ಜಿಲ್ಲಾ ಕಸಾಪ: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದರೊಂದಿಗೆ ಮಾಸದ ಮಾತು ಕಾರ್ಯಕ್ರಮ

05GDG06
Published on

ಗದಗ: ಯಾವುದೇ ಲಿಖಿತ ಭಾಷೆ ಇಲ್ಲದ ಸಂಸ್ಕೃತಿಗಳ ಸಿದ್ಧಾಂತ ಕಲೆ ಸಾಹಿತ್ಯ ನೃತ್ಯ ಡೊಳ್ಳು ಕುಣಿತ ಕಂಸಾಳೆ ಕರಡಿ ಮಜಲು ವೀರಗಾಸೆ ನಂದಿಕೋಲು ಕುಣಿತ ನಾಟಕ ಬಯಲಾಟ ದೊಡ್ಡಾಟ ಶ್ರೀ ಕೃಷ್ಣಪಾರಿಜಾತ ಯಕ್ಷಗಾನ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣುತ್ತೇವೆ. ಜಾನಪದ ಸಂಸ್ಕೃತಿಯ ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡ ನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ. ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಾಯಶ: ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದು ಜಾನಪದವೊಂದೆ ಮನುಷ್ಯ ತಾನು ಮಾಡುವ ಕೆಲಸಗಳಲ್ಲೆಲ್ಲ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. ತನ್ನಿಂದ ತಾನೇ ಹರಿದುಬಂದ ಮಣ್ಣಿನ ಸಂಸ್ಕೃತಿಯ ಸಾರವಾಗಿರುವುದು ಜಾನಪದವಾಗಿದೆಯೆಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ದಿಂದ ದಿನಾಂಕ 04 ರಂದು ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ ಕ.ಸಾ.ಪ ಕಾರ್ಯಾಲಯದಲ್ಲಿ ಮಾಸದ ಅತಿಥಿಯಾಗಿ ಆಗಮಿಸಿ ಮಾಸದ ಮಾತುಗಳನ್ನು ಮುಂದುವರೆದು ಮಾತನಾಡಿ ಜನಪದ ಹುಟ್ಟಿದ್ದು ಜನರ ಹೃದಯದಿಂದ ಮಣ್ಣಿನ ವಾಸನೆ ಮಳೆಯ ವಾಸನೆ ಅಜ್ಜಿಯ ಒಡಲಲ್ಲಿ ಅಪ್ಪನ ಭುಜದ ಮೇಲೆ ಮಲಗಿದ್ದು ಜನಪದ ಹೀಗೆ ಅನೇಕ ಪ್ರಕಾರಗಳಲ್ಲಿ ಸಮಾಜವನ್ನು ಕಟ್ಟುವಲ್ಲಿ ಜನಪದ ಹಾಸುಹೊಕ್ಕಾಗಿದೆ.
ಇವತ್ತು ನಾವು ಕಾಣುತ್ತಿರುವ ಜಗತ್ತೇ ಬೇರೆಯಾಗಿದೆ. ನೂರಾ ನಲವತ್ತು ಕೋಟಿ ಜನಸಂಖ್ಯೆಯಲ್ಲಿ ನಾನೂರು ಕೋಟಿ ಮೊಬೈಲ್ ಇಟ್ಟುಕೊಂಡಿದ್ದೇವೆ ನಮ್ಮೊಳಗಡೆ ನಾವಿದ್ದಿವಾ ಮೊಬೈಲ್ ಒಳಗಡೆ ನಾವಿದ್ದಿವಾ ಎನ್ನುವ ಪ್ರಶ್ನೆ ಕಾಡುತ್ತಿದೆ.ಮಕ್ಕಳಿಗೆ ಜಾನಪದದ ಚಟುವಟಿಕೆಗಳನ್ನು ಬಿತ್ತಬೇಕು. ಮಕ್ಕಳಿಗೆ ನಿಜವಾದದ್ದನ್ನು ಹೇಳದೇ ಹೋದರೆ ಭವಿಷ್ಯದಲ್ಲಿ ಅವರಿಗೆ ಧಾನ್ಯಗಳು ಬೆಳೆಗಳ ತಿಳುವಳಿಕೆ, ಅದರ ಮೂಲ ಗೊತ್ತಿಲ್ಲ ಅವರಿಗೆ ಜನಪದದ ಅರಿವು ಮೂಡಿಸಬೇಕೆನ್ನುವ ಮಾರ್ಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಜನಪದರ ಹಾಡು ಲಾವಣಿ ಕಥೆ ಪ್ರಸಂಗಗಳನ್ನು ಮಕ್ಕಳಿಗೆ ಮನದಟ್ಟು ಮಾಡುವಲ್ಲಿ ಅಕಾಡೆಮಿ ಸಾಹಿತ್ಯ ಪರಿಷತ್ತಿಗೆ ಕಾರ್ಯಕ್ರಮಗಳನ್ನು ಕೊಡುತ್ತದೆ. ಅವುಗಳನ್ನು ಗದುಗಿನಲ್ಲಿ ಮಾಡುವಂತೆ ಸಲಹೆ ನೀಡಿದರು.
ಜನಪದ ಕಲಾವಿದರನ್ನು ಗುರುತಿಸಿ ಅವರಿಗೆ ಮಾಶಾಸನ ನೀಡುವ ದಿಸೆಯಲ್ಲಿ ಅವರಿರುವ ಸ್ಥಳಕ್ಕೇ ಹೋಗಿ ಅವರ ಅಹವಾಲುಗಳನ್ನು ಆಲಿಸಬೇಕೆನ್ನುವ ಹಂಬಲದಿAದ ಗದುಗಿಗೆ ಬಂದಿರುವುದು. ಕಾರ್ಯಕ್ಷೇತ್ರವನ್ನು ಬೆಂಗಳೂರಿಗೆ ಸೀಮಿತವಾಗಿ ಮಾಡುವ ಬದಲಾಗಿ ಬೆಳಗಾವಿ ಮೈಸೂರ ಬೆಂಗಳೂರು ಗದಗ ಬಂದು ಅವರನ್ನು ಮುಖತ: ಭೇಟಿ ಮಾಡಿ ಗುರುತಿಸಬೇಕೆನ್ನುವದಾಗಿದೆಯೆಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ನುಡಿದರು.
ಸಂವಾದ ಕಾರ್ಯಕ್ರಮದಲ್ಲಿ ಪ್ರೊ ಚಂದ್ರಶೇಖರ ವಸ್ತçದ ಮಾತನಾಡಿ ಸಾಮರಸ್ಯದ ಕುರಿತಾಗಿ ಬದುಕಿನ ಅಪಸವ್ಯಗಳನ್ನು ತೆಗೆದುಹಾಕಲು ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಲು ಜನಪದವನ್ನು ಸಾಮರಸ್ಯದ ಕಡೆಗೆ ತೆಗೆದುಕೊಂಡು ಹೋಗುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂದು ಸಲಹೆ ನೀಡಿದರು. ಜಾನಪದ ವಿದ್ವಾಂಸ ಡಾ. ಸಿದ್ದಣ್ಣ ಜಕಬಾಳ ಸಿದ್ದಲಿಂಗೇಶ ಸಜ್ಜನಶೆಟ್ಟರ ಶಿವಾನಂದ ಭಜಂತ್ರಿ ಅನಿಲ ಕಾಳೆ ಪರಶು ಕಾಳಿ ಸಂವಾದದಲ್ಲಿ ಭಾಗವಹಿಸಿದ್ದರು.
ವೇದಿಕೆ ಮೇಲೆ ವಿವೇಕಾನಂದಗೌಡ ಪಾಟೀಲ ಗೊಲ್ಲಹಳ್ಳಿ ಶಿವಪ್ರಸಾದ ಶಂಕ್ರಣ್ಣ ಸಂಕಣ್ಣವರ ಡಾ. ಅರ್ಜುನ ಗೊಳಸಂಗಿ ಶಿವಾನಂದ ಗಿಡ್ನಂದಿ ಕಿಶೋರಬಾಬು ನಾಗರಕಟ್ಟಿ ಉಪಸ್ಥಿತರಿದ್ದರು.
ಜಾನಪದ ಅಕಾಡೆಮಿ ಸದಸ್ಯ ಹಾಗೂ ಹೆಸರಾಂತ ಕಲಾವಿದ ಶಂಕ್ರಣ್ಣ ಸಂಕಣ್ಣವರ ಹಾಗೂ ಶರೀಫ್ ಬಿಳೆಯಲಿ ತಂಡದಿAದ ಪ್ರಕೃತಿ ಗೀತೆ ಹಾಗೂ ಕ್ರಾಂತ್ರಿಗೀತೆಗಳ ಗಾಯನವಾಯಿತು.
ಅಧ್ಯಕ್ಷತೆ ವಹಿಸಿ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ ಜಾನಪದ ಅಕಾಡೆಮಿಗೆ ಅದರ ಒಳ-ಹೊರಗನ್ನು ಅರ್ಥೈಸಿಕೊಂಡ ಸಮರ್ಥ ವ್ಯಕ್ತಿ ಅಧ್ಯಕ್ಷರಾಗಿ ಬಂದಿರುವುದು ಸಂತೋಷ ತಂದಿದೆ. ತಮ್ಮ ಅವಧಿಯಲ್ಲಿ ಜನಪದದ ಸಂಸ್ಕೃತಿಯನ್ನು ಹೊಂದಿರುವ ಗದುಗಿನ ಪರಿಸರದಲ್ಲಿ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಮಕ್ಕಳ ಬಗೆಗೆ ಏನಾದರೂ ಕಾರ್ಯಗಳು ಆಗಲಿ ಸಾಹಿತ್ಯ ಪರಿಷತ್ತು ಅದನ್ನು ನಡೆಸಿಕೊಡುತ್ತದೆಂದರು.
ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಶೇಖರ ವಸ್ತçದ ಡಾ. ಸಿದ್ದಣ್ಣ ಜಕಬಾಳ ಡಾ. ಬಿ ಬಿ ಹೊಳಗುಂದಿ ಚಂದ್ರಶೇಖರ ಮಾರನಬಸರಿ ಎಸ್ ಎಸ್ ಕಳಸಾಪುರಶೆಟ್ರು ಬಸವರಾಜ ಗಣಪ್ಪನವರ ಬಿ ಬಿ ಪಾಟೀಲ ಶಿವಾನಂದ ಭಜಂತ್ರಿ ಮುತ್ತು ಬಿಳೇಯಲಿ ಶರೀಫ್ ಬಿಳೆಯಲಿ ಆನಂದ ಶಿಂಗಾಡಿ ಡಾ. ಅಕ್ಕಮಹಾದೇವಿ ರೊಟ್ಟಿಮಠ ಶಾಂತಾ ಬಿ ಗಣಪ್ಪನವರ ಎಚ್ ಟಿ ಸಂಜೀವಸ್ವಾಮಿ ಶಂಕರಗೌಡ ಪಾಟೀಲ ಎಸ್ ವಿ ಕುಂದಗೋಳ ಸಿದ್ದಲಿಂಗೇಶ ಸಜ್ಜನಶೆಟ್ಟರ ಎಚ್ ಬಿ ಶಾಡ್ಲಗೇರಿ ಶಿವು ಭಜಂತ್ರಿ ಶರಣಪ್ಪ ಹೊಸಂಗಡಿ ಪ್ರ ತೋ ನಾರಾಯಣಪುರ ಅಮರೇಶ ರಾಂಪುರ ಪ್ರೊ.ಶಶಿಕಾಂತ ಕೊರ್ಲಹಳ್ಳಿ ಶ್ರೀಮತಿಯರಾದ ರತ್ನಕ್ಕ ಪಾಟೀಲ ಪ್ರೊ ಶಕುಂತಲಾ ಸಿಂಧೂರ ರತ್ನಾ ಪುರಂತರ ಡಾ.ರಶ್ಮಿ ಅಂಗಡಿ ರಾಜೇಶ್ವರಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸರ್ವರನ್ನು ಸ್ವಾಗತಿಸಿದರು. ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net