

ವಿಜಯವಾಣಿ ಸುದ್ದಿಜಾಲ ಗದಗ
ಪ್ರಖ್ಯಾತ ಪ್ರವಚನಕಾರ ಡಾ. ಪಾವಗಡ ಪ್ರಕಾಶರಾವ್ ಅವರಿಂದ ಭಗವದ್ಗೀತಾ ಪ್ರವಚನ ಕಾರ್ಯಕ್ರಮವನ್ನು ನ. 11 ರಿಂದ 28 ಪ್ರತಿ ದಿನ ಸಂಜೆ 6 ರಿಂದ 7.30ರವರೆಗೆ ನಗದ ಕಳಸಾಪೂರ ರಸ್ತೆಯ ನಂದೀಶ್ವರ ನಗರದಲ್ಲಿರುವ ಸದಾಶಿವಾನಂದ ಗಾರ್ಡನ್ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ಪತ್ರಿಕಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವಚನ ಕಾರ್ಯಕ್ರಮದ ಉದ್ಘಾಟನೆಯು ನ. 11 ರಂದು ಸಂಜೆ 5 ಗಂಟೆಗೆ ನೆರವೇರಲಿದೆ. ಸಾನ್ನಿಧ್ಯವನ್ನು ಅಭಿನವ ಶಿವಾನಂದ ಶ್ರೀಗಳಲು ವಹಿಸಲಿದ್ದಾರೆ. ನಿರ್ಭಯಾನಂದ ಸರಸ್ವತಿ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ. ಸಚಿವ ಎಚ್. ಕೆ. ಪಾಟೀಲ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು ಎಂದರು.
ನಾವೆಲ್ಲ ಒಂದು ಎನ್ನುವ ಭಾವ ಈ ಸಮಾಜದಲ್ಲಿ ಬೆಳಸಬೇಕಿದೆ. "ಒಂದು' ಎನ್ನುವ ಭಾವ ಒಡೆದರೆ ಸಮಾಜದಲ್ಲಿ ಬೆಳವಣಿಗೆ ಅಸಾಧ್ಯ. ಸಮಾಜದಲ್ಲಿ ಏಕತೆ ರೂಪಿಸಲು ಕಳೆದೆ ಕೆಲ ವರ್ಷಗಳಿಂದ ಪ್ರಕಾಶ ರಾವ ಅವರ ಪ್ರವಚನ ನಡೆಯುತ್ತ ಬಂದಿದೆ. ಈ ವರ್ಷವು ಮುಂದು ವರಿಯಲಿದೆ ಎಂದು ಡಿ.ಆರ್. ಪಾಟೀಲ ಹೇಳಿದರು.
ಆದರ್ಶ ಸಮಾಜ ಕಟ್ಟಲು, ಪ್ರೇರಣೆ ಪಡೆಯಲು, ಶ್ರೇಷ್ಠ ಉಪನ್ಯಾಸಕ್ಕೆ ಈ ಪ್ರವಚನ ಆಲಿಸುವುದು ಸೂಕ್ತ. ಕಾರ್ಯಕ್ರಮಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು. ಮಾಜಿ ಶಾಸಕರು ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಎಸ್. ಬಿ.ಶೆಟ್ಟರ, ಶಂಕರ್ ಹೂಗಾರ, ವಾದಿರಾಜ ರಾಯ್ಕರ್, ಡಾ. ಕಲ್ಲೇಶ ಮೂರಶಿಳ್ಳಿನ, ಅನಿಲ ವೈದ್ಯ, ಗುರಣ್ಣ ಬಳಗಾನೂರ, ಅಶೋಕ ಮಂದಾಲಿ ಇತರರು ಇದ್ದರು.