ಪ್ರಾಣ ಉಳಿಸಲು ವೈದ್ಯರು ತೋರುವ ಕರ್ತವ್ಯ ನಿಷ್ಠೆ ಬಹಳ ಮುಖ್ಯ  : ಸೋನಿಯಾ ಕರೂರ

1000587024
Published on
ಗದಗ : ಪ್ರಸ್ತುತ ಸಮಾಜದಲ್ಲಿ ವೈದ್ಯಕೀಯ ಸೇವೆ ಬಹಳ ಮುಖ್ಯ, ವೈದ್ಯಕೀಯ ಸೇವೆ ನೀಡುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ಒಂದು ಪ್ರಾಣ ಉಳಿಸುವಲ್ಲಿ ವೈದ್ಯರು ತೋರುವ ಕರ್ತವ್ಯನಿಷ್ಠೆ ಬಹಳ ಮುಖ್ಯವಾದದ್ದು ಎಂದು ಮಹಿಳಾ ವೈದ್ಯಕೀಯ ಸಂಘದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಕರೂರ ಹೇಳಿದರು. ಅವರು ನವಜ್ಯೋತಿ ವ್ಯಸನಮುಕ್ತಿ ಕೇಂದ್ರದಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.
ಸಮಯದ ಹಂಗಿಲ್ಲದೆ ರೋಗಿಯೊಬ್ಬನ ಆರೈಕೆ ಮಾಡುವ ವೈದ್ಯರ ಸೇವೆ,ತ್ಯಾಗ,ಸಮಯ ಪ್ರಜ್ಞೆ ಸಮಾಜಕ್ಕೆ ಬಹಳ ಅವಶ್ಯವಾಗಿದೆ. ನಾನೂ ಕೂಡ ವೈದ್ಯಕೀಯ ವೃತ್ತಿಯಲ್ಲಿದ್ದು ಈ ವೃತ್ತಿಯ ಎಲ್ಲಾ ಮಜಲುಗಳನ್ನು ಕಂಡು ಈ ವೃತ್ತಿಯಲ್ಲಿರುವವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಹೆಮ್ಮೆ ಇದೆ ಎಂದರು.
ಕಾರ್ಯಕ್ರದ ಅಧ್ಯಕರಾದ ಶ್ರೀ ಬಸವರಾಜ ಬೇವಿನಮರದ ಮಾತನಾಡಿ ನಮ್ಮ ಪರಂಪರೆಯಲ್ಲಿ ವೈದ್ಯೋ ನಾರಾಯಣೊ ಹರಿ ಎಂದು ವೈದ್ಯರಿಗೆ ಗೌರವ ನೀಡಲಾಗಿದೆ. ಎಷ್ಟೋ ಜನರು ಇವತ್ತು ವೈದರಿಂದ ಮರುಜೀವ ಪಡೆದು ಬದುಕಿದ್ದರೆ. ಅಂತಹ ವೈದರ ಸೇವೆಯನ್ನು ಸಮಾಜ ನೆನಪಿಡಬೇಕು ಎಂದು ಹೇಳಿದರು. ಭಾಗ್ಯಲಕ್ಷ್ಮಿ ನವಲಗುಂದ್ ಸ್ವಾಗತಿಸಿದರು ಶಿವಾನಂದ ಹಡಗಲಿ ನಿರೂಪಿಸಿದರು ಶ್ವೇತಾ ಕೋಲೇಕರ್ ಹೊಂದಿಸಿದರು. ಸಂಸ್ಥೆಯ ಸಿಬ್ಬಂದಿ ಹಾಗೂ ಚಿಕಿತ್ಸಾತ್ರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net