

ಗದಗ: ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟಿçÃಯ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಆಂದೋಲನದ ಯಶ್ವಗೊಳಿಸಬೇಕೆಂದು ತಾ.ಪಂ ಸಹಾಯಕ ನಿರ್ದೇಶಕರಾದ ಅರ್.ವ್ಹಿ..ದೊಡ್ಡಮನಿ ಹೇಳಿದರು.
ಶಿರಹಟ್ಟಿ ತಾಲೂಕ ಪಂಚಾಯತ ಸಭಾಂಗಣದಲ್ಲಿ ಶಿರಹಟ್ಟಿ ಮತ್ತು ಲಕ್ಷೆ÷್ಮÃಶ್ವರ ತಾಲೂಕಿನ ಸಂಜೀವಿನಿ ಯೋಜನೆ ಒಕ್ಕೂಟಗಳ ಪದಾಧಿಕಾರಿಗಳಿಗೆ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟಿçÃಯ ಅಭಿಯಾನದ ತಾಲೂಕ ಮಟ್ಟದ ಕಾರ್ಯಕ್ರಮ ಉದ್ಘಾಟಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಅನ್ನಪೂರ್ಣ ಹಳ್ಳಿಗುಡಿ ಅವರು ಮಹಿಳೆಯರು ಮತ್ತು ಮೇಲೆ ನಡೆಯುತ್ತಿರುವ ಲಿಂಗತ್ವ ಆಧಾರಿತ ದೌರ್ಜನ್ಯದ ವಿರುದ್ಧ ಪರಿಹಾರ ಕ್ರಮಗಳ ಮತ್ತು ಇಲಾಖೆಯಲ್ಲಿ ಸಿಗುವ ಸೇವೆ ಮತ್ತು ಉಚಿತ ಕಾನೂನಗಳ ವಿವರವಾಗಿ ಮಾಹಿತಿಯನ್ನು ನೀಡಿದರು.
ಈ ಸಮಯದಲ್ಲಿ ತಾಲೂಕ ಯೋಜನಾಧಿಕಾರಿ ಹನುಮೇಶ ಕೊಂಡಿಕೊಪ್ಪ, ಸಂಜೀವಿನಿ ಯೋಜನೆ ತಾಲೂಕ ವ್ಯವಸ್ಥಾಪಕ ಮಾರುತಿ ಕೊಡ್ಲಿ ಮತ್ತು ತಾಲೂಕ ವ್ಯವಸ್ಥಾಪಕ ವಿರೂಪಾಕ್ಷಿ,ಎಸ್.ಕೆ ಮತ್ತು ತಾಲೂಕ ಎಂ.ಐ.ಎಸ್ ಸಂಯೋಜಕಿ ಮೈತ್ರಾ ಶತರಡ್ಡಿ ಮತ್ತು ಉಭಯ ತಾಲೂಕಿನ ಒಕ್ಕೂಟದ ಪಧಾಧಿಕಾರಿಗಳು ಮತ್ತು ಸಮುದಾಯದ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.