.
ಗದಗ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಡಾ.ಹೆಚ್.ಎಲ್ ಗಿರಡ್ಡಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಾಂಕ್ರಾಮಿಕ ರೋಗಗಳಾದ ಡೆಂಗೀ, ಚಿಕುನ್‌ಗುನ್ಯಾ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗ, ಮತ್ತು ಜಿಕಾ ವೈರಸ್ ಸೊಳ್ಳೆಗಳಿಂದ ಹರಡುವಂತಹ ರೋಗಳಾಗಿವೆ. ಮುಂಗಾರಿನ ಮಳೆಗಾಲದಲ್ಲಿ ಮಳೆ ಪ್ರಾರಂಭವಾದ ಕುರಿತು ರೋಗಗಳು ಹರಡುವ ಬಗ್ಗೆ ಕಾಯಿಲೆಗಳಿಂದ ಮನುಷ್ಯರಲ್ಲಿ ಕಾಣುವ ಲಕ್ಷಣಗಳು ಮುಖ್ಯವಾಗಿ ಡೆಂಗೀ ಕಾಯಿಲೆಯಲ್ಲಿ ಹಣೆಯ ಮುಂಭಾಗದಲ್ಲಿ ನೋವು, ಕಣ್ಣುಗಳ ಚಲನೆಯ ತೊಂದರೆ, ಮಾಂಸ ಖಂಡಗಳ ನೋವು, ವಿಪರೀತ ಜ್ವರ, ಹೋಟ್ಟೆ ನೋವು, ಸುಸ್ತು, ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ ಎಂದು ವಿವರಿಸುತ್ತಾ ಇವುಗಳ ಚಿಕಿತ್ಸಾ ವಿಧಾನದ ಬಗ್ಗೆ ಯಾವುದೇ ಜ್ವರ ಇರಲಿ ರಕ್ತ ಪರೀಕ್ಷೆಯ ಮಾಡಬೇಕೆಂದು ಮತ್ತು ಮಲೇರಿಯಾ ಕುರಿತು ಮಾತನಾಡುತ್ತಾ ಮಲೇರಿಯಾ ರೋಗವು ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ರೋಗ ಬರುತ್ತದೆ, ಹೆಚ್ಚಾನ ಹೆಚ್ಚು ಗೋವಾ, ದಕ್ಷಿಣ ಕನ್ನಡ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಲೇರಿಯಾ ರೋಗವು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ನಮ್ಮ ಭಾಗದ ಜನರು ಅಲ್ಲಿ ದುಡಿಯಲಿಕ್ಕೆ ಹೋದತಂಹ ಸಂದರ್ಭದಲ್ಲಿ ಮಲೇರಿಯಾ ರೋಗ ಕಾಣಿಸಿಕೊಳ್ಳುತ್ತದೆ, ಅವರಲ್ಲಿ ಮಾಂಸ ಖಂಡಗಳ ನೋವು, ವಿಪರೀತ ಜ್ವರ, ಬೇವರುವುದು, ಜ್ವರ ಬಿಟ್ಟು ಜ್ವರ ಬರುವುದು, ಹೋಟ್ಟೆ ನೋವು, ಸುಸ್ತು ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ, ಮರಳಿ ಈ ಭಾಗಕ್ಕೆ ಬಂದಾಗ ಆಶಾ ಕಾರ್ಯಕರ್ತೆಯರು & ಆರೋಗ್ಯ ಇಲಾಖಾ ಸಿಬ್ಬಂದಿ ವರ್ಗದವರು ಬೇಟಿ ನೀಡಿ ರಕ್ತ ಪರೀಕ್ಷೆ ಮಾಡಿ ಮಲೇರಿಯಾ ಖಚಿತಪಟ್ಟ ರೋಗಿಗೆ ಚಿಕಿತ್ಸೆ ನೀಡುತ್ತಾರೆ, ಎಂದು ತಿಳಿಸಿದರು.