ನಗರಸಭೆ ಇಂಜಿನಿಯರ್​ ಎಚ್​. ಬಂಡಿವಡ್ಡರ ಮನೆ ಮೇಲೆ ಲೋಕಾ ದಾಳಿ

20250108_190133-COLLAGE
Published on

2 ಕೋಟಿ ಅಕ್ರಮ ಆಸ್ತಿ ಗಳಿಕೆ??????

ವಿಜಯವಾಣಿ ಸುದ್ದಿಜಾಲ, ಗದಗ

ಅಕ್ರಮ ಆಸ್ತಿ ಗಳಿಸಿರುವ ಆರೋಪದ ಮೇಲೆ ಗದಗ ಬೆಟಗೇರಿ ನಗರಸಭೆ ಇಂಜಿನಿಯರ್​ ಎಚ್​. ಬಂಡಿವಡ್ಡರ ನಿವಾಸ, ತೋಟದ ಮನೆ ಸೇರಿದಂತೆ ಗದಗ, ಗಜೇಂದ್ರಗಡ ಮತ್ತು ಭಾಗಲಕೋಟ ಜಿಲ್ಲೆಗಳಲ್ಲಿ ಬಂಡಿವಡ್ಡರ ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಬುಧವರಾ ಲೋಕಾಯುಕ್ತ ದಾಳಿ ನಡೆಸಿ ಅಂದಾಜು 2 ಕೋಟಿಗೂ ಅಧಿಕ ಮೊತ್ತದ ಕ್ರಮ ಆಸ್ತಿಗಳೀಕೆಯನ್ನು ಪತ್ತೆ ಹಚ್ಚಿದ್ದಾರೆ.

ಲೋಕಾಯುಕ್ತ ಡಿವೈಎಸ್​ಪಿ ವಿಜಕುಮಾರ್​ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬಂಡಿವಡ್ಡರ್​ ಗೆ ಸಂಬಂಧಿಸಿದಂತೆ ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ, ಲೋಕಾಯುಕ್ತರಿಗೆ ಕೋಟಿಗೂ ಅಧೀಕ ಮೊತ್ತದ 2 ಮನೆ, 1 ನಿವೇಶನ, 1 ಜೆಸಿಬಿ, 1 ಕಾರ್​, 1 ದ್ವಿಚಕ್ರ ವಾಹನ, ಟ್ರ್ಯಾಕ್ಟರ್​ ಹಾಗೂ ಟ್ಯಾಂಕರ್​ಗಳು ಪತ್ತೆ ಆಗಿವೆ.

ಅಷ್ಟೇ ಅಲ್ಲದೇ ಗಜೇಂದ್ರಗಡ ಪಟ್ಟಣದಲ್ಲಿ, 22 ಲಕ್ಷ ಮೌಲ್ಯದ ಶಾಪಿಂಗ್​ ಕಾಂಪ್ಲೆಕ್ಸ್​, ಮನೆಯಲ್ಲಿ 17 ಲಕ್ಷ ಮೌಲ್ಯದ ಬಂಗಾರ, 1 ಲಕ್ಷ ಮೌಲ್ಯದ ಬೆಳ್ಳಿ, ಬ್ಯಾಂಕಿನಲ್ಲಿ 22 ಲಕ್ಷ ರೂ. ನಗದು ಸೇರಿ, ಒಟ್ಟು 2 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಆದಾಯಕ್ಕಿಂದ ಶೇ. 120 ರಷ್ಟು ಅಧಿಕ ಆಸ್ತಿ ಗಳಿಕೆ ಎಂದು ಲೋಕಾಯುಕ್ತರು ಮಾಹಿತಿ ತಿಳಿಸಿದ್ದಾರೆ. ಜತೆಗೆ ಹಲವು ದಾಖಲೆಗಳು ಸಿಕ್ಕಿದ್ದು ತನಿಖೆ ಮುಂದುವರಿದಿದೆ. ಅಕ್ರಮ ಆಸ್ತಿ ಗಳಿಕೆ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಎಸ್ಪಿ ಹನುಮಂತರಾಯ, ಡಿವೈಎಸ್ಪಿ ವಿಜಯ ಬಿರಾದಾರ, ಪಿಎಸ್​ಐ ಎಸ್​. ಎಸ್​. ತೇಲಿ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ಗಜೇಂದ್ರಗಡ ಹೊರವಲಯದಲ್ಲಿ 8 ಏಕರೆ ತೋಟ ಮತ್ತು ಜಮೀನು ಹಾಗು ಒಂದು ಮನೆ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ದಾಖಲೆ ಪರಿಶೀಲನೆ ವೇಳೆ 8 ಎಕರೆ ತೋಟದ ದಾಖಲೆಗಳು ಅವರ ಮಾಮನವರ ಹೆಸರಲ್ಲಿ ನೋಂದಣಿ ಆಗಿದೆ ಎಂದು ತಿಳಿದು ಬಂದಿದೆ. ಬಾಗಲಕೋಟೆಯಲ್ಲಿ ಬಂಡಿವಡ್ಡರ ಜೆಸಿಬಿ ಹೊಂದಿರುವುದು ತನಿಖೆವೇಳೆ ಬೆಳಕಿಗೆ ಬಂದಿದೆ. ಇನ್ನೂ ಹಲವು ಆಸತಿಗಳು ಗ್ಟಿ ರೂಪದಲ್ಲಿ ಬಂಡಿವಡ್ಡರ ಮತ್ತು ಅವರ ಕುಟುಂಬಕ್ಕೆ ಬಂದಿವೆ. ಗ್ಟಿ್​ ರೂಪದಲ್ಲಿ ಬಂದಿರುವ ಆಸ್ತಿಗಳ ಮೂಲದ ಬಗ್ಗೆಯೂ ಲೋಕಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬಣ ಬಣ ನಗರಸಭೆ:

ನಗರಸಭೆ ಇಂಜಿನಿಯರ್​ ಮನೆ, ತೋಟದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಇನ್ನುಳಿದ ಅಧಿಕಾರಿಗಳಿಗೂ ನಡುಕು ಶುರುವಾಗಿದೆ. ದಾಳಿ ಮಾಹಿತಿಯಿಂದ ಬುಧವಾರ ನಗರಸಭೆ ಬಿಕೋ ಎನ್ನುತ್ತಿತ್ತು. ಹಲವು ಅಧಿಕಾರಿಗಳು ಕಚೇರಿಯತ್ತ ಮುಖ ಮಾಡಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಯಿತು. ಜತೆಗೆ ನಗರಸಭೆ ಆವರಣದಲ್ಲಿ ಬುಧವಾರ ನಾನಾ ಗುಸುಗುಸು ಮಾತುಗಳು ಕೇಳಿ ಬಂದವು. ನಗರಸಭೆ ಇಂಜಿನಿಯರ್​ ಆಗಿರುವ ಬಂಡಿವಡ್ಡರ್​ ಅವರ ಇಂಜಿನಿಯರ್​ ಸ್ಥಾನದ ಶೈಕ್ಷಣಿಕ ಅರ್ಹತೆ ಬಗ್ಗೆಯೂ ನಗರಸಭೆ ಅಧಿಕಾರಿಗಳು, ಸದಸ್ಯರ ನಡುವೆ ಸರಿ ತಪ್ಪು ಚರ್ಚೆಗಳು ಕೇಳಿಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net