

ಗದಗ: ಶಿಕ್ಷಣವು ವ್ಯಕ್ತಿಯ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಬಲ್ಲದು. ಗುರುವಿನಲ್ಲಿ ಶೃದ್ಧಾಭಕ್ತಿ ಇಟ್ಟುಕೊಂಡು ಅವರು ನೀಡುವ ಶಿಕ್ಷಣವನ್ನು ಪಡೆದುಕೊಂಡು ಬದುಕಿನಲ್ಲಿ ಉನ್ನತ ಸ್ಥಾನ ಪಡೆಯಬೇಕೆಂದು ಗದುಗಿನ ಹಿರಿಯ ತಜ್ಞ ವೈದ್ಯ ಡಾ.ಜಗದೀಶ ಶಿರೋಳ ಹೇಳಿದರು.
ಅವರು ಗದುಗಿನ ಲಯನ್ಸ್ ಸ್ಕೂಲ್‌ದಲ್ಲಿ ಎರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಕ್ಷಣವೊಂದೇ ಮನುಷ್ಯನನ್ನು ಅತ್ಯುನ್ನತ ಸ್ಥಾನಕ್ಕೆ ತಂದು ನಿಲ್ಲಿಸಬಲ್ಲದು. ಜೀವನದಲ್ಲಿ ಸಾಧನೆಗೆ ಶಿಕ್ಷಣ ರಾಜಮಾರ್ಗ, ಶಿಕ್ಷಣದ ದಾರಿದೀಪದಿಂದಾಗಿ ಬದುಕು ಸುಂದರವಾಗಿ ರೂಪುಗೊಳ್ಳಬಲ್ಲದು ಆದ್ದರಿಂದ ಪಾಲಕರು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು.
ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ ಮಾತನಾಡಿ ಸ್ಪರ್ಧಾತ್ಮಕ ಇಂದಿನ ದಿನಗಳಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಸಾಕಾಗದು ಅದರೊಟ್ಟಿಗೆ ಚಾಣಾಕ್ಷತನ, ವಿಶೇಷ ಪರಿಣಿತಿ ಮುಖ್ಯ ಈ ಎಲ್ಲ ಅಂಶಗಳನ್ನು ಹೊಂದಿರುವ ಅಭ್ಯರ್ಥಿಗೆ ಹೆಚ್ಚಿನ ಬೇಡಿಕೆ ಸಿಗುವದು ಅಂತಹ ಅವಕಾಶಗಳು ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ ಅವರ ಬದುಕು ಬಂಗಾರವಾಗಲಿ ಶಾಲೆಯಲ್ಲಿ ಗುರುಗಳು ಹೇಳುವ ಪಾಠವನ್ನು ಸರಿಯಾಗಿ ಆಲಿಸಿ ಶೃದ್ಧೆಯಿಂದ ಅಧ್ಯಯನ ನಡೆಸಬೇಕೆಂದರು.
ಕ್ಲಬ್‌ನ ಪದಾಧಿಕಾರಿಗಳು ಶಾಲಾ ಆಡಳಿತಾಧಿಕಾರಿ ಶ್ರೀಮತಿ ಜಿ.ಬಿ.ಬೇವಿನಕಟ್ಟಿ, ಹೈಸ್ಕೂಲ್ ಮುಖ್ಯೋಪಾಧ್ಯಾಯ ಸಿ.ಯು.ಹುಲಿಕಂಠಿಮಠ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಎಸ್.ವ್ಹಿ.ಶಿಗ್ಲಿ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಡಾ.ಎಸ್.ರಾಧಾಕೃಷ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕ್ಲಬ್‌ನ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ಶಿವಕುಮಾರ ಪಾಟೀಲ, ರಮೇಶ ಶಿಗ್ಲಿ, ರಘು ಮೇಹರವಾಡೆ, ಲಯನ್ಸ್ ಮಹಿಳಾ ಘಟಕದ ಕಾರ್ಯದರ್ಶಿ ಸುರೇಖಾ ಮಲ್ಲಾಡದ, ಖಜಾಂಚಿ ಸಹನಾ ಆರ್.ಹಿರೇಮಠ ಸೇರಿದಂತೆ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.