಾದ ಶೀಮತಿ ನಿರ್ಮಲಾ ಪಾಟೀಲ ಸ್ವಾಗತಿಸಿದರು. ಖಜಾಂಚಿ ಆಶಾ ಪಟ್ಟಣಶೆಟ್ಟಿ ಪ್ರಾಥಿರ್ಸಿದರು. ಉಪಾಧ್ಯೆ ಪ್ರಿಯಾಂಕ ಹಳ್ಳಿಯವರ ವಂದಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಕಲಾ ಸ್ಥಾವರಮಠ, ಸುಗ್ಗಲಾ ಯಳಮಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net