

ವಿಜಯವಾಣಿ ಸುದ್ದಿಜಾಲ, ಗದಗ
ಪ್ರತಿಯೊಬ್ಬರ ಮನೆ ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುವ ಲಾರ್ವಾ ನಾಶ ಪಡಿಸುವುದರಿಂದ ಸೊಳ್ಳೆಗಳ ನಿಯಂತ್ರಣದ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಮಲೇರಿಯ ಡೆಂಘೀ ಚಿಕುನ್ಗುನ್ಯ ರೋಗಗಳನ್ನು ನಿಯಂತ್ರಣ ಮಾಡಬಹುದು. ಆದ್ದರಿಂದ ಆಶಾ ಕಾರ್ಯಕರ್ತೆಯರು ಲಾರ್ವಾ ಸಮೀೆ ಸರಿಯಾಗಿ ಮಾಡಿ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಎಚ್. ಎಲ್. ಗೀರಡ್ಡಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರ ತರಬೇತಿ ಮತ್ತು ಬ್ಯಾಟರಿಗಳನ್ನು ವಿತರಣಾ ಸಮಾರಂಭದಲ್ಲಿ ಬ್ಯಾಟರಿ ವಿತರಿಸಿ ಮಾತನಾಡಿದ ಅವರು, ಪ್ರತಿದಿನವೂ ನೀವು ಪ್ರತಿಯೊಂದು ಮನೆ ಬೇಟಿ ಮಾಡುವಾದ ಸಾರ್ವಜನಿಕರ ಪ್ರೀತಿಗೆದ್ದು ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಬೇಕು. ಸಾರ್ವಜನಿಕರಿಗೆ ಲಾರ್ವಾ ನಾಶದ ಪರಿಣಾಮದ ಬಗ್ಗೆ ಡೆಂಘೀ ಚಿಕುನ್ಗುನ್ಯ ರೋಗದ ಲಣದ ಬಗ್ಗೆ ಅರಿವನ್ನು ಮೂಡಿಸಬೇಕು. ವರದಿಗಳನ್ನು ಸರಿಯಾದ ಸಮಯಕ್ಕೆ ಕೋಡಬೇಕು. ಸಮನ್ವಯತೆಯಿಂದ ಸೇವೆಯನ್ನು ಸಲ್ಲಿಸಿ ಅಧಿಕಾರಿಗಳಿಂದ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ವೈದ್ಯಾಧಿಕಾರಿ ಡಾ. ಅಮರತ ಹರಿದಾಸ ಮಾತನಾಡಿ, ಪ್ರತಿನಿತ್ಯ ನೀವು ಜಿಪಿಎಸ್ ೋಟೋಗಳನ್ನು ಗ್ರುಪ್ ಗೆ ಶೇರ್ ಮಾಡಬೇಕು. ಅಂಗನವಾಡಿ ಶಾಲೆ, ವಸತಿ ನಿಲಯ, ಗ್ರಾಮ ಪಂಚಾಯತಿಗೆ ಭೇಟಿ ಮಾಡಿ ವರದಿ ಸಿದ್ದಪಡಿಸಬೇಕು. ಬೇಸಿಗೆಯಲ್ಲಿ ಬಿಸಿಲಿನ ಪ್ರಕರತೆ ಹೆಚ್ಚಾಗಿದ್ದು ಶುದ್ಧ ನೀರು ಆಹಾರವನ್ನು ಮತ್ತು ಮನೆಯಲ್ಲಿಯೇ ತಯಾರಿಸಿದ ಶರಬತ್ ಮತ್ತು ಹಣ್ಣುಗಳನ್ನು ಸೇವಿಸಲು ಮತ್ತು ಒಆರ್ಎಸ್ ಸೇವನೆಯ ಮಹತ್ವದ ಬಗ್ಗೆ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಶಿದ್ದಪ್ಪ ಲಿಂಗದಾಳ, ಅಜಯಕುಮಾರ ಕಲಾಲ, ವೈ. ಎನ್. ಕಡೇಮನಿ, ವಿನಾಯಕ ಬಡಿಗೇರ. ಲ$್ಮ ಭಜಂತ್ರಿ, ಅತಾ ಇಳಿಗೇರ, ಚಂದ್ರಕಲಾ ತೋಟದ ಮುಂತಾದವರು ಇದ್ದರು.