ಕಳಸಾಪುರದಲ್ಲಿ ರಾಘವೇಂದ್ರ ಮಠ ಉದ್ಘಾಟನೆ: ಡಿ. ಆರ್ . ಪಾಟೀಲ

17GDG03
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಕಳಸಾಪುರ ಗ್ರಾಪಂ ವ್ಯಾಪ್ತಿಯಲ್ಲಿ ನಂಜನಗೂಡು ಮಂತ್ರಾಲಯ ರಾಘವೇಂದ್ರ ಶಾಖಾ ಮಠದ ಉದ್ಘಾಟನೆ ಕಾರ್ಯಕ್ರಮವು ಮೆ. 30 ಮತ್ತು 31 ರಂದು ನಡೆಯಲಿದೆ ಎಂದು ಮಾಜಿ ಶಾಸಕ ಡಿ. ಆರ್. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಲ್ಲ ಧರ್ಮೀಯರು ಸಮಾನ ದೃಷ್ಟಿಯಿಂದ ರಾಘವೇಂದ್ರ ಮಠವನ್ನು ಕಾಣುತ್ತಾರೆ. ಜಾತಿ, ಮತ ಪಂಥಗಳು ಆಚೆಗೆ ಮಾನವೀಯತೆ ಸೃಷ್ಟಿಸಬೇಕಿದೆ. ಅಂತಹ ಮಾನವೀಯತೆಯನ್ನು ಬೆಳೆಸುವಲ್ಲಿ ರಾಘವೇಂದ್ರ ಮಠ ಮುನ್ನುಡಿ ಬರೆದಿದೆ. ನಿಸ್ವಾರ್ಥ ದಿಂದ ಎಲ್ಲವೂ ಒಂದಾಗಿ ಬದುಕಬೇಕಿದೆ. ಹಾಗಾಗಿ ಇಂತಹ ಕೇಂದ್ರಗಳು ಅವಶ್ಯಕತೆ ಇದೆ ಎಂದು ತಿಳಿಸಿದರು.
ಮಠದ ಅಭಿವೃದ್ಧಿಗೆ 1.70 ಕೋಟಿ ಕರ್ಚಾಗಿದೆ. ಮಠ ನಿರ್ಮಾಣಕ್ಕೆ ಸಮುದಾಯದವರು ದೇಣಿಗೆಯನ್ನು ನೀಡಿದ್ದಾರೆ.
ಮಠದಲ್ಲಿ ಗರ್ಭಗುಡಿ ಬೃಂದಾವನ, ವಿಶ್ರಾಂತಿ ಗೃಹ, ಪ್ರವಚನ ಪ್ರಾಂಗಣ, ಉಗ್ರಾಣ, ಕಾಷ್ಟ ರಥ, ಪಲ್ಲಕ್ಕಿ, ಕಲ್ಲಿನ ಅನೆಗಳು, ಬೆಳ್ಳಿ ಮೂರ್ತಿ ಸೇರಿದಂತೆ ಮಠದಲ್ಲಿ ಹಲವು ಸಾಮಗ್ರಿಗಳನ್ನು ಭಕ್ತರು ದೇಣಿಗೆ ರೂಪದಲ್ಲಿ ನೀಡಿ ಶಾಖಾ ಮಠದ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.
ಗೋಪಲ ಅಗರವಾಲ, ಗುರಣ್ಣ ಬಳಗಾನೂರು, ಶ್ರೀನಿವಾಸ ಹುಬ್ಬಳ್ಳಿ, ಪ್ರಭು ಬುರಬುರೆ, ಕೃಷ್ಣಗೌಡ ಪಾಟೀಲ, ವಾಸಣ್ಣ ಕುರಡಗಿ, ಅಶೋಕ ಮಂದಾಲಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net