ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ

19GDG07
ಗದಗ ಜಿಲ್ಲಾಸ್ಪತ್ರೆಯಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಪಂಡಿತ್​ ಪುಟ್ಟರಾಜ ರೈತ ಸಂದ ವತಿಯಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಎಂ ಅವರಿಗೆ ಮನವಿ ಸಲ್ಲಿಸಲಾಯಿತು. ಎಂ.ಪಿ. ಮುಳಗುಂದ, ದಾವಲಸಾಬ್​ ನಾಗನೂರ, ಎಂ. ಪಿ. ಶಲವಡಿ, ರೈತ ಸಂದ ಕಾರ್ಯಕರ್ತರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾಸ್ಪತ್ರೆಯಲ್ಲಿ ಸಮಪರ್ಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಪಂಡಿತ್​ ಪುಟ್ಟರಾಜ ರೈತ ಸಂದ ವತಿಯಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಎಂ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂದ ಅಧ್ಯ ಎಂ. ಪಿ. ಮುಳುಗುಂದ, ಜಿಲ್ಲಾ ಆಸ್ಪತ್ರೆಯಲ್ಲಿ ಸಾಕಷ್ಟು ಜನ ಬಡವರು ಹಳ್ಳಿಗಳಿಂದ, ಎಲ್ಲ ತಾಲೂಕುಗಳಿಂದ ಚಿಕಿತ್ಸೆಗಾಗಿ ಬರುತ್ತಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಆಹಾಕಾರ ಉಂಟಾಗಿದೆ. ಒಂದು ರೂಪಾಯಿ ನಾಣ್ಯದಿಂದ ಪಡೆಯುವ ಶುದ್ಧ ನೀರಿಗೆ ಎಲ್ಲರಲ್ಲಿ ನಾಣ್ಯಗಳು ಅಲಭ್ಯವಿರುವುದು ಮತ್ತು ಅಕ್ಕಪಕ್ಕದ ಅಂಗಡಿಯಲ್ಲಿ ನಾಣ್ಯವನ್ನು ಕೇಳಿದಾಗ ಅವರಲ್ಲಿ ಏನಾದರೂ ವಸ್ತು ಖರೀದಿಸಬೇಕು. ಅದಕ್ಕೆ 10 ರಿಂದ 20 ರೂಪಾಯಿ ರ್ಖಚಾಗುತ್ತದೆ ಅಥವಾ 20 ರೂಪಾಯಿ ನೀಡಿ ಒಂದು ಬಾಟಲ್​ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡವರು ತಮ್ಮ ದಿನನಿತ್ಯದ ಖಚಿರ್ನ ಹಣ ಅನಾವಶ್ಯಕವಾಗಿ ಖರ್ಚು ಮಾಡಿ ಕೈಖಾಲಿಯಾದ ಸ್ಥಿತಿಗೆ ಬರುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಮುತವಜಿರ್ ವಹಿಸಿ ಆದಷ್ಟು ಬೇಗನೆ ಜಿಲ್ಲಾ ಆಸ್ಪತ್ರೆಯ ಕನಿಷ್ಠ ನಾಲ್ಕು ಭಾಗಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಶುದ್ಧ ಕುಡಿಯುವ ನೀರಿನ ಟಕವನ್ನು ಉಚಿತವಾಗಿ ಪಡೆಯುವಂತೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿದರು.
ದಾವಲಸಾಬ್​ ನಾಗನೂರ, ಎಂ. ಪಿ. ಶಲವಡಿ, ರೈತ ಸಂದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net