

ವಿಜಯವಾಣಿ ಸುದ್ದಿಜಾಲ ಗದಗ
ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಸಾವಿತ್ರಿಬಾಯಿ ಪುಲೆ ಮತ್ತು ಶಿಕ್ಷಕಿ ಾತಿಮಾ ಶೇಖರವರ ಜಯಂತ್ಯೋತ್ಸ ಕಾರ್ಯಕ್ರಮ ಹಾಗೂ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಸಮಾರಂಭ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಎಂ ಮಾತನಾಡಿ, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲಿ ್ಲ ಶಿಕ್ಷಣ ವೃತ್ತಿಯು ಪವಿತ್ರ ಮತ್ತು ಶ್ರೇಷ್ಠವಾಗಿದೆ. ಶಿಕ್ಷಕ ಸಮೂಹದಿಂದಲೇ ದೇಶದ ಭವಿಷ್ಯ ನಿರ್ಮಾಣವಾಲಿದೆ. ಶಿಕ್ಷಕರು ಸೃಜನಾತ್ಮಕ ಕೌಶಲ್ಯಗಳನ್ನು ಬಳಸುವ ಮೂಲಕ ವಿದ್ಯಾಥಿರ್ಗಳಳ ಬೌದ್ಧಿಕ ಮಟ್ಟದ ಮೇಲೆ ಪರಿಣಾಮ ಬೀರಿ ಕಲಿಕೆಯನ್ನು ಪರಿಣಾಮಕಾರಿಗೊಳಿಸಿ ಶೈಕ್ಷಣಿಕ ಗುರಿ ಉದ್ದೇಶಗಳನ್ನು ಈಡೇರಿಸುವುದರೊಂದಿಗೆ ಸಾಕ್ಷರತೆ ಸಮುದಾಯ ನಿಮಿರ್ಸುವ ಗುರುತರ ಜವಾಬ್ದಾರಿ ಇಂದಿನ ಶಿಕ್ಷಕ ಸಮುದಾಯದ ಮೇಲಿದೆ ಎಂದು ಹೇಳಿದರು.
ಪ್ರಾಚಿನ ಕಾಲದಲ್ಲಿ ಸ್ತ್ರೀಯು ಸ್ವಾತ್ಯಂತ್ರಕ್ಕೆ ಅರ್ಹಳಾಗಿರಲಿಲ್ಲ. ಆಕೆ ಬಾಲ್ಯದಲಿ ್ಲ ತಂದೆ ತಾಯಿಯ ಆಶ್ರಶ್ರದಲ್ಲಿ, ಯೌವನದಲ್ಲ ಗಂಡನ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಸರೆಯಲ್ಲಿ ಜೀವನ ಕಳೆಯುವ ಪರಿಪಾಠ ಇತ್ತು. ನಂತರದ ಕಾಲಟ್ಟದಲ್ಲಿ ಸಾವಿತ್ರಿಬಾಯಿ ಪುಲೆ ಅವ ರು ಶೈಕ್ಷಣಿ ವ್ಯಾಸಂಗ ಪೂರೈಸಿ ಮಕ್ಕಳ ಧ್ಯಾನದ ಹಸಿವು ನೀಗಿಸಿ ಪ್ರಥಮ ಶಿಕಕಿ ಖ್ಯಾತಿಯನ್ನು ಗಳಿಸಿದರು. ನಾನು ಸಹ ಅಪರ ಜಿಲ್ಲಾಧಿಕಾರಿ ಆಗುವ ಮುನ್ನ ಪ್ರಾಥಮಿಕ ಶಾಲಾ ಶಿಕಿಯಾಗಿ ಬೋದನೆಯನ್ನು ಮಾಡಿದ್ದೇನೆ.ಪ್ರಾಥಮಿಕ ಶೈಕ್ಷಣಿ ಹಂತದಲ್ಲಿ ನಲಿಕಲಿ ಯೋಜನೆ ಗಳಿಂದ ಮಕ್ಕಳ ಮೇಲೆ ಪರಿಣಾಮ ಬೀರುವಂತೆ ಕಾರ್ಯನಿರ್ವಹಿಸಿದ ಸಂತೃಪ್ತಿ ನನಗಿದೆ ಎಂದು ಅನ್ನರ್ಪೂಣ ಎಂ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದಶಿರ್ ಕೃಷ್ಣಗೌಡ ಪಾಟೀಲ ಮಾತನಾಡಿ, ಮಕ್ಕಳ ಸವೋರ್ತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಪುಲೆ ಮತ್ತು ಾತಿಮಾ ಶೇಖರವರ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆ ಮತ್ತು ಅವರ ಹೋರಾಟದ ಬಗ್ಗೆ ತಿಳಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಸಂದ ಶಹರ ಗಟಕದ ಅಧ್ಯಕ್ಷ ಎಸ್. ಕೆ. ಮಂಗಳಗುಡ್ಡ ಮಾತನಾಡಿದರು. ಆದರ್ಶ ಶಿಕ್ಷಕರಿಗೆ ಮತ್ತು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಚಂದ್ರಶೇಖರ ಶಿಗ್ಲಿ, ಆರ್. ಎಸ್. ಬುರಡಿ, ವಿ. ಎಂ. ಹಿರೇಮಠ, ಮಂಗಳಾ ತಾಪಸ್ಕರ, ವಿ. ವಿ. ನಡುವಿನಮನಿ, ಎಸ್. ಡಿ. ಕನವಳ್ಳಿ, ಕೆ. ಎ. ಬಳಿಗೇರ, ರವಿ ಗುಂಜೀಕರ, ಬಸವರಾಜ ಬಳ್ಳಾರಿ, ಡಿ. ಎಸ್. ತಳವಾರ, ಮಹೇಶ ಕುರಿ, ಎಸ್.ಪಿ. ಪ್ರಭಯ್ಯನಮಠ, ಶಂಕರ ಹಡಗಲಿ, ಸುರೇಶ ಕೊಪ್ಪದ, ಕೆ. ಬಿ. ಕೊಣ್ಣೂರ, ಮುತ್ತಪ್ಪ ಮಲಕಶೆಟ್ಟಿ, ಶರಣಪ್ಪ ನಾಗರಳ್ಳಿ ಇತರರು ಇದ್ದರು.