ಗದಗ: ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಕಲಾ ಬಳಗ ಗದಗ ವತಿಯಿಂದ ಹಾತಲಗೇರಿ ರಸ್ತೆಯ ಕರಿಯಮ್ಮ ಕಲ್ಲು ಬಡಾವಣೆಯ ರಾಘವೇಂದ್ರ ಮಹಾಸ್ವಾಮಿಗಳವರ ಮಠದಲ್ಲಿ ಮಂತ್ರಾಲಯ ಪ್ರಭು ರಾಘವೇಂದ್ರ ರಾಯರ ಮಧ್ಯಾರಾಧನೆಯಂದು ಅಂದರೆ ಇಂದು ದಿನಾಂಕ 10-08-2025 ರ ಸೋಮವಾರ ಸಂಜೆ 6-30ಕ್ಕೆ ನಾಟಕ 'ಶ್ರೀ ಗುರು ರಾಘವೇಂದ್ರ ವೃತಿವರ' ಪ್ರಯೋಗಗೊಳ್ಳಲಿದೆ.
ಶ್ರೀ ಫಣೀಂದ್ರಚಾರ್ಯ ದ್ಯಾಮೇನಹಳ್ಳಿ ಅವರು ಈ ನಾಟಕವನ್ನು ರಚಿಸಿ, ನಿರ್ದೇಶಿಸಿ, ಸಂಗೀತ ಸಂಯೋಜಿಸಿದ್ದಾರೆ. ಬೆಳಕು ವಿನ್ಯಾಸ ಸುಮಧ್ವ ದ್ಯಾಮೇನಹಳ್ಳಿ,
ಶ್ರೀ ತೇರದಾಳ ಸರ್ ತಬಲಾ ಸಾತ ನೀಡಿದ್ದಾರೆ. ಶ್ರೀ ರಂಗಪ್ಪ ಹುಯಿಲಗೋಳ ಹಾಗೂ ಶ್ರೀ ಶ್ರೀನಿವಾಸ ಹಡಪದ ಅವರ ಪ್ರಸಾದನವಿದೆ. ಮಹೇಶ ಸಂದಿಗೊಡ ವೃಂದಾವನ ನಿರ್ಮಾಣ ಮಾಡಿದ್ದಾರೆ.
ರಾಘವೇಂದ್ರ ರಾಯರಾಗಿ ಮೌನೇಶ ಚಿ. ಬಡಿಗೇರ(ನರೇಗಲ್ಲ), ವಿಜಯ ದಾಸರಾಗಿ ಅಂದಾನೆಪ್ಪ ವಿಭೂತಿ, ಸ್ವಾಮಿರಾಯ ವಿಶ್ವನಾಥ ಬೇಂದ್ರೆ, ಅಪ್ಪಣ್ಣಾಚಾರ್ಯರಾಗಿ ಮುರಲೀಧರ ಸಂಕನೂರ, ಅಪ್ಪಾವರಾಗಿ ಡಾ. ಗಿರೀಶ ಬಡಿಗೇರ, ನವಾಬರಾಗಿ ಅವನಿ ಕುಲಕರ್ಣಿ, ಆನಂದ ದಾಸರಾಗಿ ಶುಭಾಂಗಿ ದ್ಯಾಮೇನಹಳ್ಳಿ, ವಾದೀಂದ್ರರಾಗಿ ಮಹೇಶ ಸಂದಿಗೊಡ, ಮೇಜರ್ ಮನ್ರೋ ಉಜ್ವಲ ಕಬಾಡಿ, ಸಹಾಯಕ ಶ್ರದ್ಧಾ ಕಬಾಡಿ, ರಾಕ್ಷಸ ಅನಘಾ ಕುಲಕರ್ಣಿ,
ವೆಂಕಣ್ಣನಾಗಿ ಸುರಭಿ ಮಹಾಶಬ್ಧಿ, ಮಂಚಾಲಮ್ಮನಾಗಿ ರಕ್ಷಿತಾ ಕುಲಕರ್ಣಿ, ಬಾಗಣ್ಣನಾಗಿ ಸಂಜನಾ ದೀಪಾಲಿ, ಜಗನ್ನಾಥ ದಾಸರಾಗಿ ಯಶೋಧ ಗುಮಾಸ್ತೆ, ಅರ್ಚಕರು ಸನತ್ ದೀಪಾಲಿ, ಅಂಗವೈಕಲ್ಯ ನೃತ್ಯಗಾರ್ತಿ ಅನ್ವಿತಾ, ಕೃಷ್ಣನಾಗಿ ರಂಜಿತಾ ಕುಲಕರ್ಣಿ, ನವಾಭನ ಸೇವಕನಾಗಿ ಅಪೇಕ್ಷಾ ಇವರು ಅಭಿನಯಿಸುವರು.