

ಗದಗ: ಗದಗ ನಗರ ರೇಲ್ವೆ ಕ್ವಾಟರ್ಸನಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಐದು ದಿನಗಳ ನವರಾತ್ರಿ ವಿಶೇಷ ಕಾರ್ಯಕ್ರಮಗಳು ವಿಜೃಂಭಣೆಯಿAದ ಪ್ರಾರಂಭಗೊAಡಿವೆ.
ಸೋಮವಾರ ಅ. ೭ ರಂದು ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ನವರಾತ್ರಿ ಅಂಗವಾಗಿ ಘಟಸ್ಥಾಪನೆ ಕಾರ್ಯಕ್ರಮಗಳು ವಿವಿಧ ಪೂಜಾ ವಿಧಿ ವಿಧಾನಗಳಿಂದ ಜರುಗಿದವು.
ನವರಾತ್ರಿ ಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಮತ್ತು ಎಲ್ಲರಿಗೂ ರಂಗೋಲಿ ಮತ್ತು ಕ್ರೀಡಾ ಸ್ಪರ್ಧೆಗಳು ಜರುಗಿದವು. ತಾ. ೧೦ ರಂದು ರಾತ್ರಿ ೮ ಗಂಟೆಯಿAದ ಅ. ೧೧ ರಂದು ಬೆಳಿಗ್ಗೆ ೬ ಗಂಟೆಯವರೆಗೆ ಶ್ರೀ ದುರ್ಗಾ ಮಾತಾ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ. ೧೧ ರಂದು ಬೆಳಿಗ್ಗೆ ೬ ಗಂಟೆಗೆ ಶ್ರೀ ದುರ್ಗಾಮಾತಾಗೆ ಮಹಾಮಂಗಳಾರತಿ, ಸಾಯಂಕಾಲ ೭-೦೦ ಗಂಟೆಗೆ ಮಹಾಪ್ರಸಾದ ಜರುಗಲಿದೆ. ಅ. ೧೨ ರಂದು ಸಂಜೆ ೫ ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ಅಪಾರ ಭಕ್ತ ಸಮ್ಮುಖದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಜರುಗಲಿದೆ.
ಕಾರಣ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದುರ್ಗಾದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ರೇಲ್ವೆ ಕ್ವಾಟರ್ಸ ಶ್ರೀ ದುರ್ಗಾದೇವಿ ದೇವಸ್ಥಾನದ ಹಿರಿಯರು, ಸಮಾಜ ಬಾಂಧವರು ಮತ್ತು ಯುವಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.