2028ರ ಚುನಾವಣೆಗೆ ಮಹಿಳಾ ಮೀಸಲಾತಿ ಜಾರಿ

12GDG03
Published on

ಕ್ಷೇತ್ರ ಪುನವಿರ್ಂಗಡನೆಗೂ, ಮಹಿಳಾ ಮೀಸಲಾತಿ ಜಾರಿಗೂ ಸಂಬಂಧವಿಲ್ಲ: ಕಾರಜೋಳ

ವಿಜಯವಾಣಿ ಸುದ್ದಿಜಾಲ ಗದಗ

ಮುಂಬರುವ 2028ರ ಚುನಾವಣೆಗೆ ಮಹಿಳೆಯರಿಗೆ ಶೇ. 33 ರಷ್ಟು ಮಿಸಲಾತಿ ನೀಡುವ ಕಾನೂನು ಕಡ್ಡಾಯ ಜಾರಿ ಆಗಲಿದೆ. ಈ ಕುರಿತು ಸಂಸತ್​ ನಲ್ಲಿ ಮಂಡಿಸಿದ ಮಸೂದೆಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. 2028ರ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಸಮಸದ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಜಾರಿ ಮಾಡುವ ಉದ್ದೇಶದಿಂದಲೇ ಕೇಮದ್ರಸರ್ಕಾರ ಜನಗಣತಿ ಮತ್ತು ಜಾತಿಗಣತಿ ಮಾಡಲು ನಿರ್ಧರಿಸಿದೆ. ಈ ಸಮೀೆ ಆಧಾರದ ಮೇಲೆ 2028ರ ಚುನಾವಣೆಗೆ ಮಹಿಳಾ ಮೀಸಲಾತಿ ಸಿಗುತ್ತದೆ. ಸದ್ಯಕ್ಕೆ ಮಧ್ಯಂತರ ಚುನಾವಣೆ ನಡೆದರೆ ಈ ಕಾನೂನು ಅನ್ವಯಿಸುದಿಲ್ಲ. ಕ್ಷೇತ್ರ ಪುನವಿರ್ಂಗಡನೆಗೂ ಮಹಿಳಾ ಮೀಸಲಾತಿಗೂ ಸಂಬಂಧವಿಲ್ಲ. ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರ ಪುನವಿರ್ಂಗಡೆ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸ್ಥಳಿಯ ಕ್ಷೇತ್ರಗಳ ಪುನವಿರ್ಂಗಡೆ ಅಧಿಕಾರ ರಾಜ್ಯಸರ್ಕಾರಕ್ಕೆ ಸಂಬಂಧಿಸಿದ್ದಾಗಿದೆ. ಅದಕ್ಕಾಗಿ ಮಹಿಳೆಯರು ಗೊಂದಲಕ್ಕೆ ಒಳಗಾಗಬಾರದು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಧುನಿಕ ಬಸವಣ್ಣನಿಗೆ ಹೋಲಿಸಿದ ಗೋವಿಂದ ಕಾರಜೋಳ. 12 ಶತಮಾನದಲ್ಲಿ ಮಹಿಳಾ ಸಮಾನತೆಗೆ ಬಸವಣ್ಣನವರು ಹೋರಾಡಿದ್ದರು. ತದ ನಂತರ ಮಹಿಳಾ ಸಮಾನತೆಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅದರ ಪ್ರತಿಬಿಂಬವೇ ಮಹಿಳಾ ಮೀಸಲಾತಿ ಮಸೂದೆ ಆಗಿದೆ. ಪ್ರಧಾನಿ ಮೋದಿ ಅವರು ಎರಡನೇ ಬಸವಣ್ಣ ಆಗಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net