ಬಡ ಪ್ರತಿಭಾವಂತ ವಿದ್ಯಾಥಿರ್ಗಳ ಉಜ್ವಲ್​ ಭವಿಷ್ಯಕ್ಕಾಗಿ ಉದ್ಯೋಗ ಮೇಳ: ಶಕುಂತಲಾಬಾಯಿ ದಂಡಿನ

01GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮೀಣ ಭಾಗದ ವಿದ್ಯಾಥಿರ್ಗಳು ನಿರುದ್ಯೋಗ ಸಮಸ್ಯೆಗಳಿಂದ ಮುಕ್ತರಾಗಲು ಕಾಲಕಾಲಕ್ಕೆ ಬೃಹತ್​ ಉದ್ಯೋಗ ಮೇಳಗಳು ಜರುಗುತ್ತಿರಬೇಕು. ಅಂದಾಗ ಮಾತ್ರ ಗ್ರಾಮೀಣ ಭಾಗದ ವಿದ್ಯಾಥಿರ್ಗಳು ಉದ್ಯೋಗ ಪಡೆದು ಆಥಿರ್ಕವಾಗಿ ಸದೃಢರಾಗಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಶಕುಂತಲಾಬಾಯಿ ದಂಡಿನ ಹೇಳಿದರು.
ಕೆಎಸ್​ಎಸ್​ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗದಗ ನಗರದಲ್ಲಿ ಬೃಹತ್​ ಕೈಗಾರಿಕೆ ಸ್ಥಾಪನೆ ಆಗುವುದು ಅಗತ್ಯವಿದೆ. ಇಲ್ಲಿ ನಿರುದ್ಯೋಗ ಸಮಸ್ಯೆ ಅಧಿಕವಿದ್ದು, ಕೈಗಾರಿಕೆಗಳಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ ಎಂದರು.
ಡಾ. ಎಂ. ವಿ. ಕೊರವಿ ಮಾತನಾಡಿ, ಪ್ರತಿಭೆ, ನೈಪುಣ್ಯತೆ, ನಿರಂತರ ಪರಿಶ್ರಮವನ್ನು ಯುವಕರು ಕಾಲಕ್ಕೆ ತಕ್ಕಂತೆ ಮೈಗೂಡಿಸಿಕೊಂಡರೆ ಉದ್ಯೋಗಗಳು ತಾವೇ ಅರಿಸಿಕೊಂಡು ಬರುತ್ತವೆ ಎಂದರು.
ಉದ್ಯೋಗ ಮೇಳದಲ್ಲಿ 25ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಂಪನಿಗಳು ಭಾಗವಹಿಸಿ 361 ಅಭ್ಯಥಿರ್ಗಳಿಗೆ ನೇಮಕಾತಿ ಪತ್ರಗಳನ್ನು ನೀಡಿದವರು. ರವೀಂದ್ರನಾಥ ದಂಡಿನ, ಪುನೀತಕುಮಾರ ಬೆನಕನವಾರಿ, ಡಾ. ಎ. ಆರ್​. ವಡಕಣ್ಣವರ, ಡಾ. ವಿ. ಆರ್​. ಹಿರೇಮಠ, ಡಾ. ಕಿಶೋರ ಎಂ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net