

ಇಲಾಖಾ ಕಾರ್ಯಕ್ರಮದ ಯಶಸ್ಸಿಗೆ ಪ್ರಯತ್ನ: ಡಾ. ಬಸರಿಗಿಡದ
ವಿಜಯವಾಣಿ ಸುದ್ದಿಜಾಲ ಗದಗ
ಸಮಾಜಮುಖಿ ಕೆಲಸಗಳ ಜತೆಗೆ ಇಲಾಖಾ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಗದಗ ಜಿಲ್ಲಾ ಸರ್ಕಾರಿ ವೈದ್ಯರ ಸಂದ ಅಧ್ಯ ಡಾ. ರಾಜೇಂದ್ರ ಬಸರಿಗಿಡದ ಹೇಳಿದರು.
ನಗರದ ಐಎಂಎ ಸಭಾ ಭವನದಲ್ಲಿ ಮಂಗಳವಾರ ರಾಜ್ಯ ವೈದ್ಯಾಧಿಕಾರಿಗಳ ಸಂದ ಶಾಖೆಯಿಂದ ಜರುಗಿದ ವೈದ್ಯರ ದಿನಾಚರಣೆಯಲ್ಲಿ ಅಧ್ಯತೆ ವಹಿಸಿ ಮಾತನಾಡಿದ ಅವರು, ವೈದ್ಯರ ವೃತ್ತಿ ಪ್ರತಿ ಕ್ಷಣವು ಸವಾಲಾಗಿರುತ್ತದೆ. ಎಲ್ಲರೊಳಗೆ ಒಂದಾಗಿ ಸೇವೆ ಸಲ್ಲಿಸುವ ಮನೋಭಾವ ಬೆಳಸಿಕೊಳ್ಳಬೇಕು. ಜನರೊಂದಿಗೆ ಸೂಕ್ಷ$್ಮತೆಯಿಂದ ವತಿರ್ಸಬೇಕು ಎಂದು ತಿಳಿಸಿದರು.
ಐಎಂಎ ಅಧ್ಯ ಜಿ.ಎಸ್. ಪಲ್ಲೇದ ಮಾತನಾಡಿ, ಸಂದ ಚಟುವಟಿಕೆಗಳ ಜತೆಗೆ ಸಂದ ಸದಸ್ಯರು ಸಮಾಜಮುಖಿ ಕಾರ್ಯಗಳನ್ನು ಸಮುದಾಯದಲ್ಲಿ ಸಂದ ವತಿಯಿಂದ ಮಾಡಲು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯಶ್ರೀ ಪ್ರಶಸ್ತಿ ಪಡೆದ ಜಿಲ್ಲೆಯ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೆವಾಲೆ, ಡಾ. ಅರವಿಂದ ಕಂಬಳಿ ಅವರನ್ನು ಸನ್ಮಾನಿಸಲಾಯಿತು. ಸಂದ ಕಾರ್ಯದಶಿರ್ ವೆಂಕಟೇಶ ರಾಠೋಡ, ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ವೈ. ಕೆ. ಭಜಂತ್ರಿ, ಡಾ. ವೈ. ಕೆ. ಭಜಂತ್ರಿ, ಡಾ. ಐ. ಬಿ ಹಳೇಮನಿ, ಡಾ. ಅರುಂಧತಿ ಕುಲಕಣಿರ್ ಇತರರು ಇದ್ದರು.