ಗದಗ: ಎಸ್ಸಿ ಮೀಸಲಾತಿ 'ರೋಣ' ಕ್ಕೆ ಶಿಫ್ಟ್, ಮುಂಡರಗಿ ನೂತನ ವಿಧಾನಸಭಾ ಕ್ಷೇತ್ರ

20231201_101657
Published on

ಶಿವಾನಂದ ಹಿರೇಮಠ, ಗದಗ
ಜಿಪಂ, ತಾಪಂ ಕ್ಷೇತ್ರ ಪುನವಿರ್ಗಂಡಣೆ ನಂತರ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಗೆ ಮುನ್ನುಡಿ ಬರದಿರುವ ಸೀಮಾ ನಿರ್ಣಯ ಆಯೋಗ ಕ್ಷೇತ್ರವಾರು ಪ್ರಾಥಮಿಕ ವರದಿ ಸ್ವೀಕರಿಸಲು ಪೂರಕ ಸಿದ್ಧತೆ ನಡೆಸಿದೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಯೂ ನಡೆದಿದೆ.
ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಜಿಲ್ಲೆಯಲ್ಲಿ 2008ರ ಪೂರ್ವದಂತೆ 5 ವಿಧಾನಸಭಾ ಕ್ಷೇತ್ರಗಳು ಸೃಷ್ಟಿಸಲಾಗುತ್ತಿದ್ದು, ಶಿರಹಟ್ಟಿ ಕ್ಷೇತ್ರದ ಮೀಸಲಾತಿ ಭಾಗಶಃ ರೋಣ ಮತಕ್ಷೇತ್ರಕ್ಕೆ ಶ್ಟಿ್​ ಆಗುವ ಸಾಧ್ಯತೆ ದಟ್ಟವಾಗಿದೆ. 2008ರ ವರೆಗೆ ಅಸ್ತಿತ್ವದಲ್ಲಿದ್ದ ಮುಂಡರಗಿ ವಿಧಾನಸಭಾ ಕ್ಷೇತ್ರ ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರತ್ಯೇಕವಾಗಲಿದೆ ಎಂದು ಉನ್ನತ ಮೂಲಗಳು ವಿಜಯವಾಣಿಗೆ ತಿಳಿಸಿವೆ.
1998ರಲ್ಲಿ ಜಿಲ್ಲೆಗಳ ಪುನವಿರ್ಂಗಡಣೆ ನಂತರ ಧಾರವಾಡ ಜಿಲ್ಲೆಯಿಂದ ಹಾವೇರಿ ಮತ್ತು ಗದಗ ಜಿಲ್ಲೆ ಬೇರ್ಪಟ್ಟಿತ್ತು. ಆ ಸಂದರ್ಭದಲ್ಲಿ ಬ್ಯಾಡಗಿ ಮತ ಕ್ಷೇತ್ರಕ್ಕೆ ಮೀಸಲಾತಿ ಇತ್ತು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಮುಂಡರಗಿ ಕ್ಷೇತ್ರದ ಹೋಬಳಿಗಳನ್ನು ರೋಣ, ಶಿರಹಟ್ಟಿ ಮತ್ತು ನರಗುಂದ ಕ್ಷೇತ್ರಕ್ಕೆ ಹಂಚಿಕೆಮಾಡಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಮಿಸಲಾತಿ(ಎಸ್ಸಿ) ಒದಗಿಸಲಾಗಿತ್ತು. ಪ್ರಸ್ತು ಜಿಪಂ ಮತ್ತು ತಾಪಂ ಸೀಮಾ ನಿರ್ಣಯ ರ್ಪೂಣಗೊಂಡಿದ್ದು, ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆ ಮತ್ತು ಮೀಸಲಾತಿ ಮರುಪರಿಶೀಲನೆ ನಡೆಸಲಿದೆ.
ಅವೈಜ್ಞಾನಿಕ ಮರುವಿಂಗಡಣೆ:
2008ರಲ್ಲಿ ಮರುವಿಂಗಡಣೆ ನಂತರ ಮುಂಡರಗಿ ವಿಧಾನಸಭಾ ಕ್ಷೇತ್ರವನ್ನು ಅವೈಜ್ಞಾನಿಕವಾಗಿ ವಿಂಗಡಣೆ ಮಾಡಲಾಗಿದೆ. ಮುಂಡರಗಿ ವಿಧಾನಸಭೆಯ ಮುಂಡರಗಿ ಹೋಬಳಿಯನ್ನು ಶಿರಹಟ್ಟಿ ಕ್ಷೇತ್ರಕ್ಕೆ, ಡಂಬಳ ಹೋವಳಿಯನ್ನು ರೊಣ ಮತ ಕ್ಷೇತ್ರಕ್ಕೆ, ಲಕ್ಕುಂಡಿಯನ್ನು ನರಗುಂದ ಮತ್ತು ಮುಳಗುಂದ ಪಟ್ಟಣ ಪಂಚಾಯಿತಿ ಸೇರಿ ಪ್ರಮುಖ ಹಳ್ಳಿಗಳನ್ನು ಗದಗ ಕ್ಷೇತ್ರಕ್ಕೆ ಒಳಪಡಿಸಲಾಯಿತು. ಅದರಂತೆ ಹಾತಲಗೇರಿ, ನರಸಾಪುರ ಗ್ರಾಪಂಗಳು ಗದಗ ಕ್ಷೇತ್ರಕ್ಕೆ ಕೂಗಳತೆ ದೂರದಲ್ಲಿ ಇದ್ದರೂ ನರಗುಂದ ಮತಕ್ಷೇತ್ರಕ್ಕೆ ಹಾಗೂ ಗದಗ ಮತಕ್ಷೇತ್ರದ ಕಾರ್ಯವ್ಯಾಪ್ತಿಯಲ್ಲಿರುವ ಹಳ್ಳಿಗಳನ್ನು ನರಗುಂದಕ್ಕೆ ಒಳಪಡಿಸಿ ಅವೈಜ್ಞಾನಿಕ ವಿಂಗಡಣೆ ಮಾಡಲಾಗಿತ್ತು.

ಜನಗಣತಿ:
ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ, ಮೀಸಲಾತಿ ಹಂಚಿಕೆಗೆ ಜನಗಣತಿ ಅತ್ಯಗತ್ಯ. ಈ ವರೆಗೆ 2011ರ ಜನಗಣತಿ ಆಧಾರದಲ್ಲೇ ಕ್ಷೇತ್ರಗಳ ಹಂಚಿಕೆ, ಅನುದಾನ ವಿನಿಯೋಗ ಆಗುತ್ತಿದೆ. ಹಾಗಾಗಿ, 2028ರ ಒಳಗಾಗಿ ಜನಗಣತಿ ನಡೆಯುವ ಸಾಧ್ಯತೆಯೂ ಇದೆ. ಈ ಹಿನ್ನೆಲೆ 2028ರ ಚುನಾವಣೆಯ ಕ್ಷೇತ್ರ ಹಾಗೂ ಮೀಸಲಾತಿಗಳಲ್ಲಿ ಬಹಳಷ್ಟು ಬದಲಾವಣೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮುಂಡರಗಿ ಕ್ಷೇತ್ರ:
ಪ್ರತಿ 25 ವರ್ಷಕ್ಕೊಮ್ಮೆ ಕ್ಷೇತ್ರ ವಿಂಗಡಣೆ, ಮೀಸಲಾತಿ ಪರಿಶೀಲನೆ ನಡೆಯುತ್ತದೆ. ಹಾಗಾಗಿ, ಪ್ರಸ್ತುತ ನಿಯಮದ ಪ್ರಕಾರ 2033ರ ಚುನಾವಣೆಗೆ ಈ ಪ್ರಕ್ರಿಯೆ ಜಾರಿಗೆ ಬರುತ್ತವೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ. ಆದರೆ, ಚುನಾವಣೆ ಸ್ಪರ್ಧೆಯಲ್ಲಿ ಶೇ.33 ರಷ್ಟು ಮಹಿಳಾ ಮಿಸಲಾತಿಯನ್ನು ಹೊರಡಿಸಿರುವ ಕೇಂದ್ರ ಸರ್ಕಾರದ ಆದೇಶದಂತೆ 2028ರ ವಿಧಾನಸಭೆ ಚುನಾವಣೆಗೆ ಮಹಿಳಾ ಮೀಸಲಾತಿ ಕಡ್ಡಾಯ ಜಾರಿ ಆಗಲಿದೆ. ಈ ಹಿನ್ನೆಲೆ 2028ರ ಒಳಗಾಗಿ ಜನಗಣತಿ ಮುಕ್ತಾಯಗೊಂಡು, ಜನಗಣತಿ ಆಧಾರದ ಮೇಲೆ ಕ್ಷೇತ್ರ ಹಾಗೂ ಮೀಸಲಾತಿ ಮರುವಿಂಗಡಣೆ 2028ಕ್ಕೆ ಜರುಗಲಿದೆ ಎಂಬುದು ಉನ್ನತ ಮೂಲಗಳು ಹೇಳುತ್ತವೆ. ಈ ಬಗ್ಗೆ ಪರಿಷತ ಆದೇಶವನ್ನು ಸರ್ಕಾರ ಹೊರಡಿಸಲಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕಾರ ಜಿಲ್ಲೆಗೆ ಮುಂಡರಗಿ ವಿಧಾನಸಭಾ ಕ್ಷೇತ್ರ ಒಳಗೊಂಡು 4 ಕ್ಷೇತ್ರದಿಂದ 5 ವಿಧಾನಸಭಾ ಕ್ಷೇತ್ರಕ್ಕೆ ಏರಿಕೆ ಆಗಲಿದೆ. 2008ರ ಪೂರ್ವದಂತೆಯೇ ಲಕ್ಕುಂಡಿ ಮತ್ತು ಡಂಬಳ ಹೋಬಳಿಗಳನ್ನು ಮುಂಡರಗಿ ಕ್ಷೇತ್ರಕ್ಕೆ ಒಳಗೊಳಿಸಲಾಗುತ್ತದೆ ಎನ್ನಲಾಗಿದೆ.

ಮೀಸಲಾತಿ ಸರ್ಕಸ್​:
ಈಗಿರುವ ಶಿರಹಟ್ಟಿ ಕ್ಷೇತ್ರದ ಎಸ್ಸಿ ಮೀಸಲಾತಿಯನ್ನು ರೋಣ ಕ್ಷೇತ್ರಕ್ಕೆ ಒದಗಿಸಲಾಗುತ್ತದೆ ಹಾಗೂ ಶಿರಹಟ್ಟಿ ಕ್ಷೇತ್ರಕ್ಕೆ ಮಹಿಳಾ ಮೀಸಲಾತಿ ನೀಡುವ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಂತೆ ಜಿಲ್ಲೆಯಲ್ಲಿ ಬಹುದೊಡ್ಡ ರಾಜಕೀಯ ಸ್ಥಿತ್ಯಂತರ, ಸ್ಥಾನ ಪಲ್ಲಟ ಆಗುವುದು ಸತ್ಯ.


ಈ ಮೊದಲು ಗದಗ ಕ್ಷೇತ್ರ ವಿಂಗಡಣೆ ಮಾಡಿ ಗದಗ ಗ್ರಾಮೀಣ ಮತ್ತು ಗದಗ ಮತ ಕ್ಷೇತ್ರ ಸೃಷ್ಟಿಸಲಯ ರಾಜಕೀಯ ವಲಯದಲ್ಲಿ ಮಾತುಗಳು ಕೇಳೀಬರುತ್ತಿದ್ದವು. ಸದ್ಯದ ಮಾಹಿತಿ ಪ್ರಕಾರ ಗದಗ ಗ್ರಾಮಿಣ ಬದಲಾಗಿ, ಈ ಹಿಂದಿನಂತೆ ಕ್ಷೇತ್ರಗಳ ಸೃಷ್ಟಿಗೆ ಒಲವು ತೋರಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net