

ವಿಜಯವಾಣಿ ಸುದ್ದಿಜಾಲ, ಗದಗ
ನಗರದ ಚಿಕ್ಕಟ್ಟಿ ಶಾಲೆಯಲ್ಲಿ ಸೋಮವಾರ ಅಪರಾಧ ತಡೆ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊಲೀಸ್ ಇನ್ಸಪೆಕ್ಟರ್ ಸಿದ್ಧರಾಮೇಶ್ವರ ಗಡೇದ, ತಂತ್ರಜ್ಞಾನ ಮುಂದುವರೆಯುವ ಮೊದಲು ಬಸ್ ದರೋಡೆ, ಮನೆ ಕಳ್ಳತನ ಹೀಗೆ ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದರು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಣ ಕೊಡಲು ಹೋಗುವಾಗ ವ್ಯಕ್ತಿಯನ್ನು ಹಿಡಿದು ಹೊಡೆದು ಬಡಿದು ದರೋಡೆ ಮಾಡುತ್ತಿದ್ದರು. ಮಾನವನು ಬುದ್ಧಿವಂತಿಕೆಯಿಂದ ಹಣ, ಚಿನ್ನಾಭರಣಗಳನ್ನು ಬ್ಯಾಂಕಗಳಲ್ಲಿ ಜಮಾ ಮಾಡಲು ಆರಂಭಿಸಿದಾಗ ಬ್ಯಾಂಕ್ ದರೋಡೆ ಮಾಡಲು ಆರಂಭಿಸಿದರು. ಹಣವನ್ನು ೋ ಮೂಲಕ ವರ್ಗಾಯಿಸಲು ಆರಂಭಿಸಿದಾಗ ಕಳ್ಳರು ಸಹ ಅಪ್ಡೇಟಾಗಿ ಆನ್ಲೈನ್ನಲ್ಲಿಯೇ ಹಣ ದೋಚುವದನ್ನು ಕಲಿತರು. ಹೀಗೆ ತಂತ್ರಜ್ಞಾನ ಬೆಳೆದಂತೆ ಅಪರಾಧ ಪ್ರಕರಣಗಳ ವೈಖರಿ ಬದಲಾಗುತ್ತಿದೆ. ದರೋಡೆಕೋರರು ಆನ್ಲೈನ್ ಮೂಲಕ 2024 ನೇ ಜನೆವರಿಯಿಂದ ಡಿಸೆಂಬರ್ ವರೆಗೆ ಒಂದೇ ವರ್ಷದಲ್ಲಿ 3340 ಕೋಟಿ ಹಣವನ್ನು ದೋಚಿದ್ದಾರೆ. ಜನರು ಎಚ್ಚರ ವಹಿಸಬೇಕು. ಅನಾಮಿಕ ಕರೆಗಳನ್ನು ಸ್ವೀಕರಿಸಬಾರದು. ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಮಾಹಿತಿ ನಿಡಬಾರದು ಎಂದು ಹೇಳಿದರು.
ನೂರರ ವೇಗದಲ್ಲಿ ಹೋಗಿ, ನೂರಾ ಎಂಟರಲ್ಲಿ ಬರುವಂತಾಗಬೇಡಿ:
ಬೈಕ್ ಸವಾರರು ಮಾತ್ರ ಎಷ್ಟೇ ತುರ್ತು ಕೆಲಸವಿದ್ದರೂ ನೂರರ ವೇಗದಲ್ಲಿ ಹೋಗಬಾರದು. ನೂರರ ವೇಗದಲ್ಲಿ ಹೋಗುವಾಗ ಅಪಾಯದ ಮುನ್ಸೂಚನೆಗಳು ಹೆಚ್ಚಿರುತ್ತವೆ. ಶರವೇಗದಲ್ಲಿ ಹೋಗುವುದು ಗಾಡಿಗೂ ನಮ್ಮ ಬಾಡಿಗೂ ಎರಡಕ್ಕೂ ಒಳ್ಳೆಯದಲ್ಲ ವೇಗ ಹೆಚ್ಚಾದಂತೆಲ್ಲ ಮೈಲೇಜು ಸಹ ಕಡಿಮೆಯಾಗುತ್ತದೆ. ರ್ಷಣೆ ಹೆಚ್ಚಾಗಿ ಎಂಜಿನ್ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಸಹ ಹೆಚ್ಚಿರುತ್ತದೆ ಎಂದು ನುಡಿದರು.
ಪ್ರೊ. ಎಸ್. ವೈ. ಚಿಕ್ಕಟ್ಟಿ, ಶೋಭಾ ಸ್ಥಾವರಮಠ, ಅನಿಲ್ ನಾಯಕ್, ಶ್ರೀಶೈಲ ಬಡಿಗೇರ ಇತರರು ಇದ್ದರು.