

ಗದಗ: ಜಿಲ್ಲೆಯಾದ್ಯಂತ ದೀಪಾವಳಿಯ ಹಬ್ಬದ ನೆಪದಲ್ಲಿ ಎಲ್ಲ ಅಂಗಡಿ ಮನೆ ಹಾಗೂ ುಟ್ಪಾತ್ನಲ್ಲಿ ಪೆಂಡಾಲ್ ಹಾಕಿ, ಸುತ್ತಲೂ ಪರದೆ ಕಟ್ಟಿ ರಾಜಾರೋಷವಾಗಿ ಇಸ್ಪೇಟ್ ಮತ್ತು ಜೂಜಾಟ ಆಡುವುದನ್ನು ನಿಷೇಧಿಸಬೇಕು ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋ- ಸಂಸ್ಥೆ ಜಿಲ್ಲಾ ಟಕದ ಕಾರ್ಯದಶಿರ್ ಮಂಜುನಾಥ ಹದ್ದಣ್ಣವರ ಬುಧವಾರ ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಬರಗಾಲದ ಪರಿಸ್ಥಿತಿಯಿಂದ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿರುವಾಗ ಈ ಇಸ್ಪೇಟ್ ಹಾಗೂ ಜೂಜಾಟದಿಂದ ಬಹಳಷ್ಟು ಕುಟುಂಬಗಳು ಹಣ ಕಳೆದು ಬಿದಿಗೆ ಬರುತ್ತವೆ. ಸಮಸ್ಯೆಗಳ ಸುಳಿಗೆ ಸಿಲುಕಿ, ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು, ಮಹಿಳೆಯರ ತಾಳಿಯನ್ನು ಅಡುವಿಟ್ಟು ಜೂಜಾಟ ಆಡುತ್ತಿರುವುದರಿಂದ ತಾಯಂದಿರು ಹಾಗೂ ಮಹಿಳೆಯರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಎಲ್ಲರ ಬಾಳಿನಲ್ಲಿ ಬೆಳಕು ಚಲ್ಲುವ ದೀಪಾವಳಿ ಹಬ್ಬದ ದಿನವೇ ಸಾವಿರಾರು ಕುಟುಂಬಗಳು ಕಂಗಾಲಾಗಿ ಬೀದಿಗೆ ಬಿಳುತ್ತಿರುವುದು ವಿಷಾದನೀಯ. ಹಾಗಾಗಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಶೈಲೇಂದ್ರ ಶೆಂಬೇಕರ, ಪ್ರಕಾಶ ಬನ್ನಿಗಿಡದ, ಹನಮಂತ ಪಲದೊಡ್ಡಿ, ಶೇಖಸಾಬ ಕಾತರಕಿ, ಡಾ. ಸಿ. ಎಸ್. ಹನಮಂತಗೌಡ್ರ, ಮಂಜುನಾಥ ಆಸಂಗಿ, ಶಂಕರಗೌಡ ಪಾಟೀಲ, ಕಿರಣ ಶೆಂಬೇಕರ, ಸುರಜ ಶೆಂಬೇಕರ, ಸೋಮಶೇಖರ್ಯ ಕಂಬಿಮಠ, ಈರಣ್ಣಾ ಮಲ್ಲಾಡದ ಇತರರು ಇದ್ದರು.