ಗದಗ: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ: ಕಳಕಪ್ಪ ಬಂಡಿ, ಉಮೇಶಗೌಡ ಪಾಟೀಲ ಹೆಸರು ಮುಂಚೂಣಿ

20231124_180210
Published on

ವಿಜಯವಾಣಿ ವಿಶೇಷ, ಗದಗ
ಮಹತ್ವದ ಬೆಳವಣಿಗೆಯಲ್ಲಿ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ನಂತರ ಗದಗ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಸನ್ನಹಿತವಾಗಿದೆ. ವಿಜಯೇಂದ್ರ ಅವರ ರಾಜ್ಯಾದ್ಯಂತ ಪ್ರವಾಸದ ನಂತರ ಹಲವು ಜಿಲ್ಲೆಗಳಲ್ಲಿ ಅಧ್ಯಕ್ಷರ ಬದಲಾವಣೆ ದಟ್ಟವಾಗಿದೆ. ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಚುನಾವಣಾ ಪೂರ್ವ ಈ ಪ್ರಕ್ರಿಯೆ ನಡೆಯಲಿದೆ. ಕಾರ್ಯಾತ್ಮಕ ಪ್ರಭಾವಿ ಸಮುದಾಯದ ಸೂಕ್ತ ವ್ಯಕ್ತಿಗೆ ಜಿಲ್ಲಾಧ್ಯಕ್ಷ ಪಟ್ಟ ನೀಡಲು ತೆರೆಮರೆಯಲ್ಲಿ ಬಿಜೆಪಿ ಕಸರತ್ತು ನಡೆಸಿದೆ.
ಜಿಲ್ಲೆಯಲ್ಲಿ ಚಟುವಟಿಕೆಯುಕ್ತ ನಾಯಕನಿಗೆ ಆಧ್ಯತೆ ನೀಡಬೇಕು ಎಂಬ ಕೂಗು ಬಲವಾಗಿದೆ ಮತ್ತು ವಿಪಕ್ಷದಲ್ಲಿರುವ ಬಿಜೆಪಿಗೆ ಜಿಲ್ಲೆಯಲ್ಲಿ ಪ್ರಬಲ ನಾಯಕತ್ವ ಅನಿವಾರ್ಯವಾಗಿದೆ. ಜಿಲ್ಲಾ ಚಟುವಟಿಕೆಗಳನ್ನು, ಸಭೆಗಳನ್ನು ಸಮಾವೇಶಗಳನ್ನು ಎಲ್ಲ ದೃಷ್ಟಿಕೋನದಿಂದ ನಿಭಾಯಿಸಲ್ಲ ನಾಯಕರು ಅವಶ್ಯವಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಸಮುದಾಯಗಳನ್ನು ಸೆಳೆಯಬಲ್ಲಿ ಮತ್ತು ಪಕ್ಷದ ಮತಬ್ಯಾಂಕ್ ಚದುರದಂತೆ ನೋಡಿಕೊಳ್ಳಬಲ್ಲ ಪ್ರಬಲ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ಒಲಿಯಲಿದೆ ಎನ್ನಲಾಗಿದೆ. ಈ ಹಿನ್ನೆಲೆ ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಅವರ ಪುತ್ರ ಉಮೇಶಗೌಡ ಪಾಟೀಲ ಮತ್ತು ಮಾಜಿ ಶಾಸಕ ಕಳಕಪ್ಪ ಬಂಡಿ ಹೆಸರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಕೇಳಿ ಬರುತ್ತಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಈ ಬಾರಿಯ ಆಯ್ಕೆ ಪಕ್ಷದ, ಕಾರ್ಯಕರ್ತರಿಂದ ದೃಷ್ಟಿಯಿಂದ ಕುತೂಹಲ ಮೂಡಿಸಿದೆ.

ಉತ್ಸಾಹಿ ನಾಯಕನ ಅನಿವಾರ್ಯ:
ಜಿಲ್ಲೆಯಲ್ಲಿ ಸೂಕ್ತ ಜಿಲ್ಲಾ ಅಧ್ಯಕ್ಷರ ಹುಡುಕಾಟ ಕ್ಲಿಷ್ಟವಾಗಿದೆ. ಕಳೆದೆರೆಡು ವರ್ಷದಿಂದ ಮುತ್ತಣ್ಣ ಲಿಂಗನಗೌಡ್ರ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ಜಿಲ್ಲೆಯಲ್ಲಿ ಬಿಜೆಪಿಯ ರಚನಾತ್ಮಕ ಚಟುವಟಿಕೆಗಳಿಗೆ ಹಿನ್ನಡೆ ಆಗಿದೆ ಎಂಬ ಅಸಮಧಾನ ಕಾರ್ಯಕರ್ತರಲ್ಲಿದೆ. ತಮ್ಮ ಪ್ರಭಾವದಿಂದ ಪಕ್ಷ ಸಂಟಣೆ ಮತ್ತು ಕಾರ್ಯಕರ್ತರ ಸಂಪರ್ಕ ಸಾಧಿಸಲು ಮುತ್ತಣ್ಣ ಯಶಸ್ಸಾಗಿಲ್ಲ. ಪಕ್ಷ ಸಂಟನೆಯಲ್ಲಿ ಮುನ್ನುಗ್ಗುವ, ಯುವ ನಾಯಕರನ್ನು ಸೆಳೆಯುವ, ಬೂತ್ ಮಟ್ಟದ ಕಾರ್ಯಕರ್ತರನ್ನು ಆಲಿಸುವ, ಪಕ್ಷದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗೆ ಮುತ್ತಣ್ಣ ಲಿಂಗನಗೌಡ್ರ ಮುಂದಡಿ ಇಡಲಿಲ್ಲ. ಈ ಹಿನ್ನೆಲೆ ಪ್ರಬಲ ಕಾರ್ಯಕರ್ತ ಸಮೂಹ ಇದ್ದರೂ ಜಿಲ್ಲೆಯಲ್ಲಿ ಬಿಜೆಪಿ ಸೊರಗಿದೆ. ಈ ನಡುವೆ ನೂತನ ರಾಜ್ಯದ್ಯಾಕ್ಷರ ನೇಮಕ ನಂತರ ಜಿಲ್ಲೆಯಲ್ಲೂ ಬದಲಾವಣೆ ಸೂಕ್ತ ವ್ಯಕ್ತಿಯ ಹುಡುಕಾಟ ಶುರುವಾಗಿದೆ.  

ಮುಂಚೂಣಿಯಲ್ಲಿ ಹೆಸರುಗಳು?
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರೋಣ ಕ್ಷೇತ್ರದ ಮಾಜಿ ಶಾಸಕ ಕಳಕಪ್ಪ ಬಂಡಿ ಹಾಗೂ ಮಾಜಿ ಸಚಿವ, ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಹಿರಿಯ ಪುತ್ರ ಉಮೇಶಗೌಡ ಪಾಟೀಲ ಹೆಸರು ಕೇಳಿ ಬರುತ್ತಿದೆ. ಕಳಕಪ್ಪ ಬಂಡಿ ಅವರಿಗೆ ಅಂದಾಜು ಎರಡೂ ದಶಕಗಳ ಅಧಿಕ ಸಕ್ರೀಯ ರಾಜಕೀದ ಅನುಭವ ಇದೆ. ಶಾಸಕ ಸ್ಥಾನದ ಜತೆಗೆ ವಿವಿಧ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇನ್ನೂ, ಉಮೇಶಗೌಡ ಪಾಟೀಲ ಅವರು ಕಳೆದೆರೆಡು ಚುನಾವಣೆಯಲ್ಲಿ ಸಿ.ಸಿ. ಪಾಟೀಲ ಸಕ್ರೀಯ ರಾಜಕಾರಣಕ್ಕೆ ಬೆಂಬಲ ನೀಡಿದ್ದಾರೆ. ಯುವಕರು ಹೌದು.  ಪ್ರಬಲ ವೀರಶೈವ ಲಿಂಗಾಯತ ಸಮುದಾಯವರೇ ಆಗಿರುವ ಇವರು, ಜಿಲ್ಲೆಯ ಬಿಜೆಪಿ ರಾಜಕೀಯ ಪರಿಸ್ಥಿತಿ ನಿಭಾಯಿಸಲು ಸೂಕ್ತರು ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ. ಆಯಾ ಕ್ಷೇತ್ರದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಬೇಕೆಂದು ಪ್ರತ್ಯೇಖವಾಗಿ ಭೇಟಿ ಮಾಡಿ ಈ ನಾಯಕರನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಅಧ್ಯಕ್ಷ ಆಯ್ಕೆಯ ಚೆಂಡು ಬಿಜೆಪಿ ಹಿರಿಯ ನಾಯಕರ ಅಂಗಳಕ್ಕೆ ಬಿದ್ದಿದೆ.

ವೀರಶೈವ ಲಿಂಗಾಯರಿಗೆ ಮಣೆ:
ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತರಾಗಿದ್ದರೂ, ಜ್ಯಾತ್ಯಾತಿತ ರಾಜಕಾರಣ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಹುದ್ದೆ ತಲುಪಿದ್ದಾರೆ. ಬಿಎಸ್ವೈ ಅನುಭವನ್ನು ರಾಜ್ಯ ರಾಜಕಾರಣದಲ್ಲಿ ಪರಿಣಾಮಕಾರಿ ಆಗಿ ಬಳಸಿಕೊಳ್ಳಲು ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಮತ್ತು ವಿಜಯೇಂದ್ರ ಅವರು ಸೂಕ್ತ ಅಭ್ಯಥಿರ್ಯೇ ಆಗಿದ್ದಾರೆ. ಜಿಲ್ಲೆಯಲ್ಲೂ ಲಿಂಗಾಯತರ ಪ್ರಾಬಲ್ಯ ಮತ್ತು ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಮತಗಳೆ ನಿರ್ಣಾಯಕ ಆಗಿರುವುದರಿಂದ ವೀರಶೈವ ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ಒಲಿದು ಬರುವುದರಲ್ಲಿ ಅನುಮಾನ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net