ನಗರದಲ್ಲಿ ಶುಕ್ರವಾರ ಸುದ್ದೊಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೋಕ್ಷವಾಗಿ ಬಿಜೆಪಿ ಮುಖಂಡರ ಮೇಲೆ ಹರಿಹಾಯ್ದರು. ಇಷ್ಟು ದಿನ ಸುಮ್ಮನಿದ್ದ ಬಿಜೆಪಿ ಮುಖಂಡರು ಈಗಲೇ ಎತಕ್ಕೆ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಪ್ರಕರಣ ಆರಂಭದಲ್ಲೇ ಏಕೆ ಬಾಯಿ ಬಿಡಲಿಲ್ಲ. ಈಗ ರಾಜಕಾರಣ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.