

ಗದಗ: ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಅಂತಿಮ ಪಟ್ಟಿಯಲ್ಲಿರುವ ಎಲ್ಲಾ ಪದವಿಧರೇತರ ಮುಖ್ಯ ಶಿಕ್ಷಕರು, ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕರು
ದೈಹಿಕ ಶಿಕ್ಷಕರು ವಿಶೇಷ ಶಿಕ್ಷಕರಿಗೆ ಮತ್ತು ಪ್ರಾಥಮಿಕ ಶಾಲಾ ಸಹಶಿಕ್ಷಕರ ವೃಂದ ಕ್ರಮ ಸಂಖ್ಯೆ 1 ರಿಂದ 300 ವರೆಗಿನ ಶಿಕ್ಷಕರಿಗೆ ಜುಲೈ 24 ಬೆಳಿಗ್ಗೆ 9.30 ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಮ್ ಹಾಲ್ ನಲ್ಲಿ ಕೌನ್ಸಲಿಂಗ್ ಪ್ರಕ್ರೀಯೆ ನಡೆಯುತ್ತದೆ.
ಜುಲೈ 25 ಬೆಳಿಗ್ಗೆ 9.30 ರಂದು ಕ್ರಮ ಸಂಖ್ಯೆ 301 ರಿಂದ 715 ವರೆಗೆ ಮತ್ತು ಜುಲೈ 26 ಬೆಳಿಗ್ಗೆ 9.30 ರಂದು ಅಂತಿಮ ಪಟ್ಟಿಯಲ್ಲಿರುವ ಎಲ್ಲಾ ಪ್ರೌಢ ಶಾಲಾ ವಿಶೇಷ ಶಿಕ್ಷಕರು,ದೈಹಿಕ ಶಿಕ್ಷಕರು,ಸಹಶಿಕ್ಷಕರ ವೃಂದ ಕೌನ್ಸಲಿಂಗ್ ಪ್ರಕ್ರೀಯೆ ನಡೆಯುತ್ತದೆ ಶಿಕ್ಷಕರು ನಿಗದಿ ಪಡಿಸಿದ ದಿನಾಂಕದಂದು ಕೌನ್ಸಲಿಂಗ್ ಸಮಯದಲ್ಲಿ ಹಾಜರಿರಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.